ಗುಲ್ಬರ್ಗಾ

ಕನ್ನಡ, ಅಲಕ್ಷ್ಯ ಬೇಡ: ಮಹಿಪಾಲರೆಡ್ಡಿ

Published On :

ಗುಲ್ಬರ್ಗ: ಕನ್ನಡಭಾಷೆ ಅಮ್ಮನ ಭಾಷೆ, ಅನ್ನ ನೀಡುವ ಭಾಷೆ. ಅಂತಹ ಕನ್ನಡದ ಬಗ್ಗೆ ಅಲಕ್ಷ ಬೇಡ ಎಂದು ಮಹಿಪಾಲರೆಡ್ಡಿ ಮುನ್ನೂರು ಸಲಹೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಅವರು ಮಹಾತ್ಮ ಜ್ಯೋತಿಬಾ ಫುಲೆ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿರುವ ಶಂಕರ ಕೋಡ್ಲಾ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸಂಸ್ಥಾಪಕರ ದಿನದಲ್ಲಿ ಮಾತನಾಡಿ, 2 ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡದ ಬಗ್ಗೆ ಕೀಳರಿಮೆ ಬೇಡ, ಇಂಗ್ಲಿಷ್ ಭಾಷೆಗಿಂತಲೂ ಕನ್ನಡ ಯಾವುದೇ ದೃಷ್ಟಿಯಲ್ಲಿ ಕಡಿಮೆ ಇಲ್ಲ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು. ದತ್ತಾತ್ರೇಯ .ಆರ್ ಮಾತನಾಡಿದರು.ಪ್ರೊ. ಶಿವರಾಜ ಪಾಟೀಲರು ಮಾತನಾಡಿದರು. ಸಮಾರಂಭದ ಸಾನಿಧ್ಯ ವಹಿಸಿದ್ದ ಉರಿಲಿಂಗಪೆದ್ದಿ ಸಂಸ್ಥಾನಮಠ ಚಾಮರಾಜ ನಗರದ ಪೀಠಾಧಿಪತಿಗಳಾಗಿರುವ ಜ್ಞಾನಪ್ರಕಾಶ ಶ್ರೀ ಆಶೀರ್ವಚನ ನೀಡಿದರು. ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರು ಭೀಮರಾವ ತೇಗಲತಿಪ್ಪಿ, ರಾಜ್ಯ ಅಸ್ಪೃಶ್ಯ ಸಮಾಜ ಮಹಾಸಭಾ ಜಿಲ್ಲಾಧ್ಯಕ್ಷ ಹಣಮಂತರಾವ ಕಲಕೇರಿ, ಕಕಾನಿಪಸಂ ಕಾರ್ಯದರ್ಶಿ ಸಿದ್ದಣ್ಣ ಮಾಲಗಾರ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಹಾತ್ಮ ಜೋತಿಬಾ ಫುಲೆ ಶಿಕ್ಷಣ ಸಂಸ್ಥೆಯ ಆಧೀನದಲ್ಲಿ ನಡೆಯುತ್ತಿರುವ ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು.
ನಾಳೆ ಪ್ರತಿಭಟನೆ
ಗುಲ್ಬರ್ಗ: ಓಕಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳು ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಅಡಿಗೆಯವರಾದ ಸುನಿತಾ ಗಂಡ ಸುರೇಶ ಅವರನ್ನು ವಿನಾಕಾರಣ ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಜ.4ರಂದು ಸಮತಾ ಸೈನಿಕ ದಳ ಜಿಲ್ಲಾ ಶಾಖೆಯ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 12ಕ್ಕೆ ನಗರದ ಜಗತ್ ವೃತ್ತದಿಂದ ಜಿಪಂ ಕಾರ್ಯಾಲಯದವರೆಗೆ ಪ್ರತಿಭಟನಾ ಮೆರವಣಿಗೆ ಮುಖಾಂತರ  ಮನವಿ ಪತ್ರ ಸಲ್ಲಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ಸಂಜೀವ ಟಿ. ಮಾಲೆ ತಿಳಿಸಿದ್ದಾರೆ. ಸಂಬಂಧಪಟ್ಟ ಬಿಸಿಯೂಟ ಅಧಿಕಾರಿಗಳಿಗೆ ನಮ್ಮ ಮನವಿ ಪರಿಶೀಲಿಸಿ ಪುನಃ ಅವರಿಗೆ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಸಮತಾ ಸೈನಿಕ ದಳ ತಿಳಿಸಿದೆ.
ಮಹಾದೇವ ನಿಧನ
ಶಹಾಬಾದ್: ಬಳಿಯ ಮುತ್ತಿಗೆ ಗ್ರಾಮದ ಮಹಾದೇವ ಅಡಿವೆಪ್ಪ ನಾಟೀಕಾರ (75) ಬುಧವಾರ ಮ.12ಕ್ಕೆ ನಿಧರಾಗಿದ್ದಾರೆ. ಮೃತರು ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳು, ಅಪಾರ ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಸಂಜೆ 4ಕ್ಕೆ ಗ್ರಾಮದಲ್ಲಿ ಆಯಿತು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ಹಿರೇಮಠ ಶೋಕ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.