ಗುಲ್ಬರ್ಗಾ

ಶಿಕ್ಷಕರ ಸಮಸ್ಯೆ ಬಗೆಹರಿಸಲು ಕ್ರಮ: ರಾಧಾಕೃಷ್ಣ ಮದನಕರ್

Published On :

ಗುಲ್ಬರ್ಗ: ಶಿಕ್ಷಕರು ಸಹ ಅನೇಕ ಸಮಸ್ಯೆಗಳು ಎದುರಿಸುತ್ತಿದ್ದಾರೆ. ಇದು ಇಲಾಖೆ ಗಮನಕ್ಕೆ ಬಂದಿದ್ದು, ಹಂತ ಹಂತವಾಗಿ ಅವುಗಳನ್ನು ಬಗೆಹರಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ರಾಧಾಕೃಷ್ಣ ಮದನಕರ್ ಹೇಳಿದರು.
ಇಲ್ಲಿನ ರೋಟರಿ ಕ್ಲಬ್ ಶಾಲೆ ಆವರಣದಲ್ಲಿ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಜಿಲ್ಲಾ ಶಾಖೆ ಏರ್ಪಡಿಸಿದ್ದ ಗುಲ್ಬರ್ಗ ವಿಭಾಗ ಮಟ್ಟದ ಪದಾಧಿಕಾರಿಗಳ ಕಾರ್ಯಕಾರಿಣಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಿಕ್ಷಕರ ಮೇಲೆ ಅನೇಕ ಹೊಣೆಗಾರಿಕೆಗಳಿದ್ದು, ಅವುಗಳ ಜತೆಗೆ ಪಠ್ಯ ಮತ್ತು ಕ್ರೀಡೆಗಳನ್ನು ಕಲಿಸುವ ಮತ್ತೊಂದು ಗುರುತರ ಕೆಲಸವೂ ಇದೆ. ಎಲ್ಲವನ್ನು ನಿಭಾಯಿಸುವ ಕೆಲಸ ಶಿಕ್ಷಕರು ಮಾಡಬೇಕಾಗಿದೆ. ಕಾರಣ ಸರಿಯಾಗಿ ಕೆಲಸ ಮಾಡುವ ಮೂಲಕ ಇಲಾಖೆಗೆ ಒಳ್ಳೆಯ ಹೆಸರು ತರಬೇಕು ಎಂದರು.
ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ. ಮಂಜುನಾಥ ಮಾತನಾಡಿ, ರಾಜ್ಯದ ಶಿಕ್ಷಕರ ಸಮಸ್ಯೆಗಳು ಬಹಳಷ್ಟು ಇದ್ದು, ಅವುಗಳ ಈಡೇರಿಕೆಗೆ ತಾವು ಶ್ರಮಿಸುತ್ತಿರುವುದಾಗಿ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ. ಪರಮೇಶ್ವರ ಅವರು ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ರಾಜು ಲೆಂಗಟಿ ಮಾತನಾಡಿದರು.
ಸಂಘದ ಕಾನೂನು ಸಲಹೆಗಾರ ಶರಣಪ್ಪ ಮಟ್ಟೂರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲನಗೌಡ, ರಾಮು ಗುಗವಾಡ, ಬಿ.ಆರ್. ರಾಜಶೇಖರ, ಸಿದ್ದಣ್ಣ ಪೂಜಾರಿ, ಶಂಕರಲಿಂಗಪ್ಪ, ಮಲ್ಲಯ್ಯ ರಾಯಚೂರು, ಜಾಕೀರ ಹುಸೇನ್ ಕುಕನೂರ, ಬಸವರಾಜ ಮಾಸ್ತಿ, ಡಿ.ಡಿ. ಸಿಂಧೆ, ಸುರೇಶ ಕುಮಸಿ, ಚನ್ನಬಸವರೆಡ್ಡಿ, ಭೀಮಾಶಂಕರ ಮೇತ್ರೆ, ಮರೆಪ್ಪ ಬಡಿಗೇರ, ಎಸ್.ಎಸ್. ಪಾಟೀಲ್, ದೇವಿದಾಸ ರಾಠೋಡ, ಬಸಮ್ಮ ಪಾಟೀಲ್, ಮರೆಪ್ಪ, ರಾಜು ಪಾಯದ, ಗುರುರಾಜ ಕುಲಕರ್ಣಿ ಇತರರು ಉಪಸ್ಥಿತರಿದ್ದರು. ವರುಣಾ ಧರ್ಮಗಿರಿ ಮತ್ತು ವಿನ್ಯಾಸ ಧರ್ಮಗಿರಿ ಪ್ರಾರ್ಥನೆ ಗೀತೆ ಹಾಡಿದರು. ಎಸ್.ಎಸ್. ಪಾಟೀಲ್ ವಂದಿಸಿದರು. ನಿವೃತ್ತ ಹೊಂದಲಿರುವ ಗದಗ ಕೃಷ್ಣ, ಮತ್ತು ಜಿ.ಎಂ. ಯಾಸಿನ್, ಬಡ್ತಿ ಹೊಂದಿದ ಶಿವಪುತ್ರಪ್ಪ ಪಾಟೀಲ್ ಸೇರಿದಂತೆ 22 ಶಿಕ್ಷಕರನ್ನು ಗೌರವಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.