ಗುಲ್ಬರ್ಗಾ

ಮತದಾನ ಪವಿತ್ರ ಕಾರ್ಯ

Published On :

ಶಹಾಪುರ: ಸ್ಪೀಪ್ ಕಾರ್ಯಕ್ರಮದಡಿ ಮತದಾನ ಹೆಚ್ಚಿಸಲು ಚುನಾವಣಾ ಆಯೋಗ ಹಲವಾರು ಇಲಾಖೆಗಳ ಸಹಯೋಗದೊಂದಿಗೆ ಪಟ್ಟಣದಲ್ಲಿ ಬೈಕ್ ರ್ಯಾಲಿ ಮಾಡುವ ಮೂಲಕ ವಿನೂತನವಾಗಿ ಘೋಷಣೆಗಳನ್ನು ಕೂಗುತ್ತಾ, ಕಡ್ಡಾಯ ಮತದಾನ ನಮ್ಮೆಲ್ಲರ ಜವಾಬ್ದಾರಿ ಎಂಬ ಸಂದೇಶ ಮೂಡಿಸಿದರು.
  ಪಟ್ಟಣದ ಪ್ರೌಢಶಾಲೆ ಮೈದಾನದಲ್ಲಿ ಬೈಕ್ ರ್ಯಾಲಿಗೆ ಚಾಲನೆ ನೀಡಿದ ಸಹಾಯಕ ಚುನಾವಣಾಧಿಕಾರಿ ರಾಮನ ಗೌಡ ಮತದಾನ ಪವಿತ್ರ ಕಾರ್ಯ. ಪ್ರತಿಯೊಬ್ಬರೂ ತಮ್ಮ ಹಕ್ಕು ಚಲಾಯಿಸಬೇಕು ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ಪಟ್ಟಣದಾದ್ಯಂತ ಬೈಕ್ ರ್ಯಾಲಿ ನಡೆಸಲಾಯಿತು. ತಹಸೀಲ್ದಾರ ಡಿ.ವೈ. ಪಾಟೀಲ ಸ್ಪೀಪ್ ಕಮಿಟಿ ಅಧ್ಯಕ್ಷ ನರಸಿಂಗರಾವ್ ಮುತಾಲಿಕ್, ಸಿಡಿಪಿಓ ದೊಡ್ಮನಿ, ಮುಖ್ಯಾಧಿಕಾರಿ ಎ.ಎಸ್. ಕುಂಟೋಜಿ, ಬಿಇಒ ರಾಯಪ್ಪ ರಡ್ಡಿ, ಲಕ್ಷ್ಮೀಶ, ಕಂದಾಯ ಇಲಾಖೆಯ ಸಂಗಮೇಶ ಮದ್ರಿಕಿ ಇತರ ಅಧಿಕಾರಿಗಳು, ನೌಕರ ವರ್ಗದವರು ಉಪಸ್ಥಿತರಿದ್ದರು.


2ನೇ ಸುತ್ತಿನ ತರಬೇತಿಗೆ ಹಾಜರಾಗಿ


ಯಾದಗಿರಿ: ಲೋಕಸಭಾ ಚುನಾವಣೆಗೆ ಸಿಬ್ಬಂದಿಯನ್ನು ನಿಯೋಜಿಸಿ ಅವರಿಗೆ ಮೊದಲನೇ ಸುತ್ತಿನ ತರಬೇತಿ ನೀಡಲಾಗಿದೆ. ಚುನಾವಣೆಗೆ ನಿಯೋಜಿಸಿಕೊಂಡಿರುವ ಸಿಬ್ಬಂದಿಗೆ ಈಗ 2ನೇ ಸುತ್ತಿನ ತರಬೇತಿಯನ್ನು ಏ.10ರಂದು ಆಯೋಜಿಸಲಾಗಿದೆ. ನೇಮಕಾತಿ ಆದೇಶಗಳನ್ನು ಈಗಾಗಲೇ ಜಾರಿ ಮಾಡಲಾಗಿದೆ. ಅಲ್ಲದೇ ಮೊಬೈಲ್‌ಗಳಿಗೆ ಸಂದೇಶ ಕಳುಹಿಸಲಾಗಿದೆ. ಆದೇಶದ ಪ್ರತಿ ತಲುಪುವವರೆಗೆ ಕಾಯದೆ ಎಸ್‌ಎಂಎಸ್ ಸಂದೇಶವನ್ನು ನೇಮಕಾತಿ ಆದೇಶವೆಂದು ಪರಿಗಣಿಸಿ ಎರಡನೇ ಸುತ್ತಿನ ತರಬೇತಿಗೆ ಹಾಜರಾಗಲು ತಿಳಿಸಲಾಗಿದೆ. ಎರಡನೇ ಸುತ್ತಿನ ತರಬೇತಿಯ ಶಿಬಿರ ಅತೀ ಮಹತ್ವದಾಗಿದ್ದು ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ವಿವರಗಳನ್ನು ನೀಡಲಾಗುತ್ತದೆ. ಮೊದಲ ಸುತ್ತಿನ ತರಬೇತಿಗೆ ಹಾಜರಾಗಿದ್ದರೂ 2ನೇ ಸುತ್ತಿನ ತರಬೇತಿಗೆ ಹಾಜರಾಗುವುದು ಕಡ್ಡಾಯ. ಗೈರು ಹಾಜರಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಾನ್‌ಕರ್ ತಿಳಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.