ನಾಳೆ ಘೋಳನೂರ ಹಿರೇಮಠ ಲೋಕಾರ್ಪಣೆ
ಕ.ಪ್ರ. ವಾರ್ತೆ,ಗುಲ್ಬರ್ಗ,ಜ.2
ಅಫಜಲ್ಪುರ ತಾಲೂಕಿನ ಘೋಳನೂರ ಗ್ರಾಮದಲ್ಲಿದ್ದ ಪುರಾತನ ಗುರು ಸಿದ್ದರಾಮೇಶ್ವರ ಮಠಕ್ಕೆ ಕಾಯಕಲ್ಪ ನೀಡಿರುವ ಸುಲಫಲ ಮಠಾಧೀಶ ಮಹಾಂತ ಶಿವಾಚಾರ್ಯ ಜ.4ರಂದು ಹಿರೇಮಠದ ನೂತನ ಕಟ್ಟಡ ಲೋಕಾರ್ಪಣೆ ಸಮಾರಂಭ ಹಾಗೂ ಇದೇ ಮಠದ ಮುಂದಿನ ದಾರಿಯಿಂದ ಘತ್ತರ್ಗಾ ಹಾಗೂ ಗಾಣಗಾಪುರಕ್ಕೆ ಪಾದಯಾತ್ರೆ ಮಾಡಿಕೊಂಡು ಹೋಗುವ ಭಕ್ತಾದಿಗಳಿಗೆ ನಿತ್ಯ ಅನ್ನ ದಾಸೋಹ ಸೇವೆಗೆ ಚಾಲನೆ ನೀಡುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಸಂಗತಿ ಪ್ರಕಟಿಸಿರುವ ಸುಲಫಲ ಶ್ರೀಗಳು ನೂತನ ಮಠದ ಕಟ್ಟಡವನ್ನು ಡಾ. ಶರಣಬಸವಪ್ಪ ಅಪ್ಪ ಉದ್ಘಾಟಿಸುವರು. ನಿಡುಮಾಮಿಡಿ ಮಾನವಧರ್ಮ ಶ್ರೀ, ಪಂಚಮಸಾಲಿ ಪೀಠದ ಸಿದ್ದಲಿಂಗ ಶ್ರೀ, ಅಬ್ಬೇತುಮಕೂರಿನ ಗಂಗಾಧರ ಶ್ರೀ ಅನೇಕ ಶರಣರು ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟನೆ: ಘೋಳನೂರು ಸುಲಫಲ ಮಠದ ಶ್ರೀ ಹುಟ್ಟಿದೂರು. ಭೀಮಾ ತೀರದಲ್ಲಿರುವ ಇಲ್ಲಿನ ಹಿರೇಮಠ ಪ್ರವಾಹಕ್ಕೆ ಸಿಲುಕಿ ತೊಂದರೆ ಅನುಭವಿಸಿತ್ತು. ಊರನ್ನು ಸರ್ಕಾರ ಸ್ಥಳಾಂತರ ಮಾಡಿದೆ. ಹೊಸ ಊರಿಗೆ ಹೊಂದಿಕೊಂಡಿರುವ ಸ್ಥಳದಲ್ಲೇ ಹಿರೇಮಠ ನೂತನ ಕಟ್ಟಡ ತಲೆ ಎತ್ತಿದೆ. ಜ.4ರ ಸಂಜೆ ನಡೆಯುವ ಸಮಾರಂಭದಲ್ಲಿ ಕೇಂದ್ರ ಸಚಿವ ಖರ್ಗೆ ಮಠದ ಮಹಾದ್ವಾರವನ್ನು, ಧರಂಸಿಂಗ್ ನಿತ್ಯ ಅನ್ನದಾಸೋಹ ಸೇವೆಗೆ ಚಾಲನೆ ನೀಡಲಿದ್ದಾರೆ. ಶಾಸಕ ಮಾಲೀಕಯ್ಯಾ ಗುತ್ತೇದಾರ್ ಅಧ್ಯಕ್ಷತೆ, ಮಾಜಿ ಶಾಸಕ ಎಂವೈ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸುತ್ತಿದ್ದಾರೆ.
ಪುರಾಣಕ್ಕೆ ಚಾಲನೆ: ಇದೇ ಸಂದರ್ಭದಲ್ಲಿ ಜ.4 ರಿಂದ ಜ.14ರ ವರೆಗೆ ಮಹಾದಾಸೋಹಿ ಶರಣಬಸವರ ಪುರಾಣಕ್ಕೂ ಚಾಲನೆ ನೀಡಲಾಗುತ್ತಿದೆ. ಮಹಾಂತ ಶ್ರೀ ಪುರಾಣ ನೀಡಲಿದ್ದಾರೆ. ಕಡಗಂಚಿಯ ವೀರಭದ್ರ ಶ್ರೀ, ಸೊನ್ನದ ಶಿವಾನಂದ ಶ್ರೀ, ಚಿಂಚನಸೂರಿನ ಸಿದ್ದಮಲ್ಲ ಶ್ರೀ, ಜೇವರ್ಗಿ, ಕಲ್ಲೂರ, ಬಟ್ಟಗೇರಿ, ಕಲ್ಲಹಂಗರ್ಗಾ, ಗುಲ್ಬರ್ಗ ರೋಜಾ ಪ್ರದೇಶ, ಹಿರೇಮಠ, ಆತನಮೂರು, ಯಲಗೋಣಿ ಪ್ರಭುಮಠ ಸೇರಿದಂತೆ ಅನೇಕ ಮಠಗಳ ಗುರುಗಳನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಎಂದು ಸುಲಫಲ ಮಠಾಧೀಶರು ಹೇಳಿದ್ದಾರೆ.
ಹಳೆಯ ಮಠಕ್ಕೆ 65 ಲಕ್ಷ ವೆಚ್ಚಮಾಡಿ ಹೊಸರೂಪ ನೀಡಿದ್ದಾರೆ. ಸರ್ಕಾರದಿಂದಲೂ ಅನುದಾನ ಪಡೆದು ಯಾತ್ರಿಕರಿಗಾಗಿ ಸೌಕರ್ಯ ಕಲ್ಪಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

