ಗುಲ್ಬರ್ಗಾ

ಚಿತ್ರ ಕಲಾವಿದರ ಮಾಹಿತಿಗೆ ಮನವಿ

Published On :

ರಾಯಚೂರು: ಜಿಲ್ಲೆಯಲ್ಲಿರುವ ಚಿತ್ರ ಕಲಾವಿದರ ಕುರಿತು ಮಾಹಿತಿ ಸಂಗ್ರಹಣೆಗೆ ಚಾಲನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘವು ಜಿಲ್ಲೆಯ ಚಿತ್ರಕಲಾ ಶಿಕ್ಷಕರ, ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿರುವವರು, ಹಿರಿಯ ಕಲಾವಿದರು ಹಾಗೂ ಯುವ ಕಲಾವಿದರ ಪರಿಚಯಾತ್ಮಕ ಕೃತಿ ಹೊರತರಲು ನಿರ್ಧರಿಸಿದೆ.
ಈಗಾಗಲೇ ಕಳೆದ ನಾಲ್ಕೈದು ತಿಂಗಳುಗಳಿಂದ ಪ್ರಕಟಣೆ ಮುಖಾಂತರ, ಆಯಾ ತಾಲೂಕು ಅಧ್ಯಕ್ಷರುಗಳಿಗೆ, ಮೌಖಿಕ ಹಾಗೂ ದೂರವಾಣಿ ಕರೆಯ ಮುಖಾಂತರ ತಿಳಿಸಿದ್ದು, ಚಿತ್ರಕಲಾ ಶಿಕ್ಷಕರಿಗೆ ಸಭೆಯ ಮೂಲಕವೂ ಮಾಹಿತಿ ನೀಡಲಾಗಿದೆ. ಆದರೆ ಕೆಲ ಶಿಕ್ಷಕರು ತಮ್ಮ ಮಾಹಿತಿ ಒದಗಿಸಿಲ್ಲ.
ಕಾರಣ ಪ್ರತಿ ತಾಲೂಕಿನ ಸಂಘದ ಅಧ್ಯಕ್ಷರು ತಾಲೂಕು ಚಿತ್ರಕಲಾ ಶಿಕ್ಷಕರ ಸಂಘ, ತಮ್ಮ ತಾಲೂಕಿನ ಚಿತ್ರಕಲಾ ಶಿಕ್ಷಕರ ಮಾಹಿತಿಯನ್ನು ಸಂಗ್ರಹಿಸಿ ಜಿಲ್ಲಾ ಸಂಘಕ್ಕೆ ರವಾನಿಸಲು ಸೂಚಿಸಲಾಗಿದೆ. ಅದೇ ರೀತಿ ಕಲಾವಿದರು, ಯುವ ಕಲಾವಿದರು ತಮ್ಮ ಮಾಹಿತಿಯುಳ್ಳ ಸ್ವ- ವಿವರ ಹಾಗೂ ತಾವು ರಚಿಸಿದ ಚಿತ್ರಕಲಾ ಕೃತಿಗಳ ಫೋಟೋ ಜತೆಗೆ ತಮ್ಮ ಇತ್ತೀಚಿನ ಭಾವ ಚಿತ್ರದೊಂದಿಗೆ ಫೆ.20 ರೊಳಗೆ ಈ- ಮೇಲ್ ವಿಳಾಸ - ಟ್ಞಡ್ಠ್ಡಞಛಟಿಛಅ್ಜಟಛ್ಝಟ.್ಛ್ಟಟ ಗೆ ಮೇಲ್ ಮೂಲಕ ಕಳಿಸಬಹುದಾಗಿದೆ. ಮಾಹಿತಿಗೆ ಕೆ. ಮಲ್ಲಿಕಾರ್ಜುನ-9060830033 ಮತ್ತು ವಿ. ಮಹೇಶ್-9900635646 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.