'ಶಹಾಪುರ ಅಭಿವೃದ್ಧಿ ಮೊದಲ ಆದ್ಯತೆ'
ಶಹಾಪುರ: ಯೋಜನೆಯಿಲ್ಲದೆ, ಸರಿಯಾದ ಯೋಚನೆ ಇಲ್ಲದೆ ಅವೈಜ್ಞಾನಿಕ ಪದ್ಧತಿಯಿಂದ ಹಲವಾರು ಕಾಮಗಾರಿಗಳು ಈ ಮುಂಚೆ ನಡೆದಿವೆ. ಮೂಲಭೂತ ಸೌಕರ್ಯದಡಿ ಅನೇಕ ಕಾರ್ಯಗಳು ನಡೆಯುಬೇಕಿದ್ದು ಇದಕ್ಕೆ ಯಾರನ್ನು ದೋಷಿಸದೇ ಪಟ್ಟಣದ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ ಎಂದು ಶಾಸಕ ಗುರುಪಾಟೀಲ ಶಿರವಾಳ ಹೇಳಿದ್ದಾರೆ.
ಅಭಿವೃದ್ಧಿಯನ್ನು ಸವಾಲೆಂದು ಸ್ವೀಕರಿಸಿ ಪಟ್ಟಣದ ಜನತೆಗೆ ಹಲವು ರೀತಿಯಲ್ಲಿ ಸೌಲಭ್ಯ ಕಲ್ಪಿಸಲು ಎಲ್ಲ ರೀತಿಯ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ಅವರು ಹೇಳಿದ್ದಾರೆ. ಪಟ್ಟಣದ ಹಳೇಪೇಟೆಯಲ್ಲಿನ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ನಿ., ವತಿಯಿಂದ ಆಯೋಜಿಸಿದ್ದ ಹಲವು ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ರು. 2.50 ಕೋಟಿ ಕಾಮಗಾರಿ ಶೀಘ್ರವೇ ಪ್ರಾರಂಭ:ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಸಿ.ಸಿ.ರಸೆ,್ತ ಚರಂಡಿ ಹಾಗೂ ದಾರಿದೀಪ, (1 ಕೋಟಿ) ವಾರ್ಡ್ ಸಂಖ್ಯೆ 12,16,07,21,15 ಮತ್ತು 5ರಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ(50 ಲಕ್ಷ) ವಾರ್ಡ್ ಸಂಖ್ಯೆ 10,02,11 ಮತ್ತು 14ರಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ (50 ಲಕ್ಷ), ವಾರ್ಡ್ಸಂಖ್ಯೆ 18 ಮತ್ತು 9ರಲ್ಲಿ ಸಿ.ಸಿ.ರಸ್ತೆ, ಚರಂಡಿ ಮತ್ತು ನಿರ್ಮಾಣಕ್ಕಾಗಿ (25 ಲಕ್ಷ) ಮತ್ತು ಮುಖ್ಯ ರಸ್ತೆಯಲ್ಲಿ ದಾರಿದೀಪ ಅಳವಡಿಕೆ( 25ಲಕ್ಷ)-ಹೀಗೆ ಒಟ್ಟು ರು. 2ಕೋಟಿ 50 ಲಕ್ಷ ಕಾಮಗಾರಿ ಶೀಘ್ರವೇ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು.
ರು. 3.75 ಕೋಟಿ ವೆಚ್ಚದ ಕಾಮಗಾರಿ: ಸರ್ಕಾರದಿಂದ ಮಂಜೂರಾದ, ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ನಗರೋತ್ಥಾನ ಯೋಜನೆಯಡಿಯಲ್ಲಿ ರು. 3.75 ಕೋಟಿ ವೆಚ್ಚದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ಹಾಲಭಾವಿ ರಸ್ತೆವರೆಗೆ ಸಿ.ಸಿ.ರಸ್ತೆ ಚರಂಡಿ, ಹಳೆ ತಹಶೀಲದಿಂದ ಶಿರವಾಳ ಕ್ರಾಸ್ವರೆಗೆ, ಚರಬಸವೇಶ್ವರ ದೇವಸ್ಥಾನದಿಂದ ಸಿದ್ದಲಿಂಗೇಶ್ವರ ಬೆಟ್ಟದವರೆಗೆ, ಸಿರವಾಳ ಕ್ರಾಸ್ನಿಂದ ನಾಗಾಯಲ್ಲಮ್ಮ ದೇವಸ್ಥಾನದವರೆಗೆ ಮತ್ತು ಚರಬಸವೇಶ್ವರ ಕಮಾನದಿಂದ ಚರಬಸವೇಶ್ವರ ಗದ್ದುಗೆವರೆಗೆ ರಸ್ತೆ ಅಗಲೀಕರಣ, ವಾರ್ಡ್ ಸಂಖ್ಯೆ 1ರ ಪರಿವಾರ ಹೋಟೇಲ್ನಿಂದ ಸಂತಪಾಲ ಶಾಲೆವರೆಗೆ, ವಾರ್ಡ್ ನಂಬರ್ 23ರಲ್ಲಿ ಗದ್ದಿಗೆರಾಯನ
ದೇವಸ್ಥಾನದಿಂದ ಕನಕನಗರದವರೆಗೆ ಕಾಮಗಾರಿಗೆ ಚಾಲನೆ ಸಿಗಲಿದೆ.
ಪುರಸಭೆ ಯೋಜನೆಯಡಿ 2.33 ಕೋಟಿ ಕಾಮಗಾರಿ: ಇದಲ್ಲದೆ 2013-14ನೇ ಸಾಲಿನಲ್ಲಿ ಪುರಸಭೆ ಯೋಜನೆಯಡಿಯಲ್ಲಿ 2.33 ಕೋಟಿ, ಅನುದಾನದ ಅವಕಾಶವಿದ್ದು ಪುರಸಭೆಯನ್ನು ನಗರಸಭೆಯಾಗಿ ಪರಿವರ್ತಿಸಲು 21.50ಲಕ್ಷ, ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ 21.50ಲಕ್ಷ, ಶಾಸಕರ ಅನುದಾನದಲ್ಲಿ ರಾಘವೇಂದ್ರ ದೇವಸ್ಥಾನದ ಹತ್ತಿರ ಸಮುದಾಯ ಭವನಕ್ಕೆ 10ಲಕ್ಷ, ಅಂಬಿಗರ ಚೌಡಯ್ಯ ದೇವಸ್ಥಾನದ ಹತ್ತಿರ ಸಮುದಾಯ ಭವನಕ್ಕೆ 10ಲಕ್ಷ, ಜೀವೇಶ್ವರ ಸಮುದಾಯ ಭವನದ ಮುಂದುವರಿದ ಕಾಮಾಗಾರಿಗಾಗಿ 5ಲಕ್ಷ, ಧಮ್ಮಗಿರಿ ಭಿಕ್ಕುನಿವಾಸಿ ಮುಂದುವರಿದ ಕಾಮಗಾರಿಗಾಗಿ 5ಲಕ್ಷ, ಮಿನಿ ಕುಡಿಯುವ ನೀರು ಸರಬರಾಜಿಗಾಗಿ 5ಲಕ್ಷ ಅನುದಾನದ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
49ಕೋಟಿ ರೂ ಒಳಚರಂಡಿ ಯೋಜನೆ:49ಕೋಟಿ ರೂ ಒಳಚರಂಡಿ ಯೋಜನೆ:ಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಇಷ್ಟರಲ್ಲೇ ಮಂಜೂರಾತಿ ಸಿಗಲಿದೆ. ಬಿಆರ್ಜಿಎಫ್ ಯೋಜನೆ ಅಡಿಯಲ್ಲಿ 13-14ನೇ ಸಾಲಿಗೆ 70ಲಕ್ಷ ವೆಚ್ಚದಲ್ಲಿ ಬಾಲಕರ ಪದವಿ ಮಹಾವಿದ್ಯಾಲಯ ಪುನರ್ ನಿರ್ಮಾಣ ಕಾರ್ಯ ನಡೆಯಲಿದೆ ಎಂದರು. ಹಿರಿಯ ಧುರೀಣರಾದ ಮಲ್ಲಣ್ಣಮಡ್ಡಿ, ಭೀಮಯ್ಯಗೌಡ ಕಟ್ಟಿಮನಿ ಮಾತನಾಡಿದರು.
ಯೋಜನಾಧಿಕಾರಿ ಬಲಭೀಮ ಕಾಂಬಳೆ ತಾಲೂಕಿನಲ್ಲಿ ಕೈಗೊಂಡ ಕಾಮಗಾರಿಗಳ ಮಾಹಿತಿ ನೀಡಿದರು. ವೇದಿಕೆಮೇಲೆ ಮಾಜಿ ಎಂಎಲ್ಸಿ. ಅಮಾತೆಪ್ಪ ಕಂದಕೂರ, ಡಾ.ಬಸವರಾಜ ಆನೇಗುಂದಿ, ಪುರಸಭೆ ಮುಖ್ಯಾಧಿಕಾರಿ ಎ.ಎಸ್.ಕುಂಟೋಜಿ, ಭೂಸೇನಾ ನಿಗಮದ ಸಹಾಯಕ ನಿರ್ದೇಶಕ ಎಲ್.ಜೆ.ಪಾಟೀಲ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

