ದಿ. ಕೃಷ್ಣಪ್ಪಗೆ ಶ್ರದ್ಧಾಂಜಲಿ
ಗುಲ್ಬರ್ಗ: ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಪಕ್ಷದ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಬಸವರಾಜ ತಡಕಲ್, ದೇವೇಗೌಡ ತೆಲ್ಲೂರ, ಮುಕ್ರಮ ಖಾನ್, ಶಾಮರಾವ ಸೂರನ, ರೇವಣಸಿದ್ದಪ್ಪ ಬಾಗೋಡಿ, ಅರ್ಜುನ ಕಪುರ, ಮನೋಹರ ಪೊದ್ದಾರ, ಮೈನೊದ್ದಿನ್ ಮನ್ಸಪದಾರ ಅಸ್ಲಮ್ ಖತೀಬ್, ಜ್ಯೋತಿ ಕುಲಕರ್ಣಿ, ಸುರೇಶ ಭರಣಿ ಇದ್ದರು.
ಷಣ್ಮುಖ ಆಯ್ಕೆ
ಆಳಂದ: ರಾಜ್ಯ ಹಟಗಾರ ಸಮಾಜದ ಪ್ರಮುಖ ಸಂಸ್ಥಾನ ಮಠಗಳಲ್ಲಿ ಒಂದಾಗಿರುವ ಅಕ್ಕಲಕೋಟದ ರೇವಣಸಿದ್ದ ಶಿವಶರಣರ ಸಂಸ್ಥಾನ ಮಠದ ಟ್ರಸ್ಟ್ಗೆ ನೂತನ ಅಧ್ಯಕ್ಷ, ಪದಾಧಿಕಾರಿಗಳು ನೇಮಕ ಮಾಡಲಾಗಿದೆ. ಈಚೆಗೆ ಅಕ್ಕಲಕೋಟ ಮಠದಲ್ಲಿ ಪೀಠಾಧಿಪತಿ ಚಿಕ್ಕರೇವಣಸಿದ್ದ ಶಿವಶರಣ ಶ್ರೀ ಸಮ್ಮುಖದಲ್ಲಿ ಸಮಾಜ ಬಾಂಧವರು ಸಭೆ ಸೇರಿ ಕಮಿಟಿ ರಚಿಸಲಾಗಿದೆ ಎಂದು ಶ್ರೀಮಠ ತಿಳಿಸಿದೆ. ಆಳಂದ ಪುರಸಭೆ ಮಾಜಿ ಸದಸ್ಯರೂ ಆಗಿದ್ದ ಗುರುನಾಥ ಶಿವಶಂಕರ ಷಣ್ಮೂಖ ಅವರನ್ನು ಟ್ರಸ್ಟ್ಗೆ ನೂತನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ನಿಲಕಂಠ ದ್ಯಾಗಳ್ಳಿ ಉಪಾಧ್ಯಕ್ಷರಾಗಿ, ಸೋಲಾಪುರದ ರೇವಣಸಿದ್ದ ಹಿಪ್ಪರಗಿ ಕಾರ್ಯದರ್ಶಿಯಾಗಿ ಒಳಗೊಂಡು ಇತರರನ್ನು ಪದಾಧಿಕಾರಿಗಳು ಮತ್ತು ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದೆ.
ಕಾರ್ಯಕ್ರಮಗಳು
ಗುಲ್ಬರ್ಗ: ಮಹಾಲಕ್ಷ್ಮೀ ಭಜನಾ ಮಂಡಳಿ ಹಾಗೂ ನಂಜನಗೂಡು ರಾಘವೇಂದ್ರ ಸ್ವಾಮಿ ಮಠ ಸದಸ್ಯರ ಆಶ್ರಯದಲ್ಲಿ ಏ.26, 27 ರಂದು ಬಿದ್ದಾಪುರ ಕಾಲೋನಿಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಏ.26 ರಂದು ಸಂಜೆ 4ಕ್ಕೆ ಲಕ್ಷ್ಮೀವೆಂಕಟೇಶ್ವರ (ಶ್ರೀನಿವಾಸ ಪದ್ಮಾವತಿ) ಕಲ್ಯಾಣ ಉತ್ಸವ ನಡೆಯಲಿದೆ. ಏ.27 ರಂದು ಬೆಳಗ್ಗೆ 8ಕ್ಕೆ ಮಹಾಲಕ್ಷ್ಮೀ ಶೋಭಾನೆ ಹಾಡಿನ ಲಕ್ಷ ಪೂರ್ತಿ ಪಾರಾಯಣ ಮಾಡಿದ ಪ್ರಯುಕ್ತ ವಿಶೇಷ ಹೋಮ ಹವನಗಳು ಜರುಗಲಿವೆ. ಪಂಡಿತ ಗೋಪಾಲಚಾರ್ಯ ಅಕಮಂಚಿ ನೇತೃತ್ವ ವಹಿಸುವರು ಎಂದು ನವಲಿ ಕೃಷ್ಣಾಚಾರ್ಯ ತಿಳಿಸಿದ್ದಾರೆ.
ಸಮಾರೋಪ ಇಂದು
ಗುಲ್ಬರ್ಗ: ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಏ.25ರಂದು ಮಧ್ಯಾಹ್ನ 1 ಗಂಟೆಗೆ ವಿಜ್ಞಾನ ಅಕಾಡೆಮಿ 2013-14 ಮತ್ತು ಕ್ರೀಡಾ ದಿನ ಸಮಾರೋಪ ಸಮಾರಂಭ ಹಮ್ಮಿಕೊಂಡಿದೆ. ಗುವಿವಿ ಕುಲಪತಿ ಡಾ. ಈ.ಟಿ. ಪುಟ್ಟಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ. ಶರಣಬಸಪ್ಪ ಅಪ್ಪ ಸಾನ್ನಿಧ್ಯವನ್ನು ವಹಿಸುವರು ಎಂದು ಮಹಾವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

