ಗುಲ್ಬರ್ಗಾ

ಪ್ರಗತಿ ಹಂತದಲ್ಲಿ ಕೆಲವು ಕಾಮಗಾರಿ

Published On :

ಯಾದಗಿರಿ: ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಭೀಮಮ್ಮ ಕೃಷ್ಣ ಚಪೇಟ್ಲ ಅಧ್ಯಕ್ಷತೆಯಲ್ಲಿ ಗುರುವಾರ ಕೆಡಿಪಿ ಪ್ರಗತಿ ಪರಿಶೀಲಿನಾ ಸಭೆ ನಡೆಯಿತು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆ, ಬೆಳೆಯಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕರಾದ ಡಾ. ಬಾಲರಾಜ್ ಅವರಿಗೆ ಪ್ರಶ್ನಿಸಿದರು. ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 836 ಮಿ.ಮಿ. ಇರುತ್ತದೆ. ಅದೇ ರೀತಿಯಾಗಿ ಮುಂಗಾರು ಹಂಗಾಮಿನ ಬೆಳೆಯಾದ ತೊಗರಿ ರಾಶಿ ಕಾರ್ಯಮುಗಿಯುವ ಹಂತದಲ್ಲಿದ್ದು ಹಿಂಗಾರು ಬೆಳೆಗಳಾದ ಜೋಳ ಮತ್ತು ಕಡಲೆ ಬೆಳೆಗಳು ಕಾಳು ಮಾಗುವ ಹಂತದಲ್ಲಿವೆ. ಮುಂಗಾರು ಹಂಗಾಮಿಗೆ ಒಟ್ಟು ಗುರಿ 1,94,000 ಹೆ. ಬಿತ್ತನೆ ಕ್ಷೇತ್ರದ ಪೈಕಿ 2,48,981 ಹೆ. (892.8) ಪ್ರದೇಶದಲ್ಲಿ ಬಿತ್ತನೆಯಾಗಿರುತ್ತದೆ. ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 16 ರೈತ ಸಂಪರ್ಕ ಕೇಂದ್ರಗಳು ಹಾಗೂ ಮೂರು ತಾಲೂಕುಗಳ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಭೆಯ ಗಮನಕ್ಕೆ ತಂದರು.
ಅದೇ ರೀತಿಯಾಗಿ 2013-14ರ ಹಿಂಗಾರು ಬೇಸಿಗೆ ಹಂಗಾಮಿನಲ್ಲಿ 9,102 ಕ್ವಿಂ.  ಶೇಂಗಾ, 287.32 ಕ್ವಿಂ. ಜೋಳ ಮತ್ತು 1,304 ಕ್ವಿಂ. ಬಿತ್ತನೆ ಬೀಜವನ್ನು 21,856 ರೈತರಿಗೆ, 183.77 ಲಕ್ಷ ಸಹಾಯ ಧನ ವಿತರಿಸಲಾಗಿದೆ.  ಮತ್ತು ರೈತರಿಗೆ ರಸಗೊಬ್ಬರ ಸರಬರಾಜು ಮಾಡಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.
ಅದೇ ರೀತಿ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ 2013-14ನೇ ಸಾಲಿನ ವಿವಿಧ ಇಲಾಖೆಯ ಯೋಜನೆಗಳ ಪ್ರಗತಿ ವರದಿಯನ್ನು ಪರಿಶೀಲಿಸಿ ಮಾತನಾಡಿದ ಅಧಿಕಾರಿಗಳು  ರಸ್ತೆ, ಮತ್ತು ಚರಂಡಿ, ಹಾಗೂ ಅಂಗನವಾಡಿಗಳ ಕಟ್ಟಡಗಳು, ಸಮುದಾಯ ಭವನ ಕಟ್ಟಡ ಹಾಗೂ ಪೈಪ್ ಲೈನ್ ಸಂಪರ್ಕವನ್ನು ಸಭೆಯ ಗಮನಕ್ಕೆ ತಂದರು. ಕೆಲವು ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಇನ್ನೂ ಕೆಲವೊಂದು ಕಾಮಗಾರಿಗಳು ಮುಗಿದಿವೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ಕುರಿತು ಡಾ. ಮಲ್ಲಿಕಾರ್ಜುನ ಮುಕ್ಕಾ ಅವರು ಮಾತನಾಡಿ ವಾರ್ಷಿಕ ಯೋಜನೆಗಳ ಪ್ರಕಾರ ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಸರ್ಕಾರ ನೀಡಿದ ಗುರಿಯಲ್ಲಿ  ಶೇ.95.82 ಪ್ರಗತಿ ಸಾಧಿಸಲಾಗಿದೆ ಎಂದರು.  
ಸಾರ್ವಜನಿಕ ಶಿಕ್ಷಣ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಜಿಲ್ಲಾ ಯೋಜನಾಧಿಕಾರಿ ಬಸವರಾಜ ಹಾಗೂ ಇತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.