ಗುಲ್ಬರ್ಗಾ

ಗ್ರಾಪಂ ಕಂಪ್ಯೂಟರ್ ಆಪರೇಟರ್ಗಳ ಧರಣಿ

Published On :

ಚಿತ್ತಾಪುರ: ತಾಲೂಕಿನ ಗ್ರಾಮ ಪಂಚಾಯಿತಿಗಳ ಕಂಪ್ಯೂಟರ್ ಆಪರೇಟರ್ಗಳು ವೇತನ ತಾರತಮ್ಯ ಮತ್ತು ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಪಂ ಎದುರು ಕಂಪ್ಯೂಟರ್ ಆಪರೇಟರ್ ನೌಕರರ ಸಂಘದ ಅಧ್ಯಕ್ಷ ಶಾಮರಾವ ಮರಗೋಳ ನೇತೃತ್ವದಲ್ಲಿ ಬುಧವಾರ ಧರಣಿ ನಡೆಸಿದರು. ಕಾರ್ಮಿಕ ಇಲಾಖೆಯ ಆದೇಶದಂತೆ ಪರಿಷ್ಕೃತ ವೇತನ ನೀಡಬೇಕು. ಐದಾರು ತಿಂಗಳಿಂದ ತಡೆ ಹಿಡಿದ ವೇತನ ತಕ್ಷಣವೇ ಬಿಡುಗಡೆ ಮಾಡಬೇಕು. ಗ್ರಾಪಂ.ಗಳಲ್ಲಿ ಇಂಟರ್ನೆಟ್ ಮತ್ತು ವಿದ್ಯುತ್ ಸೌಲಭ್ಯ ಒದಗಿಸಬೇಕು.ಪ್ರತಿ ತಿಂಗಳು 5ನೇ ತಾರೀಕಿನೊಳಗೆ ಸಂಬಳ ಪಾವತಿ ಮಾಡಬೇಕು. ಗ್ರಾಪಂ ವ್ಯಾಪ್ತಿಯಿಂದ ತಾಲೂಕು ಕೇಂದ್ರಕ್ಕೆ ಇನ್ನಿತರ ಸ್ಥಳಗಳಿಗೆ ಹೋಗಿಬರಲು ಪ್ರವಾಸ ಭತ್ಯೆ  ನೀಡಬೇಕೆಂಬುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಪಂ ಇಒ ಬಸವರಾಜ ಜಿರಡೆ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಂತೋಷ ಶಿಲವಂತ, ಶಾಮರಾವ ಮರಗೋಳ, ಕಾರ್ಯದರ್ಶಿ ಅಮೃತ, ಜಗದೀಶ, ಸಂತೋಷ, ಲಿಯಾಕತ್ ಅಲಿ, ಸಿದ್ದಲಿಂಗ ಖಣದಾಳ, ಶಿವಾನಂದ ಅಲ್ಲೂರ, ಸತೀಶ ಕೊಡದೂರ, ಶಿವಲಿಂಗಪ್ಪ, ಅನೀಲಕುಮಾರ ಇದ್ದರು.

ಸೂಕ್ತ ಬೆಲೆಗೆ ಆಗ್ರಹಿಸಿ ಕಬ್ಬು ಬೆಳೆಗಾರರ ಧರಣಿ
ಗುಲ್ಬರ್ಗ: ಸರ್ಕಾರ ನಿಗದಿಪಡಿಸಿದಂತೆ ಕ್ವಿಂಟಾಲ್ ಕಬ್ಬಿಗೆ ರು.  2, 500 ಇದ್ದರೂ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ಕೇವಲ ರು.  1, 800  ಮಾತ್ರ ಪಾವತಿಸುತ್ತಿವೆ. ಇನ್ನೂ ರು.  700 ಹಾಗೇ ಬಾಕಿ ಉಳಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಕಬ್ಬು ಬೆಳೆಗಾರರು ಬುಧವಾರರ ನಗರದಲ್ಲಿ ಮುಖ್ಯ ರಸ್ತೆಯಲ್ಲಿ ಒಂದಾಗಿ ಬಂದು ರಸ್ತೆತಡೆ ನಡೆಸಿ ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸುವ ಪ್ರಯತ್ನ ಮಾಡಿದರು. ಸರ್ಕಾರವೇ ಕಬ್ಬಿನ ಬೆಲೆ ನಿಗದಿ ಮಾಡಿ ಘೋಷಿಸಿದ್ದರೂ ಸಹ ಕಾರ್ಖಾನೆಗಳು ತಮ್ಮ ಮನಸ್ಸಿಗೆ ಬಂದಂತೆಯೇ ಮಾಡುತ್ತಿವೆ. ಇದರಿಂದಾಗಿ ಕಬ್ಬು ಬೆಳೆದ ರೈತರು ತೊಂದರೆಗೆ ಸಿಲುಕಿದ್ದಾರೆ ಎಂದು ಘೋಷಣೆಗಳನ್ನು ಕೂಗಿದ ರೈತರು, ಕಾರ್ಖಾನೆ ಮಾಲೀಕರು ಕುತಂತ್ರದಿಂದ ರೈತರಿಗೆ ಯೋಗ್ಯ ಬೆಲೆ ನೀಡಲು ತಯಾರಿಲ್ಲ. ಇದಕ್ಕೆ ರೈತರ ವಿರೋಧವಿದೆ. ಸರ್ಕಾರ ನಿಗದಿಪಡಿಸಿದಂತೆ ಕ್ವಿಂಟಾಲ್ ಕಬ್ಬಿಗೆ ರು.  2, 500 ಹಣ ಸಿಗಬೇಕು. ಅಲ್ಲಿಯವರೆಗೂ ಹೋರಾಟ ನಿಲ್ಲದು ಎಂದು ಕಬ್ಬು ರೈತರು ಹೇಳಿದ್ದಾರೆ. ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಕರೆಯ ಮೇರೆಗೆ ಗುಲ್ಬರ್ಗದಲ್ಲಿ ಸಂಘದ ಜಿಲ್ಲಾಧ್ಯಕ್ಷ ಜಗದೀಶ ರಾಜಾಪೂರ ನೇತೃತ್ವದಲ್ಲಿ ಸೇರಿದ್ದ ರೈತರು ರಸ್ತೆತಡೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.