ಗುಲ್ಬರ್ಗಾ

ಸಿಎಂ ಭೇಟಿಗೆ ಬಂಜಾರ ಧುರೀಣರ ದೌಡು

Published On :

ಹುಣಸಗಿ: ಉಪ್ಪಲದಿನ್ನಿಯಲ್ಲಿ ನಡೆದ ರಸ್ತೆ ದುರಂತದಲ್ಲಿ ಮಡಿದವರ ಕುಟುಂಬಕ್ಕೆ, ಬದುಕುಳಿದು ಅನಾಥರಾದ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸುವಂತೆ ಒತ್ತಾಯಿಸಲು ಗುರುಮಿಠಕಲ್ಗೆ ತೆರಳಲು ಬಂಜಾರ ಧುರೀಣರು ತೀರ್ಮಾನಿಸಿದ್ದಾರೆ. ಗುರುಮಿಠಕಲ್ಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಕುರಿತಂತೆ ಆಗ್ರಹಿಸಲಿದ್ದಾರೆ. ತಾಲೂಕು ಅಧ್ಯಕ್ಷ ನಿಂಗಾನಾಯಕ ಚವ್ಹಾಣ ಕಕ್ಕೇರಿ ಮಾತನಾಡಿ, ಉಪ್ಪಲದಿನ್ನಿ ತಾಂಡಾದಲ್ಲಿ ಇರುವ ಇಪ್ಪತ್ತೇಳು ಮನೆಗಳ ಪೈಕಿ ಬಹುತೇಕರು ನಿರ್ಗತಿಕರಾಗಿದ್ದು, ಕೆಲವು ಮನೆಗಳಲ್ಲಿ ಕೇವಲ ಆರು ವರ್ಷದ ಮಗು, ಒಬ್ಬ ಬಾಲಕಿ ಉಳಿದಿದ್ದಾರೆ. ಈ ಹಿಂದೆ ಸರ್ಕಾರಗಳು ರಸ್ತೆ ದುರಂತ ಸಂದರ್ಭದಲ್ಲಿ ಐದು ಲಕ್ಷ ರು. ಪರಿಹಾರ ನೀಡಿದೆ. ಸರ್ಕಾರ ಉಳಿದ ಇಲಾಖೆಗಳ ಎಲ್ಲ ನೆರವು ನೀಡಿದೆ. ಆದರೆ ಈಗಿನ ಸರಕಾರ ದಲಿತರ, ಹಿಂದುಳಿದವರ, ಅಹಿಂದ ಎಂದು ಹೇಳಿಕೊಳ್ಳುತ್ತಾ ಬಡವರ ಸಂಕಷ್ಟಕ್ಕೆ ಇನ್ನಷ್ಟು ಬರೆಯನ್ನು ಎಳೆದಿದೆ. ಕಾರ್ಮಿಕ ಮಂತ್ರಿ ಪರಮೇಶ್ವರ ನಾಯಕ ಸಂತಾಪವನ್ನು ಕೂಡಾ ಹೇಳಿಲ್ಲ. ಅವರ ವರ್ತನೆ ತೀವ್ರ ಬೇಸರ ತಂದಿದೆ. ಇದು ಖಂಡನೀಯ ಎಂದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.