ಗುಲ್ಬರ್ಗಾ

ಶಾಲೆಗೆ ಹೆಚ್ಚುವರಿ ಶಿಕ್ಷಕರನ್ನು ನೇಮಿಸಿ: ವಿಶ್ವನಾಥ ರಡ್ಡಿ

Published On :

ಯಾದಗಿರಿ: ಶಾಲೆಯ ಮೂಲಸೌಕರ್ಯ ಹಾಗೂ ಶಿಕ್ಷಣ ಸುಧಾರಿಸುವಲ್ಲಿ ಕೆಲಸ ನಡೆದಿದೆ. ಜೊತೆಗೆ ಹೆಚ್ಚುವರಿ ಶಿಕ್ಷಕರನ್ನು ನೇಮಿಸಿದರೆ ಇನ್ನು ಉತ್ತಮ ಎಂದು ಸಂಪನ್ಮೂಲ ವ್ಯಕ್ತಿಗಳಾದ ವಿಶ್ವನಾಥ ರಡ್ಡಿ ಮಾಲಿಪಾಟೀಲ್ ನುಡಿದರು.  ಸಾರ್ವಜನಿಕ ಶಿಕ್ಷಣ ಇಲಾಖೆ ಕಲಿಕೆ ಸರ್ ರತನ್ ಟಾಟಾ ಟ್ರಸ್ಟ್ ಯಾದಗಿರಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಮ್ಮಶೆಟ್ಟಹಳ್ಳಿಯಲ್ಲಿ ಇಂದು ಪಾಲಕರ ಸಭೆ ಹಮ್ಮಿಕೊಳ್ಳಲಾಯಿತು.  ಸಂಯೋಜಕ ಶಂಭುಲಿಂಗ ಮಾತನಾಡಿ, ಕಲಿಕೆ ಸಂಸ್ಥೆಯ ಎಲ್ಲಾ ಕಾರ್ಯಕ್ರಮಗಳ ಲಾಭ ಪಾಲಕರೆಲ್ಲಾ ತಮ್ಮ ಮಕ್ಕಳು ಪಡೆಯುವಂತೆ ಮಾಡಿ ಮಕ್ಕಳಿಗೆ ದಿನಾಲು ತಪ್ಪದೆ ಶಾಲೆಗೆ ಕಳಿಸಬೇಕು ಎಂದರು. ಜೊತೆಗೆ ಇಂಗ್ಲಿಷ್ ಭಾಷೆಯ ಮಹತ್ವ ಕುರಿತು ಮಾತನಾಡಿದರು.  ಸಂಯೋಜಕ ಬಸವರಾಜ, ಪಾಲಕ ಮಲ್ಲಪ್ಪ ಕುಂಬಾರ ಮಾತನಾಡಿದರು. ಕಲಿಕಾಚೇತನ ಮಕ್ಕಳಾದ ಶರಣಪ್ಪಾ, ಮಂಜುಳಾ, ಅನಿತಾ, ಮಹೇಶ ಮಾತಾನಾಡಿ ತಮ್ಮ ಕಲಿಕೆಯನ್ನು ಪ್ರದರ್ಶನ ಮಾಡಿದರು. ಸುಮಾರು 40ಕ್ಕೂ ಹೆಚ್ಚು ಪಾಲಕರು ಭಾಗವಹಿಸಿದ್ದರು.


ಜನಸ್ಪಂದನ ಸಭೆಗಳಲ್ಲಿ ಭಾಗವಹಿಸಿ: ಅಂಬರಶೆಟ್ಟಿ
ಹುಣಸಗಿ: ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ಉದ್ದೇಶದಿಂದ ಜನಸಂಪರ್ಕ ಸಭೆ ನಡೆಸಲಾಗುತ್ತಿದ್ದು, ಜನರು ಇಂತಹ ಸಭೆಗಳಲ್ಲಿ ಭಾಗವಹಿಸಿ ಗ್ರಾಮಕ್ಕೆ ಸಂಬಂಧಿಸಿದ ಹಾಗೂ ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹುಣಸಗಿ ವಿಶೇಷ ತಹಸೀಲ್ದಾರ್ ಬಸವರಾಜ ಅಂಬರಶೆಟ್ಟಿ ಸಲಹೆ ನೀಡಿದರು. ಸಮೀಪದ ವಜ್ಜಲ್ ಗ್ರಾಮಪಂಚಾಯ್ತಿ ಆವರಣದಲ್ಲಿ 77ನೇ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ತಾಲೂಕಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಯೋಜನೆಗಳ ಕುರಿತು ವಿವರವಾಗಿ ಜನರಿಗೆ ತಿಳಿಸಿಕೊಡಲಾಯಿತು.
ಮುಖಂಡರಾದ ರಾಜಶೇಖರಗೌಡ ಪಾಟೀಲ ಮಾತನಾಡಿ, ಜನಸಂಪರ್ಕ ಸಭೆಯ ಮಾಹಿತಿಯನ್ನು ಮೊದಲೇ ಆ ಗ್ರಾಮದ ಜನತೆಗೆ ತಿಳಿಸುವುದರಿಂದ ಆ ಗ್ರಾಮ ಮತ್ತು ಪಂಚಾಯ್ತಿ ವ್ಯಾಪ್ತಿಯ ಸಮಸ್ಯೆಗಳ ಕುರಿತು ಸಾರ್ವಜನಿಕರು ಅಹವಾಲು ಸಲ್ಲಿಸುತ್ತಾರೆ. ಆದರೆ ಸಭೆಯ ಸಮರ್ಪಕ ಮಾಹಿತಿಯನ್ನು ಜನರಿಗೆ ತಲುಪಿಸಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು. ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಹಣಮವ್ವ ಜಾಲಹಳ್ಳಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲುಕಾ ವೈದ್ಯಾಧಿಕಾರಿ ಆರ್.ವಿ. ನಾಯಕ, ಕೇಸರಸಿಂಗ್ ಹಿಜೇರಿ, ದೇನುಸಿಂಗ ಚೌವ್ಹಾಣ, ಚಂದ್ರಕಾಂತ ಕೊಣ್ಣುರ, ಮೋಹನ ದೇಶಮುಖ, ಅಬಕಾರಿ ಪಿಎಸ್‌ಐ ಭಾರತಿ ಇತರ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.