ಗುಲ್ಬರ್ಗಾ

ಭೀಮನಹಳ್ಳಿ ಪಿಡಿಒ ಮೇಲೆ ಹಲ್ಲೆ

Published On :

ಚಿತ್ತಾಪುರ: ತಾಲೂಕಿನ ಭೀಮನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಒ ವಿಲಾಸ ಕುಲಕರ್ಣಿ ಮೇಲೆ ರಾಜೋಳ್ಳಿ ಗ್ರಾಮದ ಶರಣಗೌಡ ದುಕಾನ, ಸಾಬಣ್ಣ ದೊಡ್ಮನಿ, ಭೀಮಯ್ಯ ಕರದಾಳ ಅವರು ಬೋಗಸ್ ಬಿಲ್ ಪಾವತಿಸಬೇಕು ಎಂದು ಒತ್ತಾಯಿಸಿ ಹಲ್ಲೆ ನಡೆಸಿದ್ದಾರೆ.
ತಾಪಂ ಆವರಣದಲ್ಲಿ ರಾಜೋಳ್ಳಿ ಗ್ರಾಮದ ಶರಣಗೌಡ, ಸಾಬಣ್ಣ ಹಾಗೂ ಭೀಮಯ್ಯ ಕರದಾಳ ಅವರು ಗುರುವಾರ ಮಧ್ಯಾಹ್ನ 3 ಗಂಟೆಗೆ ಬಂದು ಸಭೆಯಲ್ಲಿದ್ದ ನನ್ನನು ಹೊರಗೆ ಕರೆದು ಉದ್ಯೋಗ ಖಾತ್ರಿ ಚೀಟಿ ಬೋಗಸ್ ತೆಗೆದುಕೊಳ್ಳಲು ಒತ್ತಾಯಿಸಿ ಅವ್ಯಾಚ ಶಬ್ದಗಳಿಂದ ಬೈಯ್ದು ಹಲ್ಲೆ ಮಾಡಿದ್ದಾರೆ ಎಂದು ಕುಲಕರ್ಣಿ ದೂರಿನಲ್ಲಿ ವಿವರಿಸಿದ್ದಾರೆ.
 ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಬಂಧನಕ್ಕೆ ಒತ್ತಾಯ: ಭೀಮನಹಳ್ಳಿ ಗ್ರಾಪಂ ಪಿಡಿಒ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಗ್ರಾಪಂ ಪಿಡಿಒಗಳ ಸಂಘದ ಅಧ್ಯಕ್ಷ ಗುರುನಾಥರೆಡ್ಡಿ, ಕಾರ್ಯದರ್ಶಿ ನರಸಯ್ಯ ಗುತ್ತೆದಾರ ನೇತೃತ್ವದಲ್ಲಿ ಎಲ್ಲಾ ಗ್ರಾಪಂ ಪಿಡಿಒಗಳು  . ಠಾಣೆಗೆ ತೆರಳಿ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.
ಗುರುವಾರ ತಾಪಂ ಸಭೆಯಲ್ಲಿದ್ದ ಭೀಮನಹಳ್ಳಿ ಗ್ರಾಪಂ ಪಿಡಿಒ ವಿಲಾಸ ಕುಲಕರ್ಣಿ ಅವರನ್ನು  ರಾಜೋಳ್ಳಿ ಗ್ರಾಮದವರಾದ ಶರಣಗೌಡ ಸಾಬಣ್ಣ, ಭೀಮಯ್ಯ ಅವರು ಸಭೆಯಿಂದ ಹೊರ ಕರೆದು ಬೋಗಸ್ ಉದ್ಯೋಗ ಖಾತ್ರಿ ಬಿಲ್ ಮಾಡಬೇಕು ಎಂದು ಒತ್ತಾಯಿಸಿ ಹಲ್ಲೆ ಮಾಡಿದ್ದಾರೆ.
  ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಹಲ್ಲೆಗೊಳಗಾದ ಪಿಡಿಒಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರಮೇಶ, ಜೋಶಿ ನರಸಿಂಹ, ಸೂರ್ಯಕಾಂತ, ಬಾಬುರಾವ, ರೇವಣಸಿದ್ದಪ್ಪ, ರಾಚಣ್ಣ, ಶರಣಪ್ಪ, ಅಯ್ಯುಬ್ ಖಾನ್, ಮಹೇಂದ್ರಕುಮಾರ, ಸಿದ್ದಯ್ಯ, ಹಾಜಿಮಲಂಗ, ನಾಗೇಂದ್ರ ಜಮದಾರ, ನಾಗಚಿತ್ರ ಚಿಕ್ಕಮಠ, ಸುನೀತಾ ಎಂ, ಪಲ್ಲವಿ  ಆರ್, ವಿಜಯಲಕ್ಷ್ಮೀ ಸೇರಿದಂತೆ 30 ಅಧಿಕ ಪಿಡಿಒಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.