ಗುಲ್ಬರ್ಗಾ

ಇಳೆಗೆ ದೂರ: ಮೃತರ ತಾಂಡಾಗಳಿಗೆ ಉಸ್ತುವಾರಿ ಸಚಿವ, ಅಧಿಕಾರಿಗಳ ಭೇಟಿ

Published On :

ಹುಣಸಗಿ: ಶನಿವಾರ ನಸುಕಿನ ಜಾವ, ಸುರಪುರ ತಾಲೂಕಿನ ಉಪ್ಪಲದಿನ್ನಿ ತಾಂಡಾ, ಯರಕಿಹಾಳ ತಾಂಡಾ, ಐಬಿತಾಂಡಾ, ಮಾವಿನಗಿಡದ ತಾಂಡಾ, ಜುಮಾಲಪುರ ತಾಂಡಾ, ಸೇರಿದಂತೆ 22ಜನ ಮೃತಪಟ್ಟಿದ್ದು, 12 ಜನ ತೀವ್ರ ಗಾಯಗೊಂಡಿದ್ದು, ಬೆಳಗಾಂವಿ ಮತ್ತು ಬೈಲಹೊಂಗಲದ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸುದ್ದಿ ತಿಳಿದು ಆಘಾತಕೊಳ್ಳಗಾಗಿದ್ದಾರೆ.
ಮಧ್ಯಾಹ್ನ ಉಪ್ಪಲದಿನ್ನಿ ಗ್ರಾಮಕ್ಕೆ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ್ ಚಿಂಚನಸೂರ್ ಭೇಟಿ ನೀಡಿ, ನಾನು ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದು, ಮೃತರಿಗೆ 1 ಲಕ್ಷ ಪರಿಹಾರ ಈಗಾಗಲೇ ಘೋಷಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಮಹಾರಾಷ್ಟ್ರಕ್ಕೊ, ಗೋವಾಕ್ಕೊ: ಹುಣಸಗಿಯಿಂದ ನಾರಾಯಣಪುರವರೆಗೆ 40ಕ್ಕೂ ಹೆಚ್ಚು ತಾಂಡಾಗಳಿದ್ದು, ವಿಶೇಷವಾಗಿ ಒಂದು ಎಕರೆ, ಎರಡು ಎಕರೆ ಜಮೀನು ಹೊಂದಿದ ಅಥವಾ ಭೂಮಿ ಇರದ ಲಂಬಾಣಿ ಕುಟುಂಬಗಳು ಅನೇಕ ದಶಕಗಳಿಂದ ಕೂಲಿ ಅರಸಿ ಮಹಾರಾಷ್ಟ್ರಕ್ಕೊ, ಗೋವಾಕ್ಕೊ ಹೋಗುವುದು ಸಾಮಾನ್ಯವಾಗಿತ್ತು. ಮಳೆಗಾಲ ಆರಂಭವಾಗುವ ಹೊತ್ತಿಗೆ ತಾಂಡಾಗಳು ಜನರಿಂದ ತುಂಬಿರುತ್ತವೆ. ಯಾವಾಗ ದಸರಾ, ದೀಪಾವಳಿ, ಕೊಡೇಕಲ್ಲ ಜಾತ್ರೆಯ ನಂತರ, ಗುಳೆ ಹೋಗಲು ಆರಂಭಿಸುತ್ತಾರೆ. ಹುಣಸಗಿ, ತಾಳಿಕೋಟಿ, ನಾರಾಯಣಪುರ, ಮುದ್ದೇಬಿಹಾಳಗಳಿಂದ ಪ್ರತಿನಿತ್ಯ 40ಕ್ಕೂ ಹೆಚ್ಚು ಬಸ್ಸುಗಳು ವಾಸ್ಕೋ, ಪಣಜಿ, ಸಾತಾರ, ರತ್ನಗಿರಿ, ಸವಾಂತವಾಡಿ, ಪುಣೆ, ಮುಂಬೈ, ಕೊಲ್ಹಾಪುರಗಳಿಗೆ ವಲಸೆ ಹೋಗುತ್ತಾರೆ. ಇದರಿಂದ ತಾಂಡಾಗಳಲ್ಲಿಯ ಪ್ರಾಥಮಿಕ ಶಾಲೆಗಳ ಮಕ್ಕಳ ಹಾಜರಾತಿ, ದಾಖಲಾತಿಯಲ್ಲಿ ಅಜಗಜಾಂತರ ವ್ಯತ್ಯಾಸವಿರುವುದು ಗಮನಿಸಬಹುದಾಗಿದೆ.
ಬದುಕು ಕಟ್ಟಿಕೊಳ್ಳಲು ಸಾಧ್ಯ: ಈ ತಾಂಡಾಗಳಲ್ಲಿ ಅಪಘಾತದಲ್ಲಿ 16 ಜನ ಮೃತಪಟ್ಟಿದ್ದು, ಇದರಲ್ಲಿ ಮಕ್ಕಳು ಕೂಡಾ ಸೇರಿದ್ದಾರೆ. 27 ಮನೆಗಳ 48 ಕುಟುಂಬ ಹೊಂದಿದ್ದು, ಇಲ್ಲಿಯವರೆಗೆ ಸರ್ಕಾರಿ ಪ್ರೌಢಶಾಲೆಯ ಒರ್ವ ಮುಖ್ಯೋಪಾಧ್ಯಯರು, ಬೆರಳಣಿಕೆಯಷ್ಟು ಪದವೀಧರರು, ಪಿಯುಸಿ, ಎಸ್‌ಎಸ್‌ಎಲ್‌ಸಿ ಪಾಸಾಗಿದ್ದಾರೆ. ಆ ಊರಿನ ಹಿರಿಯರು ಹೇಳುವಂತೆ, ತಾಂಡಾಗಳ ಗುಳೆ ತಪ್ಪಿಸುವುದು, ಶುದ್ಧ ಕುಡಿವ ನೀರು, ಉತ್ತಮ ರಸ್ತೆ, ಕೈತುಂಬಾ ಕೆಲಸ ಇಷ್ಟಾದರೆ, ನಮ್ಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ತಾಲೂಕು ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ, ಪಿಎಸ್‌ಐಗಳಾದ ಸುನೀಲಕುಮಾರ, ಮಂಜುನಾಥ, ಕಂದಾಯ ಸಿಬ್ಬಂದಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.