ಗುಲ್ಬರ್ಗಾ

ಉದ್ಯೋಗ ಖಾತ್ರಿ ಅನುಷ್ಠಾನದಲ್ಲಿ ರಾಜ್ಯಕ್ಕೆ ಹಿನ್ನಡೆ: ಶಾಸಕ ಜಾದವ್

Published On :

ಚಿಂಚೋಳಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಾಧನೆಯಲ್ಲಿ ರಾಜ್ಯ ಅತೀ ಹಿಂದುಳಿದಿದೆ ಎಂದು ಶಾಸಕ ಡಾ. ಉಮೇಶ ಜಾಧವ ತಿಳಿಸಿದರು.
ತಾಲೂಕಿನ ಪೋಲಕಪಳ್ಳಿ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಆಟದ ಮೈದಾನ ಕಾಮಗಾರಿಯ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲೂಕಿನ ಅನೇಕ ಗ್ರಾಮಗಳಲ್ಲಿರುವ ಆಟಗಾರರು ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಆಟದ ಮೈದಾನವಿರಲಿಲ್ಲ. ಬಡ ಮತ್ತು ರೈತರ ಮಕ್ಕಳ ಕ್ರೀಡಾ ಪ್ರತಿಭೆಯನ್ನು ಹೆಚ್ಚಿಸಿಕೊಳ್ಳಲು ನರೇಗಾ ಯೋಜನೆ 10 ಲಕ್ಷ ವೆಚ್ಚದಲ್ಲಿ ಆಟದ ಮೈದಾನ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಆಟದ ಮೈದಾನಗಳಿಗೆ 150 ಲಕ್ಷ ಮಂಜೂರು: ತಾಪಂ ಇಒ ಜಗದೇವ ಬೈಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನ ಪೋಲಕಪಳ್ಳಿ, ರುಮ್ಮನಗೂಡ, ಚಿಮ್ಮನಚೋಡ, ಗಡಿಕೇಶ್ವಾರ, ಕುಂಚಾವರಂ, ಶಾದೀಪುರ, ಕೋಡ್ಲಿ, ನಿಡಗುಂದಾ, ಕೆರೋಳಿ, ರಟಕಲ್, ಕಲ್ಲೂರ, ಬುರುಗಪಳ್ಳಿ, ರುದನೂರ, ಗೋಪುನಾಯಕ ತಾಂಡಾ, ಸುಲೇಪೇಟ್ ಮುಂತಾದ ಗ್ರಾಮಗಳ ಸರ್ಕಾರಿ ಶಾಲೆಯ ಆಟದ ಮೈದಾನ ಕಾಮಗಾರಿಗಳಿಗೆ ತಲಾ 10 ಲಕ್ಷ ನರೇಗಾ ಯೋಜನೆ ಅಡಿಯಲ್ಲಿ ಕೈಗೊಳ್ಳಲಾಗುತ್ತಿದೆ. ಒಟ್ಟು 150 ಲಕ್ಷ ಮಂಜೂರಿಗೊಳಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ಸಂಜೀವನ್ ಯಾಕಾಪುರ, ದೀಪಕನಾಗ ಪುಣ್ಯಶೆಟ್ಟಿ, ಗ್ರಾಪಂ ಅಧ್ಯಕ್ಷ ಶಿವರಾಜ ಪಾಟೀಲ್ ಮಾತನಾಡಿದರು. ಪಿಡಿಒ ರಮೇಶ, ಕೆ.ಎಂ.ಬಾರಿ, ರೇವಣಸಿದ್ದಪ್ಪ ಮಾಸ್ಟರ್, ಅಬ್ದುಲ್ ಬಾಸೀತ್, ಆರ್.ಗಣಪತರಾವ, ಅರುಣ ಪವಾರ, ಜಿಪಂ ಎಇಇ ರೇವಣಸಿದ್ದಪ್ಪ ಹಾಗರಗಿ, ಲೋಇ ಎಇಇ ವಿಜಯಕುಮಾರ್ ಚತುರೆ, ಇತರರು ಉಪಸ್ಥಿತರಿದ್ದರು. ಮಾರುತಿ ಮುತ್ತಂಗಿ ಸ್ವಾಗತಿಸಿದರು. ಹಣಮಂತರಾವ ದೊಡ್ಡಮನಿ ನಿರೂಪಿಸಿದರು. ಮಂಜುನಾಥ ಕಲಬುರ್ಗಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.