ಲೂಯಿ ಬ್ರೈಲ್ 205ನೇ ಜನ್ಮ ದಿನಾಚರಣೆ
ಗುಲ್ಬರ್ಗ: ಇಲ್ಲಿನ ಅಂಧ ನಿರುದ್ಯೋಗಿ ಸಮಾನ ಮನಸ್ಕರು ಕೂಡಿಕೊಂಡು ಹುಟ್ಟುಹಾಕಿರುವ ಸ್ಪಂದನ ಅಂಧರ ಕ್ಷೇಮಾಭಿವೃದ್ಧಿ ಸಂಘದಿಂದ ಶನಿವಾರ ಬ್ರೈಲ್ ಲಿಪಿಯ ಪಿತಾಮಹ ಲೂಯಿ ಬ್ರೈಲ್ ಅವರ 205ನೇ ಜನ್ಮದಿನೋತ್ಸವ ಆಚರಿಸಲಾಯ್ತು. ಶರಣಬಸವೇಶ್ವರ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಶಿವರಾಜ ಶಾಸ್ತ್ರೀ ಹೆರೂರ್ ಅಧ್ಯಕ್ಷತೆಯಲ್ಲಿ ವಹಿಸಿ ಮಾತನಾಡಿ, ಅಂಗವಿಕಲರ ಯೋಗಕ್ಷೇವುದ ಕಾಯ್ದೆ ಜಾರಿಗೊಂಡು 3 ದಶಕ ಉರುಳಿದರೂ ಅದು ಪ್ರಯೋಜನವಾಗುತ್ತಿಲ್ಲ. ಮಾನವೀಯತೆ ಹಿನ್ನೆಲೆಯಲ್ಲಿ ಹಾಗೂ ನ್ಯಾಯಾಲಯ ಆದೇಶಗಳಲ್ಲಿ ಅಂಧರಿಗೂ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಶೇ.2ರಷ್ಟು ನೇಮಕಾತಿ ಮಾಡಿಕೊಳ್ಳಬೇಕು ಎಂದರು. ಲೂಯಿ ಬ್ರೈಲ್ ಜನ್ಮದಿನದ ವೇದಿಕೆ ಅಂಧರನ್ನು ಕಾಡುತ್ತಿರುವ ಸರ್ವ ಸಮಸ್ಯೆಗಳ ಚರ್ಚೆಗೆ ಕಾರಣವಾಯ್ತು. ಕಾರ್ಯಕ್ರಮದಲ್ಲಿ ಭಾರತಿ ರೇಷ್ಮೆ, ಸಿ.ಜಿ. ಹಳ್ಳದ್, ವೆಂಕಣ್ಣ ದೊಡ್ಡೇಗೌಡರ, ಶರಣಬಸವಯ್ಯ ಮಠ, ಜಗನ್ನಾಥ ಇ.ಟಿ., ಬಿ.ಆರ್. ಪವಾರ್, ಜೆ.ಬಿ. ಹುಲಿ, ಶಿವಲಿಂಗಪ್ಪ ಉಪಳಾಂವ್, ಮಲ್ಲಿಕಾರ್ಜುನ ಕುಸ್ತಿ, ಸ್ಪಂದನ ಅಧ್ಯಕ್ಷ ಸೂರ್ಯಕಾಂತ ಬಿರಾದಾರ, ಕಾರ್ಯದರ್ಶಿ ಶರಣಪ್ಪ ಬಿರಾದಾರ ಭಾಗವಹಿಸಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

