ವಿಕಲಚೇತನರಿಗೆ ಸಲಕರಣೆ ವಿತರಣೆ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಫೆ.22
ಗುಲ್ಬರ್ಗ ವಿಭಾಗದ ಹಾಗೂ ಪಕ್ಕದ ರಾಜ್ಯಗಳಲ್ಲಿರುವ ವಿಕಲಚೇತನ, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ, ಸಫಾಯಿ ಕರ್ಮಚಾರಿ ಸೇರಿದಂತೆ ಒಟ್ಟು 799 ಫಲಾನುಭವಿಗಳಿಗೆ ಸುಮಾರು 20 ಕೋಟಿ ಮೌಲ್ಯದ ವಿವಿಧ ಬಗೆಯ ಸಲಕರಣೆಗಳು, ಸಾಲ, ಶಿಷ್ಯವೇತನ, ನೌಕರಿ ಕೊಡುವುದರ ಮೂಲಕ ಸಹಾಯ ವಿತರಣೆಯನ್ನು ಕೇಂದ್ರ ರೇಲ್ವೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ನೆರವೇರಿಸಿದರು.
ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಶನಿವಾರ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ ಹಮ್ಮಿಕೊಂಡಿದ್ದ ಸ್ವಾವಲಂಬನಾ ಸಂಯುಕ್ತ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಏನೇನು ಸಹಾಯ- ಸಲಕರಣೆ?: ಕಾನಪೂರದ ಅಲಿಂಕೊ ಕಂಪನಿ ವತಿಯಿಂದ 95 ತ್ರಿಚಕ್ರ ವಾಹನ, 30 ಗಾಲಿ ಕುರ್ಚಿ, 108 ಶ್ರವಣ ಸಾಧನ, 100 ಊರುಗೋಲು, 84 ಕೈಬಡಿಗೆ ಹಾಗೂ 52 ಬ್ರೈಲ್ ಸ್ಲೇಟ್ಸ್, ವಿಕಲಚೇತನರ ಕಲ್ಯಾಣ ಇಲಾಖೆಯಿಂದ 27 ಫಲಾನುಭವಿಗಳಿಗೆ ಸಾಲ ಹಾಗೂ ಇಬ್ಬರಿಗೆ ಶಿಷ್ಯವೇತನ ಹಾಗೂ 101 ಜನರಿಗೆ ಓಕೇಷನಲ್ ತರಬೇತಿ, ಸಫಾಯಿ ಕರ್ಮಚಾರಿ ಇಲಾಖೆ ವತಿಯಿಂದ 20 ಜನರಿಗೆ ಸಾಲ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 153 ಜನರಿಗೆ ಸಾಲ ಹಾಗೂ 10 ಜನರಿಗೆ ನೌಕರಿ ಮತ್ತು ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮದಿಂದ 18 ಜನರಿಗೆ ಸಾಲವನ್ನು ವಿತರಿಸಲಾಗಿದೆ ಎಂದು ಖರ್ಗೆ ಹೇಳಿದ್ದಾರೆ.
ಮೀಸಲಾತಿ ಪ್ರಮಾಣ ಶೇ.5ಕ್ಕೆ ಹೆಚ್ಚಳ ಸಾಧ್ಯತೆ: ಸದ್ಯದ ವಿಕಲಚೇತನ ಎಂಬರ್ಥದಲ್ಲಿ 7 ವಿಕಲತೆಗಳನ್ನು ಮಾತ್ರ ಗುರುತಿಸಲಾಗುತ್ತಿದೆ. ಇನ್ನುಳಿದ 12 ವಿಕಲತೆಗಳನ್ನು ಗುರುತಿಸಿ ಒಟ್ಟು 19 ವಿಕಲತೆಗಳನ್ನು ವಿಕಲಚೇತನ ಎಂಬರ್ಥದಲ್ಲಿ ಸೇರಿಸಲು ಹಾಗೂ ವಿಕಲಚೇತನರಿಗಿರುವ ಶೇ.3ರ ಮೀಸಲಾತಿಯನ್ನು ಶೇ.5ಕ್ಕೆ ಹೆಚ್ಚಿಸಲು ಇಲಾಖೆಯಿಂದ ಪ್ರಯತ್ನಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಈ ಕಾನೂನು ಜಾರಿಗೆ ತಂದು ವಿಕಲಚೇತನರ ಕಾರ್ಯಕ್ರಮಗಳ ಬದಲಾಗಿ ಅವರ ಹಕ್ಕಿನ ಕಾರ್ಯಕ್ರಮಗಳೆಂದು ರೂಪಿಸಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

