ಕಂಪ್ಯೂಟರ್ ಆಪರೇಟರ್‌ಗಳ ಪ್ರತಿಭಟನೆ
ಶಹಾಪುರ: ತಾಲೂಕಿನಾದ್ಯಾಂತ ಉದ್ಯೋಗ ಖಾತ್ರಿ ವೈಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಸ್ಥಳೀಯ ಗ್ರಾಪಂ.ಗಳ ಕೆಲವರು ಮಾನಸಿಕ ಕಿರುಕುಳ ನೀಡುತ್ತಿದ್ದು ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಕಂಪ್ಯೂಟರ್ ಆಪರೇಟರ್‌ಗಳು ಕೆಲಸ ಸ್ಥಗಿತಗೊಳಿಸಿ ತಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ದಾಖಲಾತಿಗಳಿದ್ದರೂ ಗ್ರಾಪಂ ಜನಪ್ರತಿನಿಧಿಗಳು ಅನುಚಿತವಾಗಿ ನಡೆದುಕೊಳ್ಳುತ್ತಿದ್ದಾರೆ. ಕೆಲವು ಗ್ರಾಪಂ.ಗಳಲ್ಲಿ ಕಂಪ್ಯೂಟರ್ ಆಪರೆಟರ್ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿವೆ. ಕಂಪ್ಯೂಟರ್ ಸಹಾಯಕರಿಗೆ ಜಿಪಂ ಅಧಿಕಾರಿಗಳು ಮಾರ್ಗಸೂಚಿಗಳನ್ನು ನೀಡಬೇಕು, ರಕ್ಷಣೆ ಕೊಡಬೇಕು ಎಂದು ಶಹಾಪುರ ತಾಲುಕು ಕಂಪ್ಯೂಟರ್ ಆಪರೇಟರ್‌ಗಳ ಸಂಘವು ತಾಪಂ ಇಒಗೆ ಮನವಿ ಪತ್ರ ನೀಡಿ ಒತ್ತಾಯಿಸಿತು.
ನಿಯಮಗಳನ್ನು ರಚನೆ ಮಾಡದೆ ಇದ್ದರೇ ಕೆಲಸ ಕಾರ್ಯಗಳನ್ನು ಸ್ಥಗಿತ ಮಾಡಿ ಧರಣಿ ಮಾಡುತ್ತೇವೆ. ನ.23ರ ವರಗೆ ಕೆಲಸಗಳಿಗೆ ಹಾಜರಾಗುವುದಿಲ್ಲ ಸಹಾಯಕರು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂಧರ್ಭದಲ್ಲಿ ತಾಲೂಕಾ ಪದಾಧಿಕಾರಿಗಳಾದ ಯಲ್ಲಪ್ಪ ಗುಜ್ಜಲ್ ಭೀಮರಾಯ ವನದುರ್ಗ, ಪವನ ಕುಲ್ಕರ್ಣಿ, ದೇವರಾಜ ಹೋತಪೇಟ, ನಾಗಾರಜ ಗುರಿಕಾರ, ನಾಗರಾಜ ಹಯ್ಯಾಳ, ಶಿವಲೀಲಾ ಹಣಮಂತ, ದೇವಪ್ಪ ಬಸವರಾಜ ಮದ್ರಿಕಿ, ಸಾಯಿಕುಮಾರ ಅಣಬಿ ಸೇರಿದಂತೆ ತಾಲೂಕಿನ ಎಲ್ಲ ಕಾರ್ಯಕಾರಿ ಸಾಹಾಯಕರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

