ವಿಶೇಷ ಅನುದಾನಕ್ಕಾಗಿ ಶೀಘ್ರವೇ ರಾಜ್ಯಪಾಲರ ಭೇಟಿ: ಶಾಸಕ ಜಾಧವ
ಕ.ಪ್ರ. ವಾರ್ತೆ ಚಿಂಚೋಳಿ ಫೆ.12
ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಚಿಂಚೋಳಿ ಮೀಸಲು ಕ್ಷೇತ್ರದ ಅಭಿವೃದ್ಧಿ, ಉದ್ಯೋಗ ಮತ್ತು ಮಹಿಳೆಯರ ಆರ್ಥಿಕ ಸುಧಾರಣೆಗಾಗಿ ಹೈ.ಕ. ಮಂಡಳಿ ವತಿಯಿಂದ ವಿಶೇಷ ಅನುದಾನ ನೀಡುವಂತೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಭೇಟಿ ಮಾಡುವುದಾಗಿ ಶಾಸಕ ಡಾ. ಉಮೇಶ ಜಾಧವ್ ಹೇಳಿದರು.
ತಾಲೂಕಿನ ಸಾಲೇಬೀರನಳ್ಳಿ ಗ್ರಾಮದಲ್ಲಿ ಕರ್ನಾಟಕ ಹಾಲು ಮಹಾಮಂಡಳಿ ಬೆಂಗಳೂರು, ಗುಲ್ಬರ್ಗ- ಬೀದರ್- ಯಾದಗಿರಿ ಹಾಲು ಒಕ್ಕೂಟ ನಿಯಮಿತ ಮತ್ತು ಸಾಲೇಬೀರನಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಮಿಶ್ರತಳಿ ಹೈನುರಾಸುಗಳ ಪ್ರದರ್ಶನ ಮತ್ತು ಹೈನುಗಾರಿಕೆ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಥಿಕ ಸುಧಾರಣೆ ಉದ್ದೇಶ: ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸಣ್ಣ ನೀರಾವರಿ ಕೆರೆ ಹೊಂದಿರುವ ತಾಲೂಕಿನಲ್ಲಿ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಮಹಿಳೆಯರು ಆರ್ಥಿಕ ಸುಧಾರಣೆಗೆ ಮಹತ್ವ ನೀಡಲಾಗುತ್ತಿದೆ. ಹಿಂದುಳಿದ ಭಾಗದಲ್ಲಿ ಹೆಚ್ಚಿನ ಉದ್ಯೋಗ ಮತ್ತು ಅಭಿವೃದ್ಧಿಗೋಸ್ಕರ ಅತೀ ಶೀಘ್ರದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ ಅವರನ್ನು ಭೇಟಿ ನೀಡಿ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮತ್ತು ವಿಶೇಷ ಅನುದಾನ ನೀಡುವಂತೆ ಮನವಿ ಮಾಡುವುದಾಗಿ ಶಾಸಕ ಡಾ. ಜಾಧವ್ ಹೇಳಿದರು.
ಕೋಲಾರ ಜಿಲ್ಲೆಯ ಮೈರಾಡ್ ಯೋಜನಾಧಿಕಾರಿ ರೋಹನ್ ಮಲಿಕ್ ಮಾತನಾಡಿ, ಕೃಷಿ ನಂತರ ಹೈನುಗಾರಿಕೆ ಲಾಭದಾಯಕ ಉದ್ಯೋಗವಾಗಿದೆ. ಆಂಧ್ರದಲ್ಲಿ ಮಹಿಳೆಯರೇ ಹಾಲು ಸಹಕಾರ ಸಂಘ ರಚಿಸಿಕೊಂಡು ಪ್ರತಿ ತಿಂಗಳು 4 ಕೋಟಿ ಆದಾಯ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗುಲ್ಬರ್ಗ- ಬೀದರ್- ಯಾದಗಿರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ಪಾಟೀಲ್, ಡಾ. ಸಂಗಮೆಶ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣಕುಮಾರ ಕಾಂಬಳೆ, ಜಿಲ್ಲಾ ತೋಟಗಾರಿಕೆ ಅಧಿಕಾರಿ ಮಂಜುನಾಥ, ಶಿವಶರಣಪ್ಪ ಬೆಣ್ಣೂರ, ಡಾ. ಬಿ.ಟಿ. ಪೂಜಾರ್, ನಾಗೇಶ ಇತರರು ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದರು.
ಜಿಪಂ ಸಿಇಒ ಟಿಎಚ್‌ಎಂ ಕುಮಾರ, ಜಿಪಂ ಸದಸ್ಯ ದೀಪಕನಾಗ ಪುಣ್ಯಶೆಟ್ಟ, ಪ್ರಭುಲಿಂಗ ಲೇವಡಿ, ಬಸರೆಡ್ಡಿ ಸೇರಿಕಾರ, ದಿವಾಕರ ಜಹಾಗೀರದಾರ್, ರಾಮಚಂದ್ರ ಜಾಧವ್, ತಾಪಂ ಅಧಿಕಾರಿ ಎಸ್.ಕೆ. ಟಕ್ಕಳಕಿ, ಜಾನು ರಾಠೋಡ್, ಅಂಜನಮ್ಮ ಬೇಡರ, ಉಪಾಧ್ಯಕ್ಷೆ ಶಾರದಾಬಾಯಿ, ರಾಮರಾವ ಶಿವಗೊಂಡ, ಜಗದೀಶಸಿಂಗ ಠಾಕೂರ ಇದ್ದರು. ಶಿರಾಜುದ್ದೀನ್ ಪಟೇಲ್ ಸ್ವಾಗತಿಸಿದರು. ಅಣವೀರಪ್ಪ ಶಂಕರ್ ಜನಾರ್ಧನ ಕುಲಕರ್ಣಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

