'ಛಲವಿದ್ದರೆ ಸಾಧಿಸು' ಚಿತ್ರೀಕರಣ
ಕೆಂಭಾವಿ: ಈ ಭಾಗದಲ್ಲಿ ಚಿತ್ರೀಕರಣಕ್ಕೆ ಉತ್ತಮ ಸ್ಥಳಗಳಿದ್ದರೂ ಚಿತ್ರ ತಂಡ ಬೇರೆಡೆಗೆ ಹೋಗುವುದು ವಿಷಾದನೀಯ ಎಂದು ವೀರೇಶ ಟಕ್ಕಳಕಿಯವರು ತಿಳಿಸಿದರು.
ಇಂದಿನ ಪರಿಸ್ಥಿಯಲ್ಲಿ ಮನುಷ್ಯ ಎಷ್ಟೇ ವಿದ್ಯಾವಂತನಾದರೂ ಆರ್ಥಿಕ ಪರಿಸ್ಥಿಯಿಂದ ಯಾವ ಸಾಧನೆಯನ್ನೂ ಮಾಡದೆ ಕುಗ್ಗಿದಾಗ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವ ಸಂದೇಶ ಸಾರುವ ಕಥೆ ಚಿತ್ರಕಥೆ ಬರೆದು ತಾವೇ ನಿರ್ದೇಶನ ಮಾಡುತ್ತಿದ್ದಾರೆ. ಈ ಭಾಗದ ನಾವೂ ಯಾರಿಗೂ ಏನೂ ಕಡಿಮೆ ಇಲ್ಲ ಎಂದು ತೋರಿಸುತ್ತಾ ಈಗ ಪಟ್ಟಣದಲ್ಲಿ ಛಲವಿದ್ದರೆ ಸಾಧಿಸು ಚಿತ್ರದ ಚಿತ್ರೀಕರಣ ಮಾಡಲಾಗುತ್ತಿದೆ ಎಂದರು.
ಈ ಚಿತ್ರದ ಚಿತ್ರೀಕರಣದಲ್ಲಿ ಈ ಭಾಗದ ಅನೇಕ ಕಲಾವಿದರಿಗೆ ಅವಕಾಶ ಲಭಿಸಿದೆ. ಈ ಚಿತ್ರೀಕರಣ ಇನ್ನೂ ಹತ್ತು ಹದಿನೈದು ದಿನಗಳ ಕಾಲ ನಡೆಯುತ್ತೆ. ಈ ಚಿತ್ರೀಕರಣದಲ್ಲಿ ಕಲಾವಿದರಾದ ವೈಜನಾಥ ಎಸ್. ಬೀರಾದಾರ, ನಿಂಬೆಕಾಯಿ ಪರಶುರಾಮ, ಬಾಲ ಕಲಾವಿದೆ ವಾಣಿ ಕುಲಕರ್ಣಿ ಹಾಗೂ ಸಹ ಕಲಾವಿದರು ಭಾಗವಹಿಸಿದ್ದಾರೆ ಎಂದು ಚಿತ್ರದ ನಿರ್ದೇಶಕ ವೀರೇಶ ಟಕ್ಕಳಕಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

