ಹುಣಸಗಿ ಅಲ್ಲಲ್ಲಿ ಕನಕದಾಸ ಜಯಂತಿ
ಹುಣಸಗಿ: ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗ್ರಾಮದ ಮುಖಂಡರು, ಅಭಿಮಾನಿಗಳು ಕನಕದಾಸದ ವೃತ್ತಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಪಟ್ಟಣದ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಕನಕದಾಸ ಜಯಂತಿ ಆಚರಿಸಲಾಯಿತು. ಈ ಕುರಿತು ಮಾತನಾಡಿದ ಗ್ರಾಪಂ ಅಧ್ಯಕ್ಷ ಸುರೇಶ ನೀರಲಗಿ ದಾಸ ಶ್ರೇಷ್ಠರಲ್ಲಿ ಕನದಾಸರು ಒಬ್ಬರು. ಹರಿದಾಸ ಸಾಹಿತ್ಯ ಮತ್ತು ಜನರಲ್ಲಿಯ ಜಾತಿ ನಿರ್ಮೂಲನೆ ಮಾಡುವಲ್ಲಿ ಶ್ರಮಿಸಿದವರು. ಕುಲಕುಲವೆಂದು ಹೊಡೆದಾಡಬೇಡಿ ನಿಮ್ಮ ಕುಲವ ನೆಲಯ ಬಲ್ಲಿರಾ ಎಂದು ಜನರನ್ನು ಬಡಿದೆಬ್ಬಸಿದವರು ಎಂದು ಹೇಳಿದರು. ಅಭಿವೃದ್ಧಿ ಅಧಿಕಾರಿ ಬಸವರಾಜ ತಂಬಾಕಿ ಸೇರಿದಂತೆ ಇತರ ಸದಸ್ಯರು ಮುಖಂಡರು ಇದ್ದರು.
ಕಚೇರಿಯಲ್ಲಿ: ಜೆಸ್ಕಾಂ ಶಾಖಾ ಕಚೇರಿಯಲ್ಲಿ ನಡೆದ ಕನಕಜಯಂತಿಯಲ್ಲಿ ಶಾಖಾಧಿಕಾರಿ ಶ್ರೀನಿವಾಸ ಪ್ರಸಾದ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮಹಮ್ಮದ ಮೈಬೂಬ, ಲೈನಮನ್ ಮತ್ತು ಸಿಬ್ಬಂದಿ ಹಾಜರಿದ್ದರು. ವಜ್ಜಲ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಕನಕ ಜಯಂತಿಯಲ್ಲಿ ಕಾರ್ಯದರ್ಶಿ ಬಸವರಾಜ ದೇವಪುರ ಪೂಜೆಸಲ್ಲಿಸಿ ಮಾತನಾಡಿದರು. ಸದಸ್ಯ ಕರೆಪ್ಪ ದೊಡ್ಡಮನಿ, ಶಿವಲಿಂಗಪ್ಪ ಭಜನಿ, ಯಂಕಣ್ಣ ದೊರೆ, ಶಿವಪ್ಪ ಹರಿಜನ ಇದ್ದರು. ಬಲಶೆಟ್ಟಿಹಾಳ ಗ್ರಾಮದಲ್ಲಿ ಗ್ರಾಮದ ಮುಖಂಡರಿಂದ ಕನಕವೃತ್ತಕ್ಕೆ ತೆರಳಿ ಕನಕದಾಸ ಮೂರ್ತಿಗೆ ಪೂಜೆ ಸಲ್ಲಿಸಿಲಾಯಿತು.
ಬೆನಕನಹಳ್ಳಿ: ಶಾಲೆಯಲ್ಲಿ ನಡೆದ ಕನಕಜಯಂತಿ ಅಂಗವಾಗಿ ಎಸ್‌ಡಿಎಂಸಿ ಅಧ್ಯಕ್ಷ ಪ್ರಭುಗೌಡ ಪಾಟೀಲ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅಧ್ಯಕ್ಷತೆಯನ್ನು ಮುಖ್ಯಗುರುಗಳಾದ ಅಮೀನಸಾ ಕನಕದಾಸರ ಕುರಿತು ಮಾತನಾಡಿದರು. ಎಸ್. ಎನ್. ನಾಯ್ಕೋಡಿ, ಜಿ.ಎಂ. ಬಡಿಗೇರ, ಇಸ್ಮಾಯಿಲ್, ಬಸಪ್ಪ, ರವಿಕುಮಾರ, ಹರಿಲಾಲ ಚವ್ವಾಣ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

