ಸಮಾಜ ವಿರೋಧಿಗಳ ಮೇಲೆ ಮೊಕದ್ದಮೆ
ಗುರುಮಠಕಲ್: ಜಿಲ್ಲೆಯಲ್ಲಿ ಕೋಲಿ ಸಮಾಜದ ನಕಲಿ ಜಿಲ್ಲಾ ಅಧ್ಯಕ್ಷರೆಂದು ಹೇಳಿಕೊಂಡು ಸಮಾಜದವರನ್ನು ತಪ್ಪುದಾರಿಗೆಳೆಯುತ್ತಿರುವ ವ್ಯಕ್ತಿಗಳ ವಿರುದ್ಧ ಶೀಘ್ರ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಯಾದಗಿರಿ ಜಿಲ್ಲಾ ಕೋಲಿ (ಗಂಗಾಮತ) ಸಮಾಜ (ರಿ.)ದ ಅಧ್ಯಕ್ಷ ಮೌಲಾಲಿ ಅನಪುರ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ಕೆಲವರು ತಮ್ಮನ್ನು ಸ್ವಯಂಘೋಷಿತ ಅಧ್ಯಕ್ಷರೆಂದು ಬಿಂಬಿಸಿಕೊಳ್ಳುತ್ತ, ಸಮಾಜದವರನ್ನು ತಪ್ಪುದಾರಿಗೆಳೆಯುವುದು ಅಲ್ಲದೇ ಕೋಲಿ ಸಮಾಜ ಸಂಘಟನೆ ನಿರತರಾದವರ ಕುರಿತು ಹಗುರಾಗಿ ಮಾತನಾಡುವುದು, ಹಿಂದುಳಿದ ಸಮಾಜದವರ ಮೇಲೆ ಸಮಾಜದ ಮುಗ್ಧರನ್ನು ಎತ್ತಿಕಟ್ಟಿ ಹಲ್ಲೆಗೆ ಪ್ರೇರೇಪಿಸುವುದು ಮಾಡುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳ ಮೇಲೆ ಇತರರ ಮೇಲೆ ಪ್ರಭಾವ ಬೀರಿ ವಂತಿಗೆ ಸಂಗ್ರಹಿಸುವ, ಸಮಾಜ ವಿರೋಧಿ ಕಾನೂನು ವಿರೋಧಿ ಚಟುವಟಿಕೆ ನಡೆಸುತ್ತಿರುವವರ ಇಲ್ಲವೇ ನಡೆಸಿದವರ ಮೇಲೆ ಸಮಾಜದ ವತಿಯಿಂದ ಶೀಘ್ರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮೌಲಾಲಿ ತಿಳಿಸಿದ್ದಾರೆ.
ಡಿ.ಇಡಿ: ಕೇಂದ್ರದ ಸುತ್ತಲೂ ನಿಷೇಧಾಜ್ಞೆ
ಯಾದಗಿರಿ: ಜ.3ರಿಂದ ಆರಂಭವಾಗಿರುವ ಪ್ರಥಮ ಮತ್ತು ದ್ವಿತೀಯ ಡಿ.ಇಡಿ ಪೂರಕ ಪರೀಕ್ಷಾ ಕೇಂದ್ರಗಳ ಸುತ್ತಲೂ 144ನೇ ಕಲಂ ಅನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಫ್.ಆರ್. ಜಮಾದಾರ್ ಆದೇಶ ಹೊರಡಿಸಿದ್ದಾರೆ. ಮೇಲಿನ ದಿನಾಂಕಗಳಂದು ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ಯಾದಗಿರಿ ಜವಾಹರ ಡಿ.ಇಡಿ ಕಾಲೇಜ್ ಪರೀಕ್ಷೆ ಕೇಂದ್ರ ಸುತ್ತಲೂ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ನಕಲು ಅಕ್ರಮ ತಡೆಯಲು ಪರೀಕ್ಷೆ ಕೇಂದ್ರ ಸುತ್ತಲೂ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್ಟಿಡಿ, ಮೊಬೈಲ್, ಪೇಜರ್, ಜೆರಾಕ್ಸ್, ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಲಾಗಿದೆ. ಶಿಕ್ಷಕರನ್ನು ಹೊರತುಪಡಿಸಿ ಉಳಿದವರಿಗೆ ಪರವಾನಗಿ ಇಲ್ಲದೇ ಪ್ರವೇಶ ಮಾಡುವುದನ್ನು ನಿಷೇಧಿಸಲಾಗಿದೆ. 200 ಮೀಟರ್ ಪರೀಕ್ಷಾ ಕೇಂದ್ರಗಳ ಸುತ್ತಲೂ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ.
ಮೈಲಾಪುರ ಜಾತ್ರೆ: ತೆಂಗಿನಕಾಯಿ ಹರಾಜು
ಯಾದಗಿರಿ: ಮೈಲಾರಲಿಂಗೇಶ್ವರಿ ದೇವಸ್ಥಾನ ಮೈಲಾಪುರ ದೇವಸ್ಥಾನ ಮೈಲಾಪುರ ಯಾದಗಿರಿದಲ್ಲಿ ಜ. 13ರಿಂದ ಜ.18ರವರೆಗೆ ನಡೆಯುವ ಜಾತ್ರೆಯಲ್ಲಿ ಸಗಟು ತೆಂಗಿನಕಾಯಿ ಹರಾಜು, ಕೂದಲು ಹರಾಜು, ಜ. 9ರಂದು ಸಂಜೆ 5ರಿಂದ 7ರವರೆಗೆ ಆನ್ಲೈನ್ ಮುಖಾಂತರ ಬಿಡ್ ಅಥವಾ ಹರಾಜು ಪ್ರಕಿಯೆ ಜರುಗಿಸಲಾಗುವುದು. ಭಾಗವಹಿಸುವವರು ಮಾಹಿತಿಗೆ ತಹಶೀಲ್ದಾರ್ ಯಾದಗಿರಿ(ದೇವಸ್ಥಾನ ಶಾಖೆ)ನ್ನು ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

