ಗುಲ್ಬರ್ಗಾ

ವಾರಾಬಂದಿ ಹೆಚ್ಚಿಸಿ ಮಾ.31ರವರೆಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಪತ್ರ

Published On :

ಹುಣಸಗಿ: ವಾರಾಬಂದಿ ಅವಧಿಯನ್ನು ಹೆಚ್ಚಿಸಿ ಮಾರ್ಚ್ 31ರವರೆಗೂ ಕಾಲುವೆಗಳಿಗೆ ನೀರು ಹರಿಸಲು ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಎಡದಂಡೆಯ ರೈತರು ಕೃಷ್ಣಾ ಅಚ್ಚಕಟ್ಟು ಪ್ರದೇಶದ ನೀರಾವರಿ ಸಲಹಾ ಸಮಿತಿ ಆಲಮಟ್ಟಿ ಮತ್ತು ಬೆಂಗಳೂರು ಇವರಿಗೆ ಬರೆದ ಪತ್ರದಲ್ಲಿ ವಿನಂತಿಸಿದ್ದಾರೆ.
  ಈಗಾಗಲೇ ಸಲಹಾ ಸಮಿತಿ ಮತ್ತು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ವಾರಾಬಂದಿಯ ಮೂಲಕ ನೀರು ಉಳಿತಾಯ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಹೆಚ್ಚಿನ ಉಳಿತಾಯದ ದೃಷ್ಟಿಯಿಂದ ಮಾ. 1ರಿಂದ 9 ರವರೆಗೆ ಅವಧಿ ವಿಸ್ತರಣೆ ಮಾಡುವುದರ ಮೂಲಕ ಮಾರ್ಚ್ ಅಂತ್ಯದವರೆಗೆ ನೀರು ಹರಿಸಬಹುದಾಗಿದೆ. ಆದ್ದರಿಂದ ಮಾ. 31ರವರೆಗೂ ಕಾಲುವೆಗಳಿಗೆ ನೀರು ಹರಿಸುವ ಮೂಲಕ ರೈತರಿಗಾಗುವ ನೂರಾರು ಕೋಟಿ ರೂ.ಗಳ ನಷ್ಟವನ್ನು ತಪ್ಪಿಸಬೇಕೆಂದು ಅಧಿಕಾರಿಗಳಿಗೆ ರೈತರು ಪತ್ರದ ಮೂಲಕ ವಿನಂತಿಸಿದರು.
  ಈ ಸಂದರ್ಭದಲ್ಲಿ ಸಿದ್ರಾಮರಡ್ಡಿ ಮುದನೂರು, ಶಿವನಗೌಡ ಮಾಲಿಪಾಟೀಲ್, ಶಿವರಡ್ಡಿ ಯಡಹಳ್ಳಿ, ಹಣಮಂತರಡ್ಡಿ ಚೌದ್ರಿ, ಈರಣ್ಣ ಚೌದ್ರಿ, ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು. ಮುದನೂರು, ಯಾಳಗಿ, ರಾಂಪುರ, ಶಾಖಾಪುರ, ತೆಗ್ಗೆಳ್ಳಿ, ಅಗತೀರ್ಥ, ಗುಳಬಾಳ, ಸದಬ, ಅರಕೇರಾ (ಜೆ.) ಸೇರಿದಂತೆ ಅನೇಕ ಗ್ರಾಮಗಳ ರೈತರು ಭಾಗವಹಿಸಿದ್ದರು



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.