ಗುಲ್ಬರ್ಗಾ

ಜಾತ್ರೆಗಳು ಸನಾತನ ಪರಂಪರೆಯ ಸಂಕೇತ

Published On :

ಶಹಾಬಾದ್: ಜಾತ್ರೆಗಳು ನಮ್ಮ ನಾಡಿನ ಸನಾತನ ಪರಂಪರೆಯ ಸಂಕೇತ. ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮೆಲ್ಲರ ಗುರುತರ ಜವಾಬ್ದಾರಿ ಎಂದು ಹಲಕರ್ಟಿಯ ಮುನೇಂದ್ರ ಶ್ರೀ ಹೇಳಿದರು.
ಶಂಕರವಾಡಿ ಗ್ರಾಮದ ಕಾಗಿಣಾ ನದಿಯ ಸೇತುವೆ ಬಳಿಯಲ್ಲಿ ಶಂಕರಲಿಂಗೇಶ್ವರ 22ನೇ ಜಾತ್ರಾ ಮಹೋತ್ಸವದ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಮನುಷ್ಯರಲ್ಲಿ ಭಯ, ಭಕ್ತಿ ಮಾನವೀಯ ಮೌಲ್ಯಗಳ ವರ್ಧನೆಗೆ ಇಂತಹ ಸಂಸ್ಕೃತಿ ಪರಿಪಾಲಿಸುವುದು ಅವಶ್ಯಕ. ಈ ವಿಶೇಷವಾದ ಕ್ಷೇತ್ರ ಇನ್ನೂ ದೊಡ್ಡದಾಗಿ ಬೆಳವಣಿಗೆ ಹೊಂದಲಿ ಎಂದು ಆಶಯ ವ್ಯಕ್ತಪಡಿಸಿದರು.
ಮಾದಯ್ಯಸ್ವಾಮಿ ಜಿವಣಗಿ, ಈರಣ್ಣ ಮೇಸ್ತ್ರಿ, ದಯಾನಂದ ಜಹಾಗೀರದಾರ, ಮಲ್ಲಿಕಾರ್ಜುನ ಪಾಟೀಲ ವೇದಿಕೆಯಲ್ಲಿದ್ದರು. ಬಸವರಾಜ ಪರೀಟ ನಿರೂಪಿಸಿ, ವಂದಿಸಿದರು. ಮಾದಯ್ಯ ಸ್ವಾಮಿ ಸ್ವಾಗತಿಸಿದರು. ಈರಣ್ಣ ಕೆಂಬಾವಿ, ನಾಗರಾಜ ಸಿಂಘೆ, ಸುಭಾಷ ಜಾಪೂರ, ಶರಣು ಧನ್ನೇಕರ್, ರಾಣೊಜಿ ಚಿತ್ತಾಪೂರಕರ್, ರಾಣೋಜಿ ಹಾದಿಮನಿ, ಹಣಮಂತ ಸೇರೂರ, ಮಹಾದೇವ ಪೂಜಾರಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.