ಕಾಂಗ್ರೆಸ್, ಬಿಜೆಪಿ ಬಂಡವಾಳಶಾಹಿ ಪಕ್ಷ: ಸೋಮಶೇಖರ ಆರೋಪ
ಯಾದಗಿರಿ: ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಬಂಡವಾಳಶಾಹಿಗಳ ಪರ ಹಾಗೂ ಜನವಿರೋಧಿಗಳಾಗಿವೆ ಎಂದು ಕೆ. ಸೋಮಶೇಖರ ಯಾದಗಿರಿ ಹೇಳಿದರು.
ಎಸ್ಯುಸಿಐ(ಸಿ) ಪಕ್ಷದ ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ. ಸೋಮಶೇಖರ ಯಾದಗಿರಿ ಸುರಪುರ ಪಟ್ಟಣದ ಗಾಂಧಿ ವೃತ್ತದಲ್ಲಿ ಸಭೆ ನಡೆಸಿದರು.
ಜನ ಬಂಡವಾಳಶಾಹಿ ಪರವಾದ ಎಲ್ಲ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳನ್ನು ಸೋಲಿಸಬೇಕು. ಬಹುರಾಷ್ಟ್ರೀಯ ಕಂಪನಿಗಳು, ಕಾರ್ಪೋರೇಟ್ ಹಾಗೂ ಏಕಸ್ವಾಮ್ಯ ಮನೆತನಗಳ ಅಣತಿಯ ಮೇರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಗಳನ್ನು ಜಾರಿಗೊಳಿಸುತ್ತಿವೆ. ಆದ್ದರಿಂದ ಸಾರ್ವಜನಿಕ ರಂಗವನ್ನು ಖಾಸಗಿಯವರಿಗೆ ಒಪ್ಪಿಸಲಾಗುತ್ತಿದೆ. ಗಣಿ, ಕೃಷಿಭೂಮಿ, ನದಿ ನೀರುಗಳ ಒಡೆತನ ಹೊಂದಲು ಬಹುರಾಷ್ಟ್ರೀಯ ಕಂಪನಿಗಳಿಗೆ, ಕಾರ್ಪೋರೇಟ್ ಮನೆತನಗಳಿಗೆ ಅನುಮತಿ ನೀಡಲಾಗುತ್ತಿದೆ.
ಉದ್ಯೋಗ ರದ್ದತಿ: ಚಿಲ್ಲರೆ, ಸಗಟು ಮಾರಾಟವನ್ನು ಕೂಡ ಅವರಿಗಾಗಿ ತೆರೆದಿಡಲಾಗಿದೆ. ತತ್ಪರಿಣಾಮವಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮುಚ್ಚುತ್ತಿವೆ. ಉದ್ಯೋಗಗಳ ರದ್ದಾಗುತ್ತಿವೆ. ಶಾಶ್ವತ ಉದ್ಯೋಗಗಳನ್ನು ಗುತ್ತಿಗೆ ಉದ್ಯೋಗಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಕೆಲಸದ ಹೊರೆ ಮತ್ತು ಕೆಲಸದ ಅವಧಿಯನ್ನು ನಿರಂತರ ಹೆಚ್ಚಿಸಲಾಗುತ್ತಿದೆ ಮತ್ತು ಕಾರ್ಮಿಕರ ಎಲ್ಲಾ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ.
ತೆರಿಗೆ: ಇನ್ನೊಂದೆಡೆ ತೆರಿಗೆ ರಿಯಾಯಿತಿ, ತೆರಿಗೆ ಮನ್ನಾ, ಬೇಲ್ಔಟ್ ಪ್ಯಾಕೇಜ್ಗಳ ರೂಪದಲ್ಲಿ ಭಾರಿ ಹಣವನ್ನು ಅರ್ಥಿಕ ಉತ್ತೇಜಕಗಳನ್ನಾಗಿ ಕೈಗಾರಿಕ ಮನೆತನಗಳಿಗೆ ನೀಡಲಾಗುತ್ತಿದೆ. ಇದನ್ನು ಸರಿದೂಗಿಸಲು ಜನ ಕಲ್ಯಾಣ ಕಾರ್ಯಕ್ರಮಗಳನ್ನು ಕಡಿತ ಮಾಡುತ್ತಾರೆ. ಇದಕ್ಕಾಗಿ ತೆರಿಗೆ ಹೆಚ್ಚಳಗಳ ರೂಪದಲ್ಲಿ ಜನ ಸಾಮಾನ್ಯರ ಹೆಗಲಿಗೆ ವರ್ಗಾಯಿಸಲಾಗುತ್ತಿದೆ. ಆದ್ದರಿಂದ ಇಂತಹ ಜನವಿರೋಧಿ ನೀತಿಗಳನ್ನು ಪಾಲಿಸುತ್ತಿರುವ ಎಲ್ಲ ಪಕ್ಷಗಳನ್ನು ಚುನಾವಣೆಯಲ್ಲಿ ಸೋಲಿಸಿ ತಮ್ಮನ್ನು ಗೆಲ್ಲಿಸಬೇಕೆಂದು ಜನರಲ್ಲಿ ಮನವಿ ಮಾಡಿಕೊಂಡರು. ರಾಜ್ಯ ಸಮಿತಿಯ ಸದಸ್ಯರಾದ ಸುನೀತ್ ಕುಮಾರ್ ಟಿ.ಎಸ್, ಜಿಲ್ಲಾ ಸಮಿತಿಯ ಸದಸ್ಯ ಶರಣಗೌಡ ಗೂಗಲ್, ಯಾದಗಿರಿ ಸಮಿತಿಯ ಸದಸ್ಯರಾದ ಗೌರಮ್ಮ ಸಿ. ಕೆ. ವಿಜಯಕುಮಾರ್, ರಾಮು ಬಿ.ಎನ್. ಜಮಾಲ್ ಸಾಬ, ಶರಣು ಜೆ.ಡಿ. ಮುದಕಣ್ಣ, ಸಿದ್ದಣ್ಣಗೌಡ ಮತ್ತಿತರರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

