ಐಜಿಪಿ ಅಹ್ಮದ್, ಎಸ್ಪಿ ಅಮಿತ್ಸಿಂಗ್ ಅಮಾನತಿಗೆ ದಲಿತ ಸೇನೆ ಆಗ್ರಹ
ಗುಲ್ಬರ್ಗ: ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಭೂ ಮಾಫಿಯಾ ಮತ್ತು ರೌಡಿಸಂ ತಲೆ ಎತ್ತಿ ನಿಂತಿದೆ. ವಜೀರ್ ಅಹ್ಮದ್ ಅವರು ಐಜಿಪಿಯಾಗಿ ಬಂದ ಮೇಲೆ ಜಿಲ್ಲೆಯಾದ್ಯಂತ ಕೊಲೆ, ಸುಲಿಗೆ, ಅಕ್ರಮ ಮರಳು ಸಾಗಾಣಿಕೆ, ಬ್ಯಾಂಕ್ ದರೋಡೆಗಳು ಹೆಚ್ಚಾಗತೊಡಗಿವೆ ಎಂದು ಕರ್ನಾಟಕ ದಲಿತ ಸೇನೆ ಆರೋಪಿಸಿದೆ. ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಎಸ್.ಬಿ.ಐ ಬ್ಯಾಂಕ್ ದರೋಡೆ, ಮುತ್ತೂಟ್ ಫೈನಾನ್ಸ್ನಲ್ಲಿ ಹಾಡು ಹಗಲೇ ದರೋಡೆ, ಆಳಂದ ತಾಲೂಕಿನ ಬಂಗರಗಾ ಗ್ರಾಮದಲ್ಲಿ ದಲಿತ ಯುವಕನ ಬರ್ಬರ ಹತ್ಯೆ ಹಾಗೂ ಅಫಜಲ್ಪುರ ತಾಲೂಕಿನ ಸಂಗಾಪುರ ಗ್ರಾಮದ ಜೈಭೀಮ ಎಂಬ ಯುವಕನ ಹಾಡು ಹಗಲೇ ಸಿನಿಮೀಯ ರೀತಿಯಲ್ಲಿ ಕೊಲೆ ಇವೆಲ್ಲ ಘಟನೆಗಳು ಪೊಲೀಸರ ನಿಷ್ಕ್ರಿಯತೆಗೆ ಸಾಕ್ಷಿ ಎಂದು ಸೇನೆ ಹೇಳಿದೆ. ಜನರನ್ನು ರಕ್ಷಣೆ ಮಾಡುವ ಪೊಲೀಸರೇ ಗುಂಡಿನ ದಾಳಿಗೆ ಒಳಗಾದಾಗ ಜನ ಸಾಮಾನ್ಯರ ಗತಿ ಏನು? ಮುಂಬೈ ನಗರದಲ್ಲಿ ಅನೇಕ ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಮುನ್ನಾ ರೌಡಿ ಎಂದು ಗೊತ್ತಿದ್ದರೂ ಪೊಲೀಸ್ ಹಿರಿಯ ಅಧಿಕಾರಿ ಐಜಿಪಿ ವಜೀರ್ ಅಹ್ಮದ್ ಮತ್ತು ಎಸ್.ಪಿ. ಅಮಿತ್ಸಿಂಗ್ ಆತನನ್ನು ಸೆರೆಗೆ ಸುಸಜ್ಜಿತ ತಂಡ ಕಳುಹಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸೇನೆ ಆರೋಪಿಸಿದೆ. ಆದ್ದರಿಂದ ಐಜಿಪಿ ವಜೀರ್ ಅಹ್ಮದ್ ಮತ್ತು ಎಸ್.ಪಿ. ಅವರನ್ನು ಕೂಡಲೇ ಅಮಾನತುಗೊಳಿಸಿ ಈ ಪ್ರಕರಣ ಕುರಿತು ಉನ್ನತಮಟ್ಟದ ತನಿಖೆಗೆ ಆದೇಶ ನೀಡಬೇಕು ಎಂದು ಸೇನೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

