ಗುಲ್ಬರ್ಗಾ

ಸ್ನೇಹ ಸಮ್ಮೇಳನ, ಬೀಳ್ಕೊಡುಗೆ

Published On :

ಗುಲ್ಬರ್ಗ: ಸಂಗಮೇಶ್ವರ ಸಭಾಗೃಹದಲ್ಲಿ ನೂತನ ವಿದ್ಯಾಲಯ ಸಂಸ್ಥೆಯ ಪಾಲಿಟೆಕ್ನಿಕ್ ವಾರ್ಷಿಕ ಸ್ನೇಹ ಸಮ್ಮೇಳನ ನೂತನ ಕಾಲೇಜು ಸಂಚಿಕೆ 2013-14 ಬಿಡುಗಡೆ ಹಾಗೂ ಅಂತಿಮ ವರ್ಷದ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ವಿಜ್ಞಾನ ಕೇಂದ್ರದ ಅಧಿಕಾರಿ ಸಿ.ಎನ್. ಲಕ್ಮೀ ನಾರಾಯಣ ನೂತನ ಕಾಲೇಜು ಸಂಚಿಕೆ 2013-14ಬಿಡುಗಡೆ ಮಾಡಿ, ನೂತನ ವಿದ್ಯಾಲಯ ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಕುರಿತು ಮಾತನಾಡಿದರು. ಮತ್ತೊಬ್ಬ ಮುಖ್ಯ ಅತಿಥಿಯಾಗಿ ಎಸ್‌ಆರ್‌ಎನ್ ಮೆಹತಾ ಆಂಗ್ಲ ಮಾಧ್ಯಮ ಶಾಲೆ ಪ್ರಾಚಾರ್ಯ ಚಕೋರ ಮೆಹತಾ ಆಗಮಿಸಿದ್ದರು. ಆರ್.ಎನ್. ರಾವ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ವಾರ್ಷಿಕ ವರದಿಯನ್ನು ಆರ್.ಕೆ. ಕುಲಕರ್ಣಿ ಮಂಡಿಸಿದರು. ಪ್ರತಿಭಾನ್ವಿತ ವಿದ್ಯಾಥಿಗಳಿಗೆ ಬಹುಮಾನ ವಿತರಣೆ, ಕಲಿಕಾ ಹಾಗೂ ಬೋಧನಾ ವಿಷಯದಲ್ಲಿ ಹೆಚ್ಚು ಫಲಿತಾಂಶ ನೀಡಿರುವ ವಿದ್ಯಾರ್ಥಿಗಳಿಗೆ ಉಪನ್ಯಾಸಕರಿಗೆ ಸನ್ಮಾನ ಮಾಡಲಾಯಿತು. ಪೂರ್ಣಿಮಾ ಕುಲಕರ್ಣಿ, ವಾಣಿ.ಎಸ್. ಆಡಕಿ ಹಾಗೂ ಮೆಹಜ್ ಬಿನ್ ಅನ್ಸಾರಿ ನಿರೂಪಿಸಿದರು. ಪ್ರಾಚಾರ್ಯ ಜೆ.ಎಲ್. ಶುಕ್ಲಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪದ್ಮಾಕರ ಕುಲಕರ್ಣಿ ವಂದಿಸಿದರು.  ವಾಸುದೇವ ರಾವ್ ವಡಗೇರಿ, ಕೆ.ಎಂ. ಕೋಟಿ ಸೇರಿದಂತೆ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಇದ್ದರು.
--
ಚರಂಡಿ ಸ್ವಚ್ಛತೆಗೆ ಮುಂದಾದ ಬಡಾವಣೆ ನಿವಾಸಿಗಳು
ಶಹಾಪುರ: ಚರಂಡಿ ಸ್ವಚ್ಛತೆ, ನೈರ್ಮಲ್ಯೀಕರಣ, ನೀರು ಸರಬರಾಜು, ತ್ಯಾಜ್ಯವಿಲೇವಾರಿ, ಬಡಾವಣೆಗಳ ಕಸ ಸ್ವಚ್ಛತೆ ಇವೆಲ್ಲವನ್ನು ಗೂಗಿ(ಪಿ) ಗ್ರಾಮಪಂಚಾಯಿತಿ ಕಡೆಗಣಿಸಿರುವ ಹಿನ್ನೆಲೆಯಲ್ಲಿ ಜನರು ಬೇಸತ್ತು ತಾವೇ ಸ್ವತಃ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ. ಲೆಕ್ಕದ ಪುಸ್ತಕದಲ್ಲಿ ಲಕ್ಷಾಂತರ ರೂ. ಖರ್ಚು ತೋರಿಸುವ ಗ್ರಾಮಪಂಚಾಯತಿ, ವಾಸ್ತವವಾಗಿ ಗ್ರಾಮದ ಬಡಾವಣೆಗಳಲ್ಲಿ 6 ತಿಂಗಳಾದರೂ ಚರಂಡಿಗಳನ್ನು ಸ್ವಚ್ಛ  ಮಾಡಿಲ್ಲ. ಎಲ್ಲೆಂದರಲ್ಲೆ ಕಸದ ರಾಶಿ ತುಂಬಿದೆ. ಗ್ರಾಮದ ಬಡಾವಣೆಗಳು ಮೂಲಸೌಕರ್ಯದಿಂದ ವಂಚಿತವಾಗಿ ವಿಪರೀತ ಸೊಳ್ಳೆಗಳ ಕಾಟ, ತನ್ಮೂಲಕ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಿದೆ.
ಸಾಕಷ್ಟು ಬಾರಿ ಈ ಬಗ್ಗೆ ಮನವಿ ಸಲ್ಲಿಸಿದರೂ ಪಂಚಾಯತಿಗೆ ಕಾಳಜಿ ಇಲ್ಲದಂತಾಗಿದೆ ಎಂದು ಆರ್ .ಕೆ. ಟ್ರಾನ್ಸ್‌ಪೋರ್ಟ್‌ನ ಶಫಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸ್ವಚ್ಛತೆಗೆ ಮುಂದಾದ ಬಡಾವಣೆಯವರು: ಈ ಬಗ್ಗೆ ಸಾಕಷ್ಟು ಬಾರಿ ಪಂಚಾಯತಿಗೆ ಮನವಿ ಸಲ್ಲಿಸಿದರೂ ಚರಂಡಿ ಸ್ವಚ್ಛತೆಗೆ ಗಮನ ನೀಡದ ಗ್ರಾಮ ಪಂಚಾಯತಿ ವಿರುದ್ಧ ಹಿಡಿ ಶಾಪ ಹಾಕಿದ ಬಡಾವಣೆಯವರು ಇದೀಗ ತಾವೇ ಈ ಕೆಲಸಕ್ಕೆ ಮುಂದಾಗಿದ್ದಾರೆ.  ಗ್ರಾಮಪಂಚಾಯತಿಯ ಕಾರ್ಯವೈಖರಿ ನಾಚಿಕೆ ತರಿಸುವಂತಿದೆ. ಮೂಲಸೌಕರ್ಯ ತೆರಿಗೆ ವಸೂಲು ಮಾಡುವ ಗ್ರಾಮ ಪಂಚಾಯತಿ ಸೌಲಭ್ಯ ಕೊಡದೆ ವಂಚಿಸಿದೆ. ಸರ್ಕಾರ ಗ್ರಾಮ ಪಂಚಾಯತಿ ಆಡಳಿತದ ಬಗ್ಗೆ ಗಮನ ಹರಿಸಬೇಕಾದ ಅವಶ್ಯಕತೆಯಿದೆ ಎಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.