ಗುಲ್ಬರ್ಗಾ

ಸಮಾಜ ಬೆಳವಣಿಗೆಯೇ ಧರ್ಮಗಳ ಗುರಿ

Published On :

ಕೆಂಭಾವಿ: ಸತ್ಯ ಶುದ್ಧತ್ವದ ತಳಹದಿಯ ಮೇಲೆ ಸಮಾಜವನ್ನು ಬೆಳೆಸುವುದೇ ಎಲ್ಲ ಧರ್ಮಗಳ ಗುರಿ, ಧರ್ಮದ ದಿಕ್ಸೂಚಿ ಎಲ್ಲರ ಬಾಳಿಗೆ ಬೆಳಕನ್ನುಂಟು ಮಾಡುತ್ತದೆ ಎಂದು ಶಾಂತ ರುದ್ರಮುನಿ ಸ್ವಾಮಿ ಅವರು  ಹೇಳಿದರು.
 ಸಮೀಪದ ಕರಡಕಲ್ ಗ್ರಾಮದ ಕೋರಿಸಿದ್ದೇಶ್ವರ ಶಾಖಾ ಮಠದಲ್ಲಿ ನಡೆದ 160ನೇ ಶಿವಾನುಭವ ಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡಿ, ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಮಠ- ಮಂದಿರಗಳಲ್ಲಿ ನಡೆಯುವ ಸತ್ಸಂಗದಲ್ಲಿ ಪಾಲ್ಗೊಳ್ಳಬೇಕೆಂದರು.
ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಕೂಡಲಗಿ ಬಾಬಾ ಮಹಾರಾಜ ಮಠದ ಗಣಪತಿ ಮಹಾರಾಜ, ಮಠ-ಮಂದಿರಗಳು ನೆಮ್ಮದಿಯ ತಾಣಗಳಾಗಬೇಕು ಎಂದರು. ಮುದ್ನೂರ ಗ್ರಾಮದ ಕಂಠಿಹನುಮಾನ ದೇವಸ್ಥಾನದ ಮಲ್ಲಿಕಾರ್ಜುನ ದೇವರು ನೇತೃತ್ವ ವಹಿಸಿದ್ದರು, ತಾಪಂ ಸದಸ್ಯೆ ಕೃಷ್ಣಮ್ಮ ಬಡಿಗೇರ ಉದ್ಘಾಟಿಸಿದರು, ಮುಖಂಡರಾದ ಈಶ್ವರ ಬಡಿಗೇರ, ವೆಂಕಟರೆಡ್ಡಿ ರಾಯಚೂರ, ಡಾ. ಎಸ್.ವದಗಿ, ಮಲ್ಲಿಕಾರ್ಜುನ ಯಡಹಳ್ಳಿ, ಯಂಕಣ್ಣ ಶರಣರು, ಮನೋಹರ ಸಿಂದಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿವಪ್ರಕಾಶ ನಿರೂಪಿಸಿ ವಂದಿಸಿದರು. ಶಾಂತಗೌಡ ಮಾಲಿಪಾಟೀಲ, ಸಿದ್ದರಾಜ ರಾಜಾಪುರ, ಶಾಂತಪ್ಪ ಏವೂರ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.