ನದಿ ಸಮೀಪವಿದ್ದರೂ ಗ್ರಾಮಕ್ಕೆ ಕುಡಿವ ನೀರಿಗೆ ಪರದಾಟ
ಶಹಾಪುರ: ತಾಲೂಕಿನ ಅನಕಸುಗೂರ ಗ್ರಾಮ ಕೃಷ್ಣಾ ನದಿಯ ಸಮೀಪದಲ್ಲಿದ್ದರೂ ಕುಡಿಯುವ ನೀರಿಗಾಗಿ ಪರದಾಡುವಂಥ ಸ್ಥಿತಿ ಇದ್ದು, ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ. ಕೊಂಕಲ್ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಅನಕಸುಗೂರು ಗ್ರಾಮಕ್ಕೆ ಸಮೀಪದ ಕುರಿಹಾಳ ಗ್ರಾಮದಿಂದ ಪೈಪ್ಲೈನ್ ಜೋಡಣೆ ಇದ್ದು, ಈ ಮೊದಲು ನೀರು ಸರಬರಾಜು ನಡೆದಿತ್ತು. ಆದರೆ ಇತ್ತೀಚಿಗೆ ನೀರು ಸರಬರಾಜು ಯಂತ್ರಗಳು ಸುಟ್ಟು ಪೈಪ್ಲೈನ್ಗಳು ಹಾಳಾಗಿ ಹೋದರೂ ಗ್ರಾಪಂ ಇತ್ತ ಹೊರಳಿ ನೋಡುತ್ತಿಲ್ಲ. ಈ ಕುರಿತು ತಾಪಂ ಇಒಗೆ ಗ್ರಾಮದ ಕೆಲ ಪ್ರಮುಖರು ಜೆಡಿಎಸ್ ಉಪಾಧ್ಯಕ್ಷ ಶರಣರಡ್ಡಿ ಹತ್ತಿಗೂಡೂರ ನೇತೃತ್ವದಲ್ಲಿ ಮನವಿ ಸಲ್ಲಿಸಿದ್ದು ಗ್ರಾಪಂ.ನವರು ರಾಜಕೀಯ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದೆ. ನೀರಿನ ಬವಣೆ ತಪ್ಪಿಸಲು ಸಂಬಂಧಪಟ್ಟವರು ಖುದ್ದಾಗಿ ಪರಿಸ್ಥಿತಿ ಗಮನಿಸಿ ಅನುಕೂಲ ಮಾಡುಕೊಡಬೇಕೆಂದು ಮನವಿ ಮಾಡಿದ್ದಾರೆ.
--
ಮಾಲಕರೆಡ್ಡಿಗೆ ತಪ್ಪಿದ ಸಚಿವ ಸ್ಥಾನ: ಅಸಮಾಧಾನ
ಗುರುಮಠಕಲ್: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಹಾಲಿ ಶಾಸಕ ಡಾ. ಮಾಲಕರೆಡ್ಡಿಗೆ ಇಂದು ವಿಸ್ತರಣೆಯಾಗುತ್ತಿರುವ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಕೈ ತಪ್ಪಿರುವುದಕ್ಕೆ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಗೌಡ ಮಲ್ಹಾರ್ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಾ ಮಾಲಕರೆಡ್ಡಿ 5 ಬಾರಿ ಶಾಸಕರಾಗಿ ಆಯ್ಕೆಯಾಗಿ ಈ ಹಿಂದೆ ಎರಡು ಬಾರಿ ಸಚಿವರಾಗಿ ಕೆಲಸಮಾಡಿದ ಅನುಭವಿದ್ದು, ಅವರನ್ನು ಸಚಿವ ಸಂಪುಟ ವಿಸ್ತರಣೆಯಲ್ಲಿ ಕಡೆಗಣಿಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದರು. ಹಲವಾರು ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಶಾಸಕರಿಗೆ ಸಚಿವ ಸ್ಥಾನ ನೀಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿ, ಹೈಕಮಾಂಡ್ ನಿರ್ಧಾರದಿಂದ ನಿಷ್ಟಾವಂತ ಕಾರ್ಯಕರ್ತರಿಗೆ ನೋವಾಗಿದೆ ಎಂದು ವಿಷಾದಿಸಿದರು. ಸುದ್ದಿಗೋಷ್ಠಿಯಲ್ಲಿ ಮರೆಪ್ಪ ಬಿಳಾರ್, ಸುರೇಶ ಜೈನ್, ಶ್ರೀನಿವಾಸ ರೆಡ್ಡಿ ಕಂದಕೂರು ಸೇರಿದಂತೆ ಮತ್ತಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

