ವಾಡಿ; ಹಾಸ್ಟೆಲ್ ವಿದ್ಯಾರ್ಥಿ ನಾಪತ್ತೆ
ವಾಡಿ: ಪಟ್ಟಣ ಸಮೀಪ ಇರುವ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಸತಿ ನಿಲಯದ ಬಾಲಕ ನಾಪತ್ತೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಮಲ್ಲಿಕಾರ್ಜುನ ತಂದೆ ಬಸವರಾಜ ಕುಂಬಾರ (11) ಕಾಣೆಯಾದ ವಿದ್ಯಾರ್ಥಿ. ಈತ ಜೇವಗರ್ ತಾಲೂಕಿನ ಮಾರಡಗಿ ಗ್ರಾಮ ನಿವಾಸಿಯಾಗಿದ್ದಾನೆ. ಕಳೆದ 45 ದಿನಗಳ ಹಿಂದೆ ರಾವೂರ ಪಕ್ಕದ ಅಜ್ಜಿ ಮನೆ ಲಕ್ಷ್ಮೀಪುರವಾಡಿಗೆ ಬಂದು ಮರುದಿನ ಪುನಾ ವಸತಿ ನಿಲಯಕ್ಕೆ ಹೋಗುವುದಾಗಿ ಹೇಳಿ ಹೋದಾತ ನಾಪತ್ತೆಯಾಗಿದ್ದಾನೆ ಎಂದು ವಿದ್ಯಾರ್ಥಿಯ ತಂದೆ ಬಸವರಾಜ ಕುಂಬಾರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ನ.22 ರಂದೇ ಪ್ರಕರಣ ದಾಖಲಿಸಿಕೊಂಡಿರುವ ವಾಡಿ ಠಾಣೆ ಪಿಎಸ್ಐ ನಟರಾಜ ಲಾಡೆ, ಬಾಲಕನ ಪತ್ತೆಗೆ ಕಾರ್ಯ ಪ್ರವೃತ್ತರಾಗಿದ್ದಾರೆ.
ಘಟನೆ ಜರುಗಿ ಇಂದಿಗೆ 45 ದಿನಗಳು ಕಳೆದರೂ ವಿದ್ಯಾರ್ಥಿ ಮಾತ್ರ ಪತ್ತೆಯಾಗಿಲ್ಲ. ಈ ವಿದ್ಯಾರ್ಥಿ ಶಾಲೆಗೂ ಹಾಗೂ ವಸತಿ ನಿಲಯಕ್ಕೂ ಬಾರದೆ ಗೈರುಹಾಜರಿ ಇದ್ದಾನೆ ಎಂದು ತಿಳಿಸುವ ಮೂಲಕ ಶಿಕ್ಷಕರು ಕೈ ಚೆಲ್ಲಿದ್ದು, ಮಗನ ನಾಪತ್ತೆಯಿಂದ ಪಾಲಕರು ಮತ್ತಷ್ಟು ಆತಂಕಗೊಂಡಿದ್ದಾರೆ.
ಬಾಲಕನ ಮಾನಸಿಕ ಸ್ಥಿತಿ ಸದೃಢವಾಗಿದ್ದು, ನಾಲ್ಕು ಅಡಿ ಎತ್ತರ, ಸಾದಾ ಕೆಂಪು ಮುಖಬಣ್ಣ ಹೊಂದಿದ್ದಾನೆ. ಕನ್ನಡ ಭಾಷೆ ಮಾತನಾಡುತ್ತಾನೆ. ಬಾಲಕ ಪತ್ತೆಯಾದರೆ ಸಮೀಪದ ಪೊಲೀಸ್ ಠಾಣೆಗೆ ಮೊ. 9341706909 ಸಂಖ್ಯೆಗೆ ಸಂಪರ್ಕಿಸುವಂತೆ ರಾವೂರ ಸಿದ್ದಲಿಂಗೇಶ್ವರ ವಿದ್ಯಾಭೀವೃದ್ಧಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

