9ರಂದು ಸರ್ಕಾರಿ ನೌಕರರ ಕ್ರೀಡಾಕೂಟ
ಯಾದಗಿರಿ: ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಜ.9ರಂದು ಏರ್ಪಡಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಪೊಲೀಸ್, ಪ್ಯಾರಾಮಿಲಿಟರಿ, ಆರ್ಪಿಎಫ್ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ಳಹಿಸುತ್ತಿರುವವರು, ಬ್ಯಾಂಕ್ ಸಿಬ್ಬಂದಿ, ದೈಹಿಕ ಶಿಕ್ಷಕರು ಭಾಗವಹಿಸಲು ಅವಕಾಶ ಇರುವುದಿಲ್ಲ. ಕ್ರೀಡಾ ಕೂಟಗಳ ಜೊತೆಗೆ ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ, ವಾದ್ಯ ಸಂಗೀತ ಹಾಗೂ ನೃತ್ಯ ಸ್ಪರ್ಧೆಗಳನ್ನು ಸಹ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಡಾನ್ ಬಾಸ್ಕೋ ಶಾಲೆ ಎದುರಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಯುವಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಲು ಕೋರಲಾಗಿದೆ.
ಕಲಿಕೋತ್ಸವ ಮಕ್ಕಳ ಕಲಿಕೆಗೆ ಪೂರಕ
ಹುಣಸಗಿ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಬೆಳಕಿಗೆ ತರಲು ಹಾಗೂ ಕಲಿಕೆಗೆ ಖಾತ್ರೆ ಒದಗಿಸಲು ಕಲಿಕೋತ್ಸವ ಕಾರ್ಯಕ್ರಮ ಉತ್ತೇಜನಕಾರಿ ಎಂದು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಪಡಿಯಣ್ಣ ಬೆಳ್ಳುಬ್ಬಿ ಹೇಳಿದರು. ಹುಣಸಗಿ ಕ್ಲಸ್ಟರ್ ಮಟ್ಟದ ಕಲಿಕೋತ್ಸವ ಕಾರ್ಯಕ್ರಮವು ಸಮೀಪದ ಮಾರಲಭಾವಿಯಲ್ಲಿ ಉದ್ಘಾಟಿಸಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಬಸವಂತ್ರಾಯ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಹುಣಸಗಿ ಸಿಆರ್ಪಿ ಬಸವರಾಜ, ಬಿಆರ್ಪಿ ಶಂಭುದೇವ ಹಿರೇಮಠ, ಸಿಆರ್ಪಿ ಬಸವರಾಜ ಇಳಿಗೇರ, ಸಿಆರ್ಪಿ ಸುಖದೇವ ಪಾಟೀಲ್, ಶಿವಪ್ಪ ಸಜ್ಜನ್, ಮುಖ್ಯ ಶಿಕ್ಷಕ ಮಲ್ಹಾರಿರಾವ ಜಹಾಗೀರದಾರ, ಸಹಶಿಕ್ಷಕರು ಭಾಗವಹಿಸಿದ್ದರು. ಶಿಕ್ಷಕ ಶಿವುಕುಮಾರ ನಿರೂಪಿಸಿದರು. ಕಾಂತೇಶ ಸ್ವಾಗತಿಸಿದರು. ಶಶಿಧರ ವಂದಿಸಿದರು.
ಅಂಬಿಗರ ಚೌಡಯ್ಯ ಕ್ರಾಂತಿಕಾರಿ ವಚನಕಾರ
ಸುರಪುರ: ಅಂಬಿಗರ ಚೌಡಯ್ಯ ಕಾಯಕ ನಿಷ್ಠೆ ಇಂದಿನ ಪೀಳಿಗೆಗೆ ದಾರಿ ದೀಪ. 12ನೇ ಶತಮಾನದಲ್ಲಿ ತನ್ನ ಕ್ರಾಂತಿಕಾರಕ ವಚನಗಳ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದಿದ್ದರು. ಸಮಾಜದಲ್ಲಿ ಜಾಗೃತಿ ಮೂಡಿಸಿದ ಚೌಡಯ್ಯ ಒಬ್ಬ ಕ್ರಾಂತಿಕಾರಿ ವಚನಕಾರ ಎಂದು ಕೋಲಿ ಗಂಗಾಮತ ಸಮಾಜದ ತಾಲೂಕು ಅಧ್ಯಕ್ಷ ಯಂಕಣ್ಣ ಕಟ್ಟಿಮನಿ ಹೇಳಿದರು. ತಾಲೂಕಿನ ವಾರಿ ಸಿದ್ದಾಪುರ ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ನಾಮಫಲಕ ಮತ್ತು ಯುವಕ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದ ನಂದಣ್ಣ ಬಾಕಲಿ, ವೆಂಕಟೇಶ ಪೋತಲಕರ, ತಿಮ್ಮಣ್ಣ ಪೋತಲಕರ, ಭೀಮರಾಯ ದರಬಾರಿ, ವಾರಿ ಸಿದ್ದಾಪುರ ಗ್ರಾಮದ ಭೀಮಣ್ಣ ಕಮತಗಿ, ಹೈಯಾಳಪ್ಪ ಕಮತಗಿ, ಮುದಕಪ್ಪ ಕಮತಗಿ, ಹೈಯಾಳಪ್ಪ ಮೂಲಿಮನಿ, ಗೋವಿಂದಪ್ಪ ದಳಪತಿ, ಶರಣಪ್ಪ ಕಮತಗಿ, ಸಂಗಪ್ಪ, ಮರೆಪ್ಪ, ಹಣಮಂತ್ರಾಯ ಕಕ್ಕಸಗೇರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

