ಗುಲ್ಬರ್ಗಾ

ಖಾತ್ರಿ ಹಣಕ್ಕಾಗಿ ಇಂದು ಪ್ರತಿಭಟನೆ

Published On :

ಗುಲ್ಬರ್ಗ: ಜೇವರ್ಗಿ ತಾಲೂಕಿನ ಹರನೂರ, ಹರವಾಳದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ವ್ಯಾಪಕ ಅವ್ಯವಹಾರವಾಗಿದ್ದು ತನಿಖೆ ನಡೆಸಬೇಕು, ಕೂಲಿ ಮಾಡಿದ ಕಾರ್ಮಿಕರಿಗೆ ಸಂಬಳ ಒದಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತಸಂಘ ತಾಲೂಕ ಸಮಿತಿ ಜೇವರ್ಗಿ ಕಳೆದ 4 ದಿನಗಳಿಂದ ಶುರು ಮಾಡಿರುವ ಧರಣಿ ಮುಂದುವರಿದಿದೆ.
  ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹರವಾಳ ಮತ್ತು ಹರನೂರ ಗ್ರಾಮ ಪಂಚಾಯ್ತಿಗಳಲ್ಲಿ ಒಟ್ಟು 1, 085 ಕೃಷಿ ಕೂಲಿ ಕಾರ್ಮಿಕರಿಗೆ ದುಡಿಸಿಕೊಂಡು ಒಟ್ಟು 150 ಕೆಲಸದ ದಿನಗಳು ಸೃಷ್ಟಿಸಲಾಗಿದೆ. ಕೆಲಸ ಮಾಡಿಸಿಕೊಂಡು ಪ್ರತಿಯೊಬ್ಬ ಜಾಬ್‌ಕಾರ್ಡ್‌ದಿಂದಲೇ ನೋಂದಣಿ ಮಾಡಿದ್ದಾರೆ. ಕಾರ್ಮಿಕರಿಗೆ ದುಡಿದಷ್ಟು ಸಂಪೂರ್ಣ ಸಂಬಳ ದಕ್ಕಿಲ್ಲ. ಪೂರ್ಣ ಸಂಬಳ ಕೊಡದೆ ಅಲ್ಪ ಸ್ವಲ್ಪ ಸಂಬಳ ವಿತರಿಸಿ ಮೋಸ ಮಾಡಲಾಗಿದೆ ಎಂದು ರೈತಸಂಘದ ಸುಭಾಸ ಹೊಸ್ಮನಿ ದೂರಿದ್ದಾರೆ.
ಭಾರಿ ಮೋಸ: ದುಡಿದಷ್ಟು ಸಂಪೂರ್ಣ ಸಂಬಳ ಕೊಡಲು ವಿನಾಕಾರಣ ಸತಾಯಿಸುತ್ತಿದ್ದಾರೆ. ಕೆಲಸ ಮಾಡಿದ್ದು 2013 ಏಪ್ರಿಲ್, ಮೇ ತಿಂಗಳಲ್ಲಿ ಸಂಬಳ ಕೊಡದೆ ಭಾರಿ ಮೋಸ ಮಾಡುತ್ತಿದ್ದಾರೆ.
ಹೋರಾಟ ನಾಲ್ಕನೇ ದಿನಕ್ಕೆ: ನಿಜವಾಗಿ ದುಡಿದ ಮುಗ್ದ ಬಡ ಕೂಲಿ ಕಾರ್ಮಿಕರ ಸಂಬಳ ಕೊಡುವಂತೆ ಈ ಹಿಂದೆ ಸಂಬಂಧ ಪಟ್ಟ ಇಲಾಖೆಗಳ ಮುಂದೆ ಒತ್ತಾಯಿಸುತ್ತಾ ಮತ್ತು ಈಗ ನಡೆದಿರುವ ಹೋರಾಟ ನಾಲ್ಕನೇ ದಿನಕ್ಕೆ ಮುಂದುವರೆದರು ಸಂಬಂಧ ಪಟ್ಟ ಅಧಿಕಾರಿಗಳು ಅಲಕ್ಷತನದಿಂದ ಈ ಹೋರಾಟದ ಬೇಡಿಕೆಗಳನ್ನು ಇತ್ಯರ್ಥ ಪಡಿಸುತ್ತಿಲ್ಲ, ಕಾರಣ ಫೆ.24 ರಂದು ಹೋರಾಟ ಉಗ್ರರೂಪಕ್ಕೆ ತಿರುಗಿಸಿ ಸೋಮವಾರ ತಾಪಂ ಕಚೇರಿಗೆ ಬೀಗ ಜಡಿಯುತ್ತೇವೆ ಎಂದು ಸುಭಾಸ ಹೊಸ್ಮನಿ ಹೇಳಿದ್ದಾರೆ.
  ಪ್ರಾಂತ ರೈತಸಂಘದ ಅಧ್ಯಕ್ಷರು ಸುಬಾಷ ಹೊಸ್ಮನಿ, ಕಾರ್ಯದರ್ಶಿ ಸಿದ್ದರಾಮ ಹರವಾಳ, ಖಜಾಂಚಿ ಬಸಯ್ಯ ಹಿರೇಮಠ, ಮುರಹರಿ ದಾಸ, ಮಲ್ಕಪ್ಪ ಮ್ಯಾಗೇರಿ, ಮರೇಮ್ಮ ಬಡಿಗೇರ, ಈರಮ್ಮ ಹರನೂರ, ರಸುಲ್ ಬ ಮುಜಾವರ್, ಶಂಕರಲಿಂಗ ಗೂಳುರ, ಶಿವರಾಜ ದೇಸಾಯಿ ಅನೇಕರು ಈ ಹೋರಾಟದಲ್ಲಿದ್ದಾರೆ. ಈ ಹೋರಾಟಕ್ಕೆ ಸದರಿ ಸಮಿತಿಯ ಜಿಲ್ಲಾಧ್ಯಕ್ಷ ಸರಣಬಸಪ್ಪ ಮಮಶೆಟ್ಟಿ ಹೋರಾಟ ನಡೆದ ಸ್ಥಳಕ್ಕೆ ಬಂದು ಬೆಂಬಲ ಕೊಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.