ಕೂರಿಗೆ ಬತ್ತ: ಕಾಲುವೆ ಕೊನೆಯ ರೈತರಿಗೆ ವರದಾನ
ಹುಣಸಗಿ: ನೇರವಾಗಿ ಬತ್ತವನ್ನು ಕೂರಿಗೆಯಿಂದ ಬಿತ್ತುವುದರಿಂದ ನಾಟಿ ಪದ್ಧತಿಗಿಂತ ಎಕರೆಗೆ 8000 ದಂತೆ ಬೇಸಾಯದ ಖರ್ಚನ್ನು ಉಳಿಸಬಹುದಲ್ಲದೇ, ಶೇ.30ರಷ್ಟು ಕಡಿಮೆ ನೀರು ಮತ್ತು ಗೊಬ್ಬರ ಒದಗಿಸಿ ನಾಟಿ ಮಾಡಿದ ಬತ್ತದಷ್ಟೇ ಇಳುವರಿಯನ್ನು ರೈತರು ಪಡೆಯುತ್ತಿದ್ದಾರೆಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಶಿಕ್ಷಣ ನಿರ್ದೇಶಕ ಡಾ. ಎಸ್.ಜಿ. ಪಾಟೀಲ್ ವಿವರಿಸಿದರು.
ಸಮೀಪದ ಕಾಮನಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೃಷ್ಣಾನಗರ ಕ್ಯಾಂಪನ್ನು ವೆಂಕಟೇಶ್ವರರಾವ ಇವರ ಹೊಲದಲ್ಲಿ ಕೂರಿಗೆ ಭತ್ತದ ಕ್ಷೇತ್ರೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾರ್ಮಿಕರ ಸಮಸ್ಯೆ ಹೆಚ್ಚು: ಕೃಷಿ ಮಹಾವಿದ್ಯಾಲಯ, ಭೀಮರಾಯನಗುಡಿ, ಕೃಷಿ ಸಂಶೋಧನಾ ಕೇಂದ್ರ ಮಾಳನೂರ ಮತ್ತು ಸಿಮೆಂಟ್ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾಲುವೆ ಕೊನೆಯ ಭಾಗದ ರೈತರಿಗೆ ಸಮಯಕ್ಕೆ ಸರಿಯಾಗಿ ನೀರು ಸಿಗುವುದಿಲ್ಲ ಮತ್ತು ಎಲ್ಲ ರೈತರು ಏಕ ಕಾಲದಲ್ಲಿ ನಾಟಿ ಮಾಡಲು ಪ್ರಯತ್ನಿಸುವುದರಿಂದ ಕಾರ್ಮಿಕರ ಸಮಸ್ಯೆ ಹೆಚ್ಚಾಗಿರುತ್ತದೆ. ಇದರಿಂದಾಗಿ ಬೇಡಿಕೆ ಹೆಚ್ಚಾಗುವುದು. ಕೂರಿಗೆ ಬತ್ತ ಅಳವಡಿಸಿಕೊಂಡು ಬಿತ್ತುವುದರಿಂದ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದೆಂದು ರಾಯಚೂರು ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಅಶೋಕ ಹಳೆಪ್ಯಾಟಿ ತಿಳಿಸಿಕೊಟ್ಟರು. ಕೂರಿಗೆ ಬತ್ತದ ಬೇಸಾಯದಲ್ಲಿ ಕಳೆ ನಿರ್ವಹಣೆ ಬಗ್ಗೆ ಮಾಳನೂರ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ. ಎಸ್.ಎ. ಚನ್ನಬಸವಣ್ಣ ವಿಶೇಷ ಉಪನ್ಯಾಸ ನೀಡಿದರು.
ರೈತರೊಂದಿಗೆ ಅಭಿಪ್ರಾಯ: ಕೂರಿಗೆ ಬತ್ತದ ಬೇಸಾಯವನ್ನು ಅಳವಡಿಸಿಕೊಂಡು ಯಶಸ್ವಿಯಾಗಿದ್ದ ರೈತರಾದ ಶ್ರೀನಿವಾಸ, ಅಮರೇಶ ಹಿರೇಮಠ ಹಾಗೂ ಶಿವರಾಮಕೃಷ್ಣ ರೈತರೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಮನಟಗಿ ಗ್ರಾಪಂ ಅಧ್ಯಕ್ಷರಾದ ಅಮರಮ್ಮ ಹವಾಲ್ದಾರ ಇವರ ಅಧ್ಯಕ್ಷತೆ ವಹಿಸಿದ್ದರು. ಸಿದ್ದಣ್ಣ ಮಾಳಿ, ಪ್ರಗತಿಪರ ರೈತರಾದ ರುದ್ರೇಶಗೌಡ ಹಾಗೂ ಸಿಮೆಂಟ್ ಸಂಸ್ಥೆಯ ಯೋಗೇಶಕುಮಾರ ಸಿಂಗ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಡಾ. ಪಿ.ಎಚ್. ಕುಚನೂರ ಸ್ವಾಗತಿಸಿದರು. ಎಚ್. ರಾಜಕುಮಾರ ವಂದಿಸಿದರು. ಗ್ರಾಮದ ಸುತ್ತಮುತ್ತಲಿನ ರೈತರು ಈ ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

