'ಭೋವಿ ಜನಾಂಗ ದೂರ ಇಟ್ಟಿದ್ದು ತಪ್ಪು'
ಆಳಂದ: ಶರಣರ ಪರಂಪರೆಗೆ ಸೇರಿರುವ ಸಲ್ಲಾಪುರದ ಶಿವಯೋಗಿ ಸಿದ್ದರಾಮೇಶ್ವರರು ಶರಣರ ಚಳವಳಿಗೆ ಮಹಾನ್ ಶಕ್ತಿಯಾಗಿದ್ದಾರೆಂದು ಶಾಸಕ ಬಿ.ಆರ್. ಪಾಟೀಲ ಹೇಳಿದರು.
ಪಟ್ಟಣದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಸಮಾರಂಭದಲ್ಲಿ ಮಾತನಾಡಿದರು. ಶರಣ ಸಂಸ್ಕೃತಿಯ ವಾರುಸುದಾರರಾದ ಭೂವಿ ವಡ್ಡರ ಜನಾಂಗವನ್ನು ಲಿಂಗಾಯತರು ದೂರವಿಟ್ಟಿರುವುದು ದೊಡ್ಡ ತಪ್ಪಾಗಿದೆ ಎಂದು ಸಮರ್ಥಿಸಿಕೊಂಡ ಅವರು, ಬಸವಣ್ಣನವರು, ಅಲ್ಲಂ ಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ ಹೀಗೆ ಅನೇಕ ಶರಣರ ಸಾಲಿನಲ್ಲಿ ಶಿವಯೋಗಿ ಸಿದ್ದರಾಮರು ಆಗಿಹೋಗಿದ್ದಾರೆ. ಎಲ್ಲರೂ ಒಂದಾಗಿ ಶರಣರ ತತ್ವಗಳನ್ನು ಆಚರಣೆ ತರಬೇಕೆಂದು ಕರೆ ನೀಡಿದರು. ಸಮಾಜ ಬಾಂಧವರಿಗಾಗಿ ಶಿವಯೋಗಿ ಸಿದ್ದರಾಮೇಶ್ವರ ಅನುಭವ ಮಂಟ ನಿರ್ಮಾಣ, ಸಿಸಿ ರಸ್ತೆ ನಿರ್ಮಾಣಕ್ಕೆ ತಲಾ ಐದು ಲಕ್ಷ ಅನುದಾನ ನೀಡುವುದಾಗಿ ಪ್ರಕಟಿಸಿದರು.
ಸಮಾಜದ ಉತ್ತರ ಪ್ರದೇಶದ ಸಹ ಕಾರ್ಯದರ್ಶಿ ಸುಭಾಷ ಬನಪಟ್ಟಿ ಮಾತನಾಡಿದರು. ಉಪನ್ಯಾಸಕ ಸಂಜಯ ಪಾಟೀಲ, ಚಂದ್ರಶೇಖರ ಗುಂಡಲಕರ್ ಮಾತನಾಡಿದರು. ಪುರಸಭೆ ಅಧ್ಯಕ್ಷ ಮಲ್ಲಮ್ಮ ಎಸ್. ಹತ್ತಿ, ಉಪಾಧ್ಯಕ್ಷ ಫರ್ಜಾನಾ ಬೇಗಂ, ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ, ಸಮಾಜ ಅಧ್ಯಕ್ಷ ತಾಯಪ್ಪಾ ಗುತ್ತೇದಾರ, ಶೆಟ್ಟಪ್ಪಾ ಗುತ್ತೇದಾರ, ಬಡಪ್ಪ ದಂಡಗೂಳೆ, ಅಂಬಣ್ಣಾ ಕುಸಳಕರ್, ಹಣಮಂತ ಕುಸಳಕರ್, ದೇವಿಂದ್ರಪ್ಪಾ ಎಂ. ದಂಡಗುಲೆ, ಅಧಿಕಾರಿಗಳಾದ ಲಕ್ಷ್ಮಣ ಶೃಂಗೇರಿ, ಅಬ್ದುಲ ಸಲಾಂ, ವೆಂಕಯ್ಯಾ ಇನಾಮದಾರ, ಪಿಎಸ್ಐ ಮಹಾದೇವ ಪಂಚಮುಖಿ ಪಾಲ್ಗೊಂಡಿದ್ದರು. ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ ಸ್ವಾಗತಿಸಿ ಮಾತನಾಡಿದರು. ಸಂತೋಷ ಶಿಂಧೆ ನಿರೂಪಿಸಿ ಜಾಫ್ರ ಅನ್ಸಾರಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

