ಸೇಡಂನಲ್ಲಿ ಹಫ್ತಾ ವಸೂಲಿಗಾಗಿ ಜಗಳ
ಕ.ಪ್ರ. ವಾರ್ತೆ ಗುಲ್ಬರ್ಗ ಏ.29
ಸ್ಥಳೀಯ ಸಂಘಟನೆಯ ಕೆಲ ಮುಖಂಡರು ಹಫ್ತಾ ವಸೂಲಿಗೆ ಬಂದು ಹಲ್ಲೆ ನಡೆಸಿದ್ದಾರೆಂದು ಸೇಡಂನಲ್ಲಿರುವ ಸವೇರಾ ಹೋಟೆಲ್ ಮಾಲೀಕ ಮೊಹ್ಮದ್ ಯುಸೂಫ್ ಹುಸೇನ್ ಸವೆರಾವಾಲೆ ದೂರು ನೀಡಿದ್ದಾರೆ.
ಪಟ್ಟಣದಲ್ಲಿನ ಸಂಘಟನೆಯ ಕೆಲವರು ಹೋಟೆಲ್ಗೆ ಬಂದು ತಿಂಗಳಿಗೊಮ್ಮೆ ಹಫ್ತಾ ಕೊಡಬೇಕೆಂದು ತಕರಾರು ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಏ.27ರಂದು ವಿಜಯಕುಮಾರ ಆಡಕಿ, ನರಸಪ್ಪ ಯಾದಗೀರ, ಮಾರುತಿ ಕೊಡಂಗಲಕರ್, ಟಿ.ಜಾನ್ ಹೊಸಳ್ಳಿಕರ ಹಾಗೂ ಇನ್ನೂ ನಾಲ್ವರು ಸವೇರಾ ಹೋಟೆಲ್ಗೆ ನುಗ್ಗಿ ಹಫ್ತಾಕ್ಕಾಗಿ ಆಗ್ರಹಿಸಿ ಮಾಲೀಕರಾದ ತಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ತಕ್ಷಣ ಇವರೆಲ್ಲರ ವಿರುದ್ಧ ಕ್ರಮ ಜರುಗಿಸಬೇಕೆಂದು ಮೊಹ್ಮದ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪ್ರತಿ ದೂರು ದಾಖಲು: ನಗರದ ಸವೇರಾ ಹೋಟೆಲ್ ಮುಂದೆ ಬೈಕ್ ಪಾರ್ಕ್ ಮಾಡಿದ್ದ ಸಂದರ್ಭದಲ್ಲಿ ಹೋಟೆಲ್ ಮಾಲೀಕರ ಮಗ ಬೈಕ್ ತೆಗೆಯುತ್ತಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ತಮಗೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ವಿಜಯಕುಮಾರ ಆಡಕಿ (ಬಸವನಗರ ಸೇಡಂ) ದೂರು ದಾಖಲಿಸಿದ್ದಾರೆ.
ಹೋಟೆಲ್ ಮಾಲೀಕರ ಮಕ್ಕಳಾದ ಯೂಸೂಫ್ ತಂದೆ ಹುಸೇನಸಾಬ, ಮಿಯೀಜ್ ತಂದೆ ಹುಸೇನಸಾಬ, ಇದ್ರೀಜ್ ತಂದೆ ಹುಸೇನಸಾಬ ಹಾಗೂ ಇನ್ನೂ ಮೂರು ಮಕ್ಕಳು ತಮಗೆ ಜೀವ ಬೆದರಿಕೆ ಹಾಕಿದ್ದಾರೆಂದು ವಿಜಯಕುಮಾರ್ ದೂರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

