ಮಠದಲ್ಲ್ಲಿ ಇಂದು ಲಕ್ಷ ದೀಪೋತ್ಸವ
ಗುಲ್ಬರ್ಗ: ಬಿದ್ದಾಪುರ ಕಾಲೋನಿಯ ರಾಯರ ಮಠದಲ್ಲಿ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ಜಗದ್ಗುರು ಮಧ್ವಾಚಾರ್ಯ ಮೂಲಮಹಾಸಂಸ್ಥಾನದ ಪೀಠಾಧಿಪತಿ ಸುಯತೀರ್ಥ ತೀರ್ಥರ ಶ್ರೀಪಾದರ ಮತ್ತು ಅವರ ಉತ್ತರಾಧಿಕಾರಿ ಸುಯದೇಂದ್ರ ತೀರ್ಥ ಪಾದರ ಅನುಗ್ರಹದ ಮೇರೆಗೆ ಪಂಡಿತರಾದ ರಾಮಾಚಾರ್ಯ ಅವದಾನಿ ಅವರು ದೀಪೋತ್ಸವಕ್ಕೆ ಚಾಲನೆ ನೀಡಿದರು. ವ್ಯವಸ್ಥಾಪಕ ನವಲಿ ಕೃಷ್ಣಾಚಾರ್ಯ, ವ್ಯಾಸರಾಜ ಸಂತೆಕೆಲ್ಲೂರ, ರಾಚೇಂದ್ರ ತೆಲ್ಲೂರ್, ಮುದ್ದು ಭೀಮಾಚಾರ್ಯ, ನೂರಾರು ಮಹಿಳೆಯರು ಇದ್ದರು. ಭಜನೆ, ಸ್ವಸ್ತಿ ವಾಚನ ನಡೆಯಿತು.
ಇಂದು ನೇತ್ರ ಚಿಕಿತ್ಸಾ ಶಿಬಿರ
ಗುಲ್ಬರ್ಗ: ಹೈ-ಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ನೇತ್ರ ಚಿಕಿತ್ಸಾ ಶಾಸ್ತ್ರ ವಿಭಾಗ ಹಾಗೂ ಜರ್ಮನಿಯ ಹಮಾರಾ ಬಂಧನ ಸಂಸ್ಥೆಯ ಸಹಯೋಗದಲ್ಲಿ ನ.25 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2.30 ರವರೆಗೆ ಆಳಂದ ತಾಲೂಕಿನ ನರೋಣಾ ಗ್ರಾಮದಲ್ಲಿರುವ ಸಮುದಾಯ ಭವನದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶದ ನಾಗರಿಕರು ಈ ಉಚಿತ ನೇತ್ರ ಚಿಕಿತ್ಸಾ ಶಿಬಿರದ ಪ್ರಯೋಜನ ಪಡೆದುಕೊಳ್ಳಲು ಕೋರಲಾಗಿದೆ.
ಹರಿಕಥಾಮೃತಸಾರ ಪ್ರವಚನ ಇಂದಿನಿಂದ
ಗುಲ್ಬರ್ಗ: ನಗರದ ಜೇವರ್ಗಿ ಕಾಲೋನಿಯ ರಾಯರ ಮಠದಲ್ಲಿ ನ.25ರಿಂದ ಡಿ.1 ರವರೆಗೆ ಸಂಜೆ 6 ರಿಂದ 7 ರವರೆಗೆ ರಘೋತ್ತಮಾಚಾರ್ಯ ನಾಗಸಂಪಿಗೆ ಅವರಿಂದ ಹರಿಕಥಾಮೃತಸಾರದ ಪ್ರವಚನ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂಯೋಜಕ ನವಲಿ ಕೃಷ್ಣಾಚಾರ್ಯರು ಕೋರಿದ್ದಾರೆ.
ಹಲವರ ಬಂಧನ
ಗುಲ್ಬರ್ಗ: ನಗರದ ವಿವಿಧೆಡೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವರನ್ನು ಬಂಧಿಸಿ, ಕದ್ದ ಮಾಲು ವಶಪಡಿಸಿಕೊಂಡಿದ್ದಾರೆ. ಮಹಬೂಬ್ ನಗರದ ಯೂಸೂಫ್ ಬಾಬಾ, ಮಹ್ಮದ್ ಖಾಜಾ ಹಾಗೂ ಅಬ್ದುಲ್ ಖಲೀಮ್, ಖಮರ್ ಕಾಲೋನಿಯ ರಸೂಲ್ ನಬಿಸಾಬ್ ಬಂಧಿತರು. ನಗರದ ಅಬ್ದುಲ್ ಖಾದರ್, ಫರ್ಜಾನಾ ಬೇಗಂ, ಮಿಲ್ಲತ್ ನಗರದಲ್ಲಿ ಶಫ್ ಅಹ್ಮದ್ ಶಬ್ಬಿರ್ ಅಹ್ಮದ್, ರಾಜೇಶ್ ಎಂಬವರ ಮನೆಗಳಲ್ಲಿ ಹಲವು ವಸ್ತುಗಳನ್ನು ಕಳವು ಮಾಡಲಾಗಿತ್ತು.
ವಿದ್ಯಾರ್ಥಿ ನಾಪತ್ತೆ
ಗುಲ್ಬರ್ಗ: ಮನೆಯ ಅಲಮಾರಿನಲ್ಲಿಟ್ಟ ಹಣವುನ್ನು ಕದ್ದು ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಘಟನೆ ನಗರದ ಎಂಎಸ್ಕೆ ಮಿಲ್ ಬಡಾವಣೆಯ ಎಕ್ಬಾಲ್ ಕಾಲೋನಿಯಲ್ಲಿ ನಡೆದಿದೆ. ನಗರದ ನ್ಯೂ ನೋಬಲ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಎಕ್ಬಾಲ್ ಕಾಲೋನಿಯ ಅಫಾನ್ ಅಫ್ಜಲ್ ತಂದೆ ಫಯಾಜ್ ಅಫ್ಜಲ್ (15) ಹಣ ಕದ್ದು ಪರಾರಿಯಾದ ವಿದ್ಯಾರ್ಥಿಯಾಗಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

