ಕೈಮೂರ ತರಬೇತಿ; ಸ್ಥಳೀಯರಿಗೆ ಅನ್ಯಾಯ
ಗುಲ್ಬರ್ಗ: ಸ್ಥಳೀಯ ಐಟಿಐ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಎಸಿಸಿ ಕಾರ್ಖಾನೆಯಿಂದ ಮಧ್ಯಪ್ರದೇಶದ ಕೈಮೂರದಲ್ಲಿ ಎಸ್ಎಟಿಐ ಸಂಸ್ಥೆ ವತಿಯಿಂದ ಪ್ರತಿ ವರ್ಷ ನೀಡುವ ಉದ್ಯೋಗಾಧಾರಿತ ತರಬೇತಿಯಲ್ಲಿ ಅನ್ಯಾಯವಾಗುತ್ತಿದೆ ಎಂದು ಆಲ್ ಇಂಡಿಯಾ ಡೆಮಾಕ್ರಟಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ವತಿಯಿಂದ ಕೇಂದ್ರ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆಯವರಿಗೆ ಮನವಿ ಸಲ್ಲಿಸಲಾಯಿತು.
ಸಚಿವರ ನಿವಾಸದಲ್ಲಿ ಭೇಟಿ ಮಾಡಿದ ವಿದ್ಯಾರ್ಥಿ ಮುಖಂಡರು ತಮ್ಮ ಮನವಿಯಲ್ಲಿ ಎಸ್ಎಂಟಿಐ ವತಿಯಿಂದ ಕೈಮೂರದಲ್ಲಿ ನಡೆಯುವ ತರಬೇತಿಗೆ ಅರ್ಜಿ ಹಾಕಿದ ಕೆಲ ವಿದ್ಯಾರ್ಥಿಗಳಿಗೆ ತರಬೇತಿ ಪ್ರವೇಶ ಪರೀಕ್ಷೆಗೆ ಆಹ್ವಾನಿಸಿ, ಅರ್ಹ ವಿದ್ಯಾರ್ಥಿಗಳಿಗೆ ವಿವಿಧ ನಿಯಮ ಮುಂದಿಟ್ಟು ಪ್ರವೇಶ ಪರೀಕ್ಷೆಯಿಂದ ವಂಚಿಸಲಾಗುತ್ತಿದೆ. ಇದರಲ್ಲಿ ಎಸಿಸಿ ಕಾರ್ಖಾನೆ ಆಡಳಿತ ಮಂಡಳಿ ಸಂಪೂರ್ಣ ಕಾನೂನನ್ನು ಉಲ್ಲಂಘಿಸಿದೆ ಎಂದು ದೂರಿದ್ದಾರೆ.
ನೂರಾರು ವಿದ್ಯಾರ್ಥಿಗಳ ಭವಿಷ್ಯ ಮಂಕು: ಕೆಲವರ ಒತ್ತಡಕ್ಕೆ ಮಣಿದು ಹಲವು ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿರುವ ಎಸಿಸಿ ಕಾರ್ಖಾನೆ ನಿಗದಿತ ದಿನಾಂಕದಂದು ತರಬೇತಿ ಪರೀಕ್ಷೆ ನಡೆಸದೆ ಇದ್ದುದರಿಂದ ಪುನಃ ಪರೀಕ್ಷೆ ನಡೆಸುವಂತೆ ನಡೆಸಿದ ಹೋರಾಟಕ್ಕೆ ಕಡೆಗಣಿಸಲಾಗುತ್ತಿದೆ. ಈಗ 22 ವರ್ಷ ವಯೋವುತಿ ಮೀರುತ್ತಿರುವುದರಿಂದ ನೂರಾರು ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ.
ಕಳೆದ ಮೂರ್ನಾಲ್ಕು ತಿಂಗಳಿಂದ ಪರೀಕ್ಷೆ ಸಿದ್ಧತೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ದಿಕ್ಕು ತೋಚದಂತಾಗಿದ್ದು, ಕೂಡಲೇ ಎಸಿಸಿ ಕಾರ್ಖಾನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಪುನಃ ಪ್ರವೇಶ ಪರೀಕ್ಷೆ ನಡೆಸುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.
ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ಶರ್ಮಾ, ವಾಡಿ ಸಮಿತಿ ಕಾರ್ಯದರ್ಶಿ ವಿಠ್ಠಲ ರಾಠೋಡ, ಮುಖಂಡರಾದ ಶರಣು ಹೇರೂರ, ಶ್ರೀಕಾಂತ ಜಾಧವ, ಮಲ್ಲಿನಾಥ ಹುಂಡೇಕಲ, ವಿಶ್ವನಾಥ ಮತ್ತಿತರರು ನಿಯೋಗದಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

