ಮತದಾನ ದಿನದಂದು ಸಾರ್ವತ್ರಿಕ ರಜೆ
ಗುಲ್ಬರ್ಗ: ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಏಪ್ರಿಲ್ 17ರಂದು ಗುರುವಾರ ರಾಜ್ಯಾದ್ಯಂತ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಚೇರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸ್ವಾಮ್ಯಕ್ಕೆ ಒಳಪಟ್ಟ ಸಂಸ್ಥೆಗಳು, ಸರ್ಕಾರಿ ಹಾಗೂ ಖಾಸಗಿ (ಅನುದಾನಿತ ಹಾಗೂ ಅನುದಾನ ರಹಿತ) ಶಿಕ್ಷಣ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತಿತರ ಸಂಸ್ಥೆಗಳಿಗೆ ಈ ಸಾರ್ವತ್ರಿಕ ರಜೆ ಅನ್ವಯವಾಗಲಿದೆ. ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತಿತರ ಸಂಸ್ಥೆಗಳಲ್ಲಿ ಖಾಯಂ ಅಥವಾ ದಿನಗೂಲಿ ನೌಕರರು ಹಾಗೂ ಕಾರ್ಮಿಕರು ಏಪ್ರಿಲ್ 17ರಂದು ಮತದಾನ ಮಾಡಲು ಅನುಕೂಲವಾಗುವಂತೆ ಎಲ್ಲಾ ನೌಕರರಿಗೆ ಮತ್ತು ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನೀತಿ ಸಂಹಿತೆ ಉಲ್ಲಂಘನೆ: ಅಬಕಾರಿಯ 107 ಪ್ರಕರಣ
ಗುಲ್ಬರ್ಗ: ಅಬಕಾರಿ ಮತ್ತು ಪೊಲೀಸ್ ಇಲಾಖೆಗಳಿಂದ ಏ.11 ರವರೆಗೆ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಒಟ್ಟು 107 ಪ್ರಕರಣಗಳನ್ನು ದಾಖಲಿಸಲಾಗಿದ್ದು, 1832.23 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. 103 ಜನರ ವಿರುದ್ಧ ಎಫ್ಐಆರ್ ದೂರು ದಾಖಲಿಸಲಾಗಿದೆ. ಏಪ್ರಿಲ್ 11ರಂದು ಅಬಕಾರಿ ಇಲಾಖೆಯಿಂದ 4 ಪ್ರಕರಣ ದಾಖಲಿಸಿದ್ದು, 195.74 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಈವರೆಗೆ ದಾಖಲಿಸಿದ ಒಟ್ಟು 107 ಪ್ರಕರಣಗಳ ಪೈಕಿ ಅಬಕಾರಿ ಇಲಾಖೆಯಿಂದ ದಾಖಲಿಸಿದ 90 ಪ್ರಕರಣಗಳಿಂದ 1788.77 ಲೀ. ಮದ್ಯ ಹಾಗೂ 3.60 ಕೆ.ಜಿ. ಗಾಂಜಾ, 1 ಕೆ.ಜಿ ಸಿ.ಎಚ್. ಪೌಡರ್ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ಹಾಗೂ ಪೊಲೀಸ್ ಇಲಾಖೆಯಿಂದ ದಾಖಲಿಸಿದ 17 ಪ್ರಕರಣಗಳಿಂದ 239.20 ಲೀಟರ್ ಮದ್ಯ ಹಾಗೂ 1.5 ಕೆ.ಜಿ. ಸಿ.ಎಚ್. ಪೌಡರ್ ವಶಪಡಿಸಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.
ಖರ್ಗೆ ಪ್ರಚಾರ ಸಭೆ ಇಂದು
ಗುಲ್ಬರ್ಗ: ಲೋಕಸಭಾ ಚುನಾವಣೆ ಪ್ರಚಾರದ ಅಂಗವಾಗಿ ಜೇವರ್ಗಿ, ಅಫಜಲ್ಪುರ ಮತ್ತು ಗುಲ್ಬರ್ಗ ದಕ್ಷಿಣ ವಿಧಾನ ಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 13 ರಂದು ಸಚಿವ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಡಾ. ಮಲ್ಲಿಕಾರ್ಜುನ ಖರ್ಗೆ ಚುನಾವಣಾ ಬಹಿರಂಗ ಪ್ರಚಾರ ಸಭೆ ಹಮ್ಮಿಕೊಳ್ಳಾಲಾಗಿದೆ. ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಲ್ಲಿ ಬೆಳಗ್ಗೆ 11ಕ್ಕೆ ನೆಲೋಗಿಯಲ್ಲಿ ಮಧ್ಯಾಹ್ಮ 1ಕ್ಕೆ ಕೂಡಿ ದರ್ಗಾ ಹತ್ತಿರ ಸಂಜೆ 4ಕ್ಕೆ ಅಫಜಲ್ಪುರ ತಾಲೂಕಿನ ಫರತಾಬಾದ್ ಗ್ರಾಮದಲ್ಲಿ ಸಂಜೆ 6ಕ್ಕೆ ಹಾಗೂ ಗುಲ್ಬರ್ಗ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಲಾಲಗೇರಿ ಕ್ರಾಸ್ ಹತ್ತಿರ ಲಕ್ಷ್ಮಣರಾವ್ ಜವಳಗೇರಾ ಮನೆಯಲ್ಲಿ ರಾತ್ರಿ 8ಕ್ಕೆ ಬಹಿರಂಗ ಸಭೆ ಏರ್ಪಡಿಸಲಾಗಿದೆ ಎಂದು ಭಾಗಣ್ಣಗೌಡ ಪಾಟೀಲ್ ಸಂಕನೂರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

