ನಿಧಿಗಾಗಿ ಪಾಂಚ್ಪೀರ ದರ್ಗಾ ಧ್ವಂಸ
ಚಿಂಚೋಳಿ: ತಾಲೂಕಿನ ಶಾದೀಪುರ ಗ್ರಾಮದ ಬಳಿಯಲ್ಲಿರುವ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿರುವ ಪುರಾತನ ಪಾಂಚ್ಪೀರ ದರ್ಗಾ ಧ್ವಂಸಗೊಳಿಸಿ ನಿಧಿಗಾಗಿ ಶೋಧನೆ ನಡೆದಿರುವ ಘಟನೆ ನಡೆದಿದೆ ಎಂದು ವಲಯ ಅರಣ್ಯ ಉಪ ಸಂರಕ್ಷಣಾಧಿಕಾರಿ ಸಂಜೀವಕುಮಾರ ಚವ್ಹಾಣ ತಿಳಿಸಿದ್ದಾರೆ.
ಶಾದೀಪುರ ಕಾಯ್ದಿಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿ ಕೆಲವು ದಿನಗಳಿಂದ 6ರಿಂದ 7 ಜನರು ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಹಗಲಿನಲ್ಲಿ ಅರಣ್ಯ ಪ್ರದೇಶದಲ್ಲಿ ತಿರುಗಾಡುತ್ತಿದ್ದರು. ಅರಣ್ಯದಲ್ಲಿ ಚೆಕ್ ಡ್ಯಾಮ್ ನಿರ್ಮಿಸುತ್ತಿರುವ ಚಿಕ್ಕನಿಂಗದಳ್ಳಿ ಗ್ರಾಮದ ಕೂಲಿಕಾರ್ಮಿಕರು ನೋಡಿ ಅವರನ್ನು ವಿಚಾರಿಸಿದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿಷಯವನ್ನು ಚಿಂಚೋಳಿ ವಲಯ ಅರಣ್ಯಾಧಿಕಾರಿಗಳಿಗೆ ತಿಳಿಸಿದಾಗ, ಅರಣ್ಯ ರಕ್ಷಕರು, ವನಪಾಲಕರು ಶಸ್ತ್ರ ಸಜ್ಜಿತರಾಗಿ ಕೆಲವು ದಿನಗಳವರೆಗೆ ಗಸ್ತು ತಿರುಗಾಡಿದ ಸಂದರ್ಭದಲ್ಲಿ ಯಾರು ಕಂಡು ಬಂದಿಲ್ಲ. ಕುಂಚಾವರಂ ಕಾಯ್ದಿಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಬಡೇಸಾಬ ದರ್ಗಾ, ಗೊಟ್ಟಂಗೊಟ್ಟ ಬಕ್ಕಪ್ರಭು ದೇವಾಲಯ ಮತ್ತು ಮಾಣಿಕಪುರ ಗ್ರಾಮಗಳಲ್ಲಿರುವ ಪುರಾತನ ದೇವಾಲಯದಲ್ಲಿ ನಿಧಿಗಾಗಿ ಶೋಧನೆ ಅನೇಕ ಸಲ ನಡೆದಿವೆ. ಪಾಂಚ್ಪೀರ ದರ್ಗಾದಲ್ಲಿ ಭೂಮಿ ಅಗೆದು ನಿಧಿ ಶೋಧನೆ ನಡೆದಿದೆ ಎಂದು ಚವ್ಹಾಣ ತಿಳಿಸಿದ್ದಾರೆ.
ಈ ಬಗ್ಗೆ ತಾಲೂಕು ವಲಯ ಅರಣ್ಯಾಧಿಕಾರಿ ಎಂ.ಎಲ್. ಭಾವಿಕಟ್ಟಿ ಅವರನ್ನು ಸಂಪರ್ಕಿಸಿದಾಗ ಅರಣ್ಯದಲ್ಲಿ ಅಕ್ರಮ ಪ್ರವೇಶ ಮಾಡಿ ತಿರುಗಾಡುತ್ತಿರುವ ವಿಷಯ ನಮ್ಮ ಗಮನಕ್ಕೆ ಬಂದಿದೆ. ಅವರನ್ನು ಪತ್ತೆ ಹಚ್ಚಬೇಕಾಗಿದೆ ಆಂಧ್ರ ನಿಧಿಗಳ್ಳರೋ, ಮರಗಳ್ಳರೋ ಎಂಬುದು ಇನ್ನೂ ತಿಳಿದು ಬಂದಿಲ್ಲ. ಅವರನ್ನು ಬಂಧಿಸುವ ಪ್ರಯತ್ನಕ್ಕಾಗಿ ಹಗಲು-ರಾತ್ರಿ ಗಸ್ತು ನಡೆಸಲಾಗುತ್ತಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

