ಗುಲ್ಬರ್ಗಾ

ಶೀಘ್ರದಲ್ಲಿ ರೇಲ್ವೆ ಬೋಗಿ ಕಾರ್ಖಾನೆ ಘಟಕ ಆರಂಭಕ್ಕೆ ಕ್ರಮ: ಸಚಿವ

Published On :

ಗುರುಮಠಕಲ್: ರಾಜ್ಯ ಸರ್ಕಾರ ಅಗತ್ಯ ಭೂಮಿ ಒದಗಿಸಿದರೆ ಶೀಘ್ರದಲ್ಲಿ ರೇಲ್ವೆ ಬೋಗಿ ಕಾರ್ಖಾನೆ ಘಟಕ ಆರಂಭಿಸಲು ಕ್ರಮಕೈಗೊಳ್ಳುವುದಾಗಿ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ತಾಲೂಕಿನ ಕಡೇಚೂರು ಗ್ರಾಮದಲ್ಲಿ ಎಲ್‌ಎಚ್ಬಿ ಡಿಸೈನ್ ಕೋಚ್‌ಗಳಿಗೆ ಬೋಗಿ ತಯಾರಿಸುವ ಘಟಕ ಸ್ಥಾಪನೆಗಾಗಿ ಭೂಮಿಯನ್ನು ಪರಿಶೀಲಿಸಿದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಘಟಕ ಆರಂಭಿಸಲು ಸುಮಾರು 150 ರಿಂದ 160 ಎಕರೆ ಭೂಮಿ ಬೇಕಾಗಿದ್ದು, ಕೂಡಲೇ ರಾಜ್ಯ ಸರ್ಕಾರ ಭೂಮಿ ನೀಡಿದರೆ ಘಟಕ ಆರಂಭಕ್ಕೆ ಕ್ರಮಕೈಗೊಳ್ಳುವುದಾಗಿ ಹೇಳಿದರು. ಐದು ವರ್ಷದ ಅವಧಿಯಲ್ಲಿ ಸುಮಾರು 750 ಕೋಟಿ ವೆಚ್ಚದಲ್ಲಿ ಘಟಕ ಆರಂಭವಾಗಲಿದೆ. ಮೊದಲನೇ ಹಂತದಲ್ಲಿ ಈಗಾಗಲೇ 75 ಕೋಟಿ ಬಿಡುಗಡೆಯಾಗಿದೆ. ಈ ಘಟಕದಲ್ಲಿ ಎಲ್‌ಎಚ್ಬಿ ಬೋಗಿಯನ್ನು ತಯಾರಿಸಿ, ದುರಸ್ತಿಗೊಳಿಸಲಾಗುತ್ತದೆ ಎಂದರು.  
ಈಗಾಗಲೇ ರಾಜ್ಯ ಸರ್ಕಾರ ಕಡೇಚೂರು ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ಭೂಮಿ ಸ್ವಾಧೀನ ಮಾಡಿಕೊಂಡಿದೆ. ಅದರಲ್ಲಿಯೇ ರೇಲ್ವೆ ಬೋಗಿ ಘಟಕ ಸ್ಥಾಪನೆಗೆ ಭೂಮಿ ನೀಡಿದರೆ ಅನುಕೂಲವಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಭೂಮಿ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕೆಂದು ಹೇಳಿದರು.
ಕೋಲಾರದ ನಂತರ ರಾಜ್ಯಕ್ಕೆ ಎರಡನೇ ರೇಲ್ವೆ ಬೋಗಿ ಕಾರ್ಖಾನೆ ಮಂಜೂರಾಗಿದ್ದು, ಈ ಭಾಗಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ್ ಚಿಂಚನಸೂರ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮರಿಗೌಡ ಹುಲಕಲ್, ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ, ಶ್ರೇಣಿಕುಮಾರ ಧೋಕಾ, ಸೇರಿದಂತೆ ಇತರರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.