ಪುರುಷೋತ್ತಮಗೆ ಅತ್ಯುತ್ತಮ ಔಷಧಿ ವಿಜ್ಞಾನಿ ಪುರಸ್ಕಾರ
ಗುಲ್ಬರ್ಗ: ಇಲ್ಲಿನ ಹೈ-ಕ ಶಿಕ್ಷಣ ಸಂಸ್ಥೆಯ ಔಷಧಿ ವಿಜ್ಞಾನ ವಿದ್ಯಾಲಯದ ವಿಭಾಗ ಮುಖ್ಯಸ್ಥರಾಗಿರುವ ಡಾ. ಕೆ. ಪುರುಷೋತ್ತಮ ಅವರಿಗೆ ಔಷಧಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ವಿಜ್ಞಾನಿ ಎಂಬ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಔಷಧಿ ವಿಜ್ಞಾನ- ರಸಾಯನ ತಂತ್ರಜ್ಞಾನ ಜಾಗತಿಕ ಸಮ್ಮೇಳನದಲ್ಲಿ ಇವರ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದೇ ಅವರಿಗೆ ಈ ಪುರಸ್ಕಾರ ಅರಸಿ ಬರಲು ಕಾರಣವಾಗಿದೆ. ನಿಸರ್ಗ ಮತ್ತು ಆರೋಗ್ಯ ಕಾಳಜಿಗೆ ಇರುವ ಅಂತಾರಾಷ್ಟ್ರೀಯ ಸಂಸ್ಥೆಯವರು ಆಯೋಜಿಸಿದ್ದ ಔಷಧಿ ವಿಜ್ಞಾನ ಜಾಗತಿಕ ಸಮ್ಮೇಳನದಲ್ಲಿ ಡಾ. ಪುರುಷೋತ್ತಮ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯ್ತು. ಶ್ರೀಲಂಕಾದ ಕೋಲಂಬೋದಲ್ಲಿ ಈ ಸಮ್ಮೇಳನ ಡಿಸೆಂಬರ್ ತಿಂಗಳ 2ನೇ ವಾರದಲ್ಲಿ ಆಯೋಜಿಸಲಾಗಿತ್ತು. 25 ವರ್ಷಗಳಿಗೂ ಅಧಿಕ ಬೋಧನೆ- ಸಂಶೋಧನೆ ಅನುಭವವಿರುವ ಡಾ. ಪುರುಷೋತ್ತಮ ಅನೇಕ ಪಿಎಚ್.ಡಿಗಳಿಗೂ ಮಾರ್ಗದರ್ಶಕರಾಗಿದ್ದವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

