ಗುಲ್ಬರ್ಗಾ

ತುರ್ತು ಕಾಮಗಾರಿಗೆ ಪಾಲಿಕೆ, ಜಲಮಂಡಳಿಗೆ ಆದೇಶ

Published On :

ಕ.ಪ್ರ. ವಾರ್ತೆ      ಗುಲ್ಬರ್ಗ      ಫೆ.11
ಕೊನೆಗೂ ವಿದ್ಯಾನಗರ ಬಡಾವಣೆಯ ಬಸ್ ಡಿಪೋ ನಂಬರ್ 3 ರ ರಸ್ತೆಯಲ್ಲಿ ಬಾಯಿ ತೆರೆದು ನಿತ್ಯವೂ ಹೊಲಸು ನೀರು ರಸ್ತೆಗೆ ಚೆಲ್ಲುತ್ತಿದ್ದ ಮ್ಯಾನ್‌ಹೋಲ್‌ಗೆ ಕಾಯಕಲ್ಪ ನೀಡುವ ಕಾಲ ಕೂಡಿಬಂದಿದೆ.
ಕಳೆದೊಂದು ವರ್ಷದಿಂದ ಇಲ್ಲಿನ ಚರಂಡಿ ಬಾಯಿ ತೆರೆದು ಉಗುಳುತ್ತಿರುವ ಹೊಲಸು ನೀರಿನಿಂದಾಗಿ ಸಾರ್ವಜನಿಕರು, ಶಾಲಾ ಮಕ್ಕಳು ಭಾರಿ ತಂದರೆ ಅನುಭವಿಸುತ್ತಿದ್ದಾರೆ ಎಂದು 'ಕನ್ನಡಪ್ರಭ' ತನ್ನ ಫೆ.11ರ ಸಂಚಿಕೆಯಲ್ಲಿ ಸಚಿತ್ರ ವರದಿ ಮಾಡಿತ್ತು.
ಪತ್ರಿಕೆಯ ಈ ಪೌರಸಮಸ್ಯೆ ಬಿಂಬಿಸಿದ ವಿಶೇಷ ವರದಿಯನ್ನು ಗಮನಿಸಿರುವ ಪೌರಾಡಳಿತ, ವಕ್ಫ್ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಮಂತ್ರಿ ಖಮರುಲ್ ಇಸ್ಲಾಂ ಈ ಸಮಸ್ಯೆಗೆ ಕಾಯಂ ಪರಿಹಾರ ನೀಡಲು ಅದೇನು ಕ್ರಮಗಳನ್ನು ಕೈಗೊಳ್ಳಬೇಕೋ ಅವುಗಳನ್ನು ತಕ್ಷಣ ಕೈಗೊಳ್ಳುವಂತೆ ಪಾಲಿಕೆ ಆಯುಕ್ತ ಶ್ರೀಮಂತ ಕಟ್ಟಿಮನಿ, ಎಂಜಿನಿಯರ್ ಜಾಧವ ಹಾಗೂ ಜಲ ಮಂಡಳಿಯ ಎಇಇ ನಾಗಶೆಟ್ಟಿ ಪಾಟೀಲ್ ಸೇರಿದಂತೆ ಸಂಬಂಧಪಟ್ಟಂತಹ ಎಲ್ಲಾ ಅಧಿಕಾರಿಗಳಿಗೆ ಮಾತನಾಡಿ ಕಟ್ಟುನಿಟ್ಟು ನಿರ್ದೇಶನ ನೀಡಿದ್ದಾರೆ.
ಸಮಸ್ಯಾತ್ಮಕ ಸ್ಥಳಕ್ಕೆ ಭೇಟಿ ನೀಡಿದ ಎಂಜಿನಿಯರ್‌ಗಳು: ಜಲ ಮಂಡಳಿ ಎಂಜಿನಿಯರ್ ನಾಗಶೆಟ್ಟಿ ಪಾಟೀಲ್, ಪಾಲಿಕೆ ಹಿರಿಯ ಸದಸ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭೀಮರೆಡ್ಡಿ ಪಾಟೀಲ್ ಕುರಕುಂದಾ ಸೇರಿದಂತೆ ಹಲವರು ಜೇವರ್ಗಿ ಕ್ರಾಸ್‌ಗೆ ಮಂಗಳವಾರ ಬೆಳಗ್ಗೆಯೇ ಭೇಟಿ ನೀಡಿ ಸಮಸ್ಯೆ ಖುದ್ದು ಪರಿಶೀಲಿಸಿದರು.
85 ಲಕ್ಷ ವೆಚ್ಚದಲ್ಲಿ: ಬಡಾವಣೆಯ ನಿವಾಸಿಗಳು ಕಳೆದೊಂದು ವರ್ಷದಿಂದ ಈ ಹೊಲಸು ನೀರಿನೊಂದಿಗೆ ಸಂಸಾರ ಮಾಡುತ್ತಿರುವುದಾಗಿ ದೂರಿದರು. ತಕ್ಷಣ ರಿಪೇರಿ ಕೆಲಸ ಕೈಗೊಳ್ಳುವಂತೆ ಮನವಿ ಮಾಡಿದರು. ನಿವಾಸಿಗಳೊಂದಿಗೆ ಮಾತನಾಡಿದ ಪಾಲಿಕೆ ಸದಸ್ಯ ಭೀಮರೆಡ್ಡಿ ಪಾಟೀಲ್ ಕುರಕುಂದಾ ಪತ್ರಿಕೆಯಲ್ಲಿನ ವರದಿಗೆ ತಕ್ಷಣ ಸ್ಪಂದಿಸಿ ಇಲ್ಲಿಗೆ ಬಂದಿದ್ದಾಗಿ ಹೇಳಿದರಲ್ಲದೆ ಈ ಬಗ್ಗೆ ಸಚಿವ ಖಮರುಲ್ ಇಸ್ಲಾಂ ಅವರೂ ಹಿರಿಯ ಅಧಿಕಾರಿಗಳಿಗೆಲ್ಲರಿಗೂ ಸೂಕ್ತ ನಿರ್ದೇಶನ ನೀಡಿದ್ದಾರೆ. 2.09 ಲಕ್ಷ ವೆಚ್ಚದಲ್ಲಿ ಇಲ್ಲಿನ ಹರಿದು ಹೋಗಿರುವ ಚರಂಡಿ ಮಾರ್ಗ ನವೀಕರಣ ಕಾಮಗಾರಿ ಮೊದಲು ಕೈಗೆತ್ತಿಕೊಳ್ಳಲಾಗುತ್ತದೆ. ನಂತರ ಜೇವರ್ಗಿ ಕ್ರಾಸ್ ರಾಷ್ಟ್ರಪತಿ ವೃತ್ತದಿಂದ ವಿಠ್ಠಲ ನಗರ ಅಂಚಲ್ಲಿರುವ ಆನಂದ ಹೋಟಲ್ ಸಂಪರ್ಕ ರಸ್ತೆಯನ್ನು 85 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದರು.
ಸಚಿವ ಖಮರುಲ್ ಇಸ್ಲಾಂ ಅವರು ಚರಂಡಿ ಮಾರ್ಗ ಮರು ನಿರ್ಮಾಣದ ಜೊತೆಗೆ ಜೇವರ್ಗಿ ಕ್ರಾಸ್, ಬಸ್ ಡಿಪೋ, ಕೃಷ     ಮಂದಿರ, ಎಸ್ಬಿ ಕಾಲೇಜು ಮಾರ್ಗವಾಗಿ ಸಾಗುವ ಈ ಮಹತ್ವದ ರಸ್ತೆಗೆ ಕಾಯಕಲ್ಪ ನೀಡುವ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಿದ್ದಾರೆ. ಈಗಾಗಲೇ ಕಾಮಗಾರಿ 85 ಲಕ್ಷದಲ್ಲಿ ಟೆಂಡರ್ ಸಹ ಆಗಿದ್ದು, ಚರಂಡಿ ಮಾರ್ಗ ನಿರ್ಮಾಣದ ನಂತರ ತಕ್ಷಣ ಕೆಲಸ ಆರಂಭವಾಗುತ್ತದೆ ಎಂದು ಭೀಮರೆಡ್ಡಿ ಪಾಟೀಲ್ ಹೇಳಿದ್ದಾರೆ.



'ಕನ್ನಡಪ್ರಭ' ಕೆಲಸಕ್ಕೆ ಸಚಿವ ಇಸ್ಲಾಂ ಶ್ಲಾಘನೆ



ಗುಲ್ಬರ್ಗ ನಗರ ನಾಗರಿಕರು ಎದುರಿಸುತ್ತಿರುವ ಮೂಲ ಸೌಕರ್ಯಗಳ ದುರವಸ್ಥೆ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿರುವ 'ಕನ್ನಡಪ್ರಭ'ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್  ಇಸ್ಲಾಂ ಅಭಿನಂದಿಸಿದ್ದಾರೆ. ಬೆಂಗಳೂರಿನಿಂದಲೇ ದೂರವಾಣಿ ಕರೆ ಮಾಡಿ ಮಾತನಾಡಿರುವ ಇಸ್ಲಾಂ ವಿದ್ಯಾನಗರ ಬಡಾವಣೆಯಲ್ಲಿನ ಬಸ್ ಡಿಪೋ ಮುಂದಿನ ಚರಂಡಿ ಸಮಸ್ಯೆ ಮೇಲೆ ವಿಶೇಷವಾಗಿ ಒತ್ತು ಕೊಟ್ಟು ವರದಿ ಮಾಡಿದ್ದು, ಅಧಿಕಾರಿಗಳಾದಿಯಾಗಿ ಎಲ್ಲರ ಕಣ    ು ತೆರೆಸಿದೆ. ನಿಜಕ್ಕೂ ಇದು ಜನಪರ ಕಾಳಜಿಯ ಕೆಲಸ. ವರ್ಷದಿಂದ ಈ ಸಮಸ್ಯೆ ಇದ್ದರೂ ಯಾರೂ ಗಮನ ಹರಿಸದೆ ಹೋಗಿದ್ದು ಖೇದಕರ ಸಂಗತಿ. ಉಸ್ತುವಾರಿ ಸಚಿವರನ್ನೇ ಪ್ರಶ್ನಿಸಿ ಪತ್ರಿಕೆಯಲ್ಲಿ ಫೆ.11 ರಂದು ಪ್ರಕಟವಾಗಿರುವ ವರದಿಯ ಬಗ್ಗೆ ಭೀಮರೆಡ್ಡಿ ಪಾಟೀಲ್ ಕುರಕುಂದಾ ಗಮನ ಸೆಳೆದರು. ನಾನೂ ಬೆಂಗಳೂರಿನಲ್ಲಿದ್ದರೂ ತಕ್ಷಣ ದೂರವಾಣಿ ಕರೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳೆಲ್ಲರಿಗೂ ಈ ಬಗ್ಗೆ ನಿರ್ದೇಶನ ನೀಡಿರುವೆ. ಹಣಕಾಸಿನ ಕೊರತೆ ಇಲ್ಲ ಎಂದಿರುವೆ. ಚರಂಡಿ ಸಮಸ್ಯೆಗೆ ಪರಿಹಾರ ನೀಡಲಾಗುತ್ತದೆ.



ಸಮಸ್ಯೆ ಪರಿಹಾರಕ್ಕೆ ಆದ್ಯತೆ
ನಗರ ನಿವಾಸಿಗಳ ಮೂಲ ಸಮಸ್ಯೆಗಳ ನಿವಾರಣೆಗೆ ಸಚಿವ ಇಸ್ಲಾಂ ಆದ್ಯತೆ ನೀಡುತ್ತಿದ್ದಾರೆ. ಚರಂಡಿ ಸಮಸ್ಯೆ ವರದಿ ಪತ್ರಿಕೆಯಲ್ಲಿ ಕಂಡಾಕ್ಷಣ ಸಚಿವರ ಗಮನ ಸೆಳೆಯಲಾಯ್ತು. ಅವರು ತಾವು ಎಲ್ಲಿದ್ದಾರೋ ಅಲ್ಲಿಂದಲೇ ಸಂಬಂಧಪಟ್ಟವರಿಗೆ ಕರೆ ಮಾಡಿ ತಕ್ಷಣ ಪರಿಹಾರಕ್ಕೆ ಸೂಚಿಸಿದ್ದಾರೆ. ವಿದ್ಯಾನಗರದ ಈ ರಸ್ತೆ ಬಳಕೆದಾರರ ಚರಂಡಿ ನೀರಿನ ಸಮಸ್ಯೆಗೆ ಶೀಘ್ರವೇ ಪರಿಹಾರ ದೊರಕಲಿದೆ.
ಚ ಭೀಮರೆಡ್ಡಿ ಪಾಟೀಲ್ ಕುರಕುಂದಾ, ಪಾಲಿಕೆ ಹಿರಿಯ ಸದಸ್ಯ, ಗುಲ್ಬರ್ಗ


ಪಾಲಿಕೆ ಹಣ ನೀಡಲು ಒಪ್ಪಿದ್ದಾರೆ, ಕೆಲಸ ಶುರುವಾಗುತ್ತದೆ

ಈ ಸಮಸ್ಯೆ ಬಗೆಹರಿಸಲು ನಮ್ಮ ಅಂದಾಜು ವರದಿಯಂತೆ 2.09 ಲಕ್ಷ ನೀಡಲು ಪಾಲಿಕೆಯವರು ಒಪ್ಪಿದ್ದಾರೆ. ಗುತ್ತಿಗೆದಾರರನ್ನು ಬಳಸಿ ಶೀಘ್ರ ಈ ಚರಂಡಿ ಕಾಮಗಾರಿ ಶುರು ಮಾಡುತ್ತೇವೆ. ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ಸಹ ಮಾಡಲಾಗಿದೆ. ಸದ್ಯಕ್ಕೆ ಸಕ್ಕಿಂಗ್ ಯಂತ್ರ ಬಳಸಿ ಬ್ಲಾಕ್ ಆಗಿರುವ ಮ್ಯಾನ್‌ಹೋಲ್ ಸಮಸ್ಯೆ ನಿವಾರಿಸಲಾಗುತ್ತದೆ. ಇನ್ನೆರಡು ದಿನದಲ್ಲಿ ಪಕ್ಕಾ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ.
ಚ ನಾಗಶೆಟ್ಟಿ ಪಾಟೀಲ್, ಎಇಇ, ಜಲ ಮಂಡಳಿ, ಗುಲ್ಬರ್ಗ

ಪಾಲಿಕೆಯ ಪರವಾಗಿ ನಾವೂ ಸಹ ಜಲ ಮಂಡಳಿ ಇಇ ಮಾಡ್ಯಾಳಕರ್, ಎಇಇ ನಾಗಶೆಟ್ಟಿ ಅವರ ಗಮನ ಸೆಳೆದಿದ್ದೇವೆ. ಪತ್ರಿಕೆಯ ವರದಿ ಗಮನಿಸಿ ನಾವು ಕಾರ್ಯತತ್ಪರರಾಗಿದ್ದೇವೆ. ಸಚಿವರೂ ಚರಂಡಿ ಕಾಮಗಾರಿ ತಕ್ಷಣ ಕೈಗೆತ್ತಿಕೊಳ್ಳುವಂತೆ ಸೂಚಿಸಿದ್ದಾರೆ. ಜಲ ಮಂಡಳಿಯ ಪ್ರಸ್ತಾವನೆಯಂತೆ ಹಣ ಪಾಲಿಕೆಯಿಂದ ಲಭ್ಯವಾಗಲಿದೆ.
ಚ ಜಾಧವ, ಪಾಲಿಕೆ ಎಂಜಿನಿಯರ್, ಗುಲ್ಬರ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.