ಗುಲ್ಬರ್ಗಾ

ಎಸ್‌ಎಫ್‌ಐ, ಡಿವೈಎಫ್‌ಐ ಪ್ರತಿಭಟನೆ

Published On :

ಸುರಪುರ: ಶಿಕ್ಷಕರ ಅರ್ಹತಾ ಪರೀಕ್ಷೆ ಗೊಂದಲ ನಿವಾರಿಸಬೇಕು ಎಂದು ಆಗ್ರಹಿಸಿ ಭಾರತೀಯ ವಿದ್ಯಾರ್ಥಿ ಫೆಡರೇಷನ್, ಡಿವೈಎಫ್‌ಐ ಸಂಘಟನೆಗಳು ಇಲ್ಲಿಯ ಗಾಂಧೀ ವೃತ್ತದಲ್ಲಿ ಶನಿವಾರ ಡಿಇಡ್, ಬಿಇಡ್ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದವು.
  ಎಸ್‌ಎಫ್‌ಐ ಸಂಘಟನೆಯ ಜಿಲ್ಲಾಧ್ಯಕ್ಷ ಪ್ರಕಾಶ ಆಲ್ಹಾಳ ಮಾತನಾಡಿ, ಶಿಕ್ಷಕರಾಗುವ ಕನಸು ಹೊತ್ತು ಡಿಇಡಿ ಮತ್ತು ಬಿಇಡಿ ಮುಗಿಸಿದ್ದ ವಿದ್ಯಾರ್ಥಿಗಳು ಈಗ ಗೊಂದಲದಲ್ಲಿದ್ದಾರೆ. ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನಡೆಸಲು ಮುಂದಾಗಿರುವುದರಿಂದ ವಿದ್ಯಾರ್ಥಿಗಳು ಚಿಂತೆಗೀಡಾಗಿದ್ದಾರೆ ಎಂದು ಆರೋಪಿಸಿದರು.
ಗೊಂದಲ: ಸರಕಾರ ಡಿಇಡಿ, ಬಿಇಡಿ ಕೋರ್ಸ್‌ಗಳ ಗುಣಮಟ್ಟವನ್ನು ಹೆಚ್ಚಿಸಿ ಕ್ರಮಬದ್ಧವಾದ ಅಧ್ಯಯನಕ್ಕೆ ಅವಕಾಶ ನೀಡುವ ಬದಲು ಅರ್ಹತಾ ಪರೀಕ್ಷೆ ನಡೆಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ತರಬೇತಿ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸಿದ ಮೇಲೆಯೂ ಅರ್ಹತಾ ಪರೀಕ್ಷೆ ನಡೆಸಲು ಮುಂದಾಗಿರುವುದು ಹಲವಾರು ಗೊಂದಲಗಳಿಗೆ ಎಡೆಮಾಡಿಕೊಟ್ಟಿದೆ ಎಂದು ದೂರಿದರು.
  ಬಿಇಡಿ ಅಭ್ಯರ್ಥಿಗಳು ಪಿಯುಸಿಯಲ್ಲಿ ಶೇ.50 ಅಂಕ ಪಡೆದಿರಬೇಕು ಎಂಬ ನಿಯಮ ರೂಪಿಸಲಾಗಿದೆ. ಬಿಇಡಿ ಅಧ್ಯಯನ ಮಾಡುವಾಗ ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಈಗ ಅರ್ಹತಾ ಪರೀಕ್ಷೆಗೆ ಪರಿಗಣಿಸಿರುವುದು ಯಾವ ನ್ಯಾಯ ಎಂದು ಪ್ರಶ್ನೀಸಿದರು.
ಅನ್ಯಾಯ: ಶಿಕ್ಷಕರ ಅರ್ಹತಾ ಪರೀಕ್ಷೆಗೆ ರು. 500- ರು. 800ವರೆಗೆ ಪರೀಕ್ಷಾ ಶುಲ್ಕವಾಗಿ ಮತ್ತು ಉತ್ತೀರ್ಣರಾದರೆ ಪ್ರಮಾಣ ಪತ್ರ ಪಡೆಯಲು ರು. 200 ಪಾವತಿಸಬೇಕಿದೆ. ನಿಜಕ್ಕೂ ಇದು ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಮಾಡುತ್ತಿರುವ ದೊಡ್ಡ ಅನ್ಯಾಯವಾಗಿದೆ. ಪರೀಕ್ಷೆಗೆ ರಾಜ್ಯ ಪಠ್ಯಕ್ರಮದ ಬದಲಾಗಿ ಕೇಂದ್ರ ಪಠ್ಯಕ್ರಮ ಅಳವಡಿಸಿರುವ ವಿಧಾನವು ಖಂಡನೀಯ ಎಂದು ದೂರಿದರು.
  ಸರ್ಕಾರ ತಕ್ಷಣ ಕೆಟಿಇಟಿಯಲ್ಲಿರುವ ಗೊಂದಲಗಳನ್ನು ಸರಿಪಡಿಸಲು ಮುಂದಾಗಬೇಕು. ಅರ್ಹತಾ ಪರೀಕ್ಷೆಗಳನ್ನು ಮಾನದಂಡವಾಗಿ ಪರಿಗಣಿಸುತ್ತಿರುವುದದನ್ನು ಕೈಬಿಟ್ಟು ಡಿಇಡಿ, ಬಿಇಡಿ ಮುಗಿಸಿದ ಎಲ್ಲರಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ನೇಮಕಾತಿ ಪರೀಕ್ಷೆಗೂ ಶುಲ್ಕ ಪಡೆಯುತ್ತಿರುವುದರಿಂದ ಅರ್ಹತಾ ಪರೀಕ್ಷೆಗಳನ್ನು ಉಚಿತವಾಗಿ ನಡೆಸಬೇಕು ಎಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
  ಡಿವೈಎಫ್‌ಐ ಮುಖಂಡ ಬುಚ್ಚಪ್ಪ ನಾಯಕ, ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಸೀತಾರಾಮ ರಾಠೋಡ ಮಾತನಾಡಿದರು. ಸಂಘಟನೆಯ ಮುಖಂಡರಾದ ವಿರೇಶ ಕುಂಬಾರ, ಮಲ್ಲು ಹದ್ನೂರು, ರಮೇಶ ಶೆಳ್ಳಗಿ, ವಿರೇಶ ರಾಠೋಡ, ಸುರೇಶ ಹೂಗಾರ, ಯಲ್ಲಪ್ಪ, ಬಲಭೀಮರಾಯ, ರವಿಕುಮಾರ, ಸೋಮನಗೌಡ ಪಾಟೀಲ್, ಹಣಮಂತ್ರಾಯ ಚೆನ್ನೂರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.