ರಾಜಕಿಯ ಮುಖಂಡರಿಂದ ಶ್ರದ್ಧಾಂಜಲಿ
ಶಹಾಪುರ: ಮಲ್ಲಿಕಾರ್ಜುನ ಬಂಡೆ ನಿಧನದಿಂದಾಗಿ ಒಬ್ಬ ದಕ್ಷ ಅಧಿಕಾರಿಯನ್ನು ಕಳೆದುಕೊಂಡಿದ್ದೇವೆ ಎಂದು ಕೆಜೆಪಿ ಮುಖಂಡ ಡಾ. ಚಂದ್ರಶೇಖರ ಸುಭೇದಾರ ನುಡಿದರು.
ಪಟ್ಟಣದ ಬಸವೇಶ್ವರ ಸರ್ಕಲ್ನಲ್ಲಿ ಗುರುವಾರ ನಾನಾ ಕನ್ನಡಪರ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರಿಂದ ಮಲ್ಲಿಕಾರ್ಜುನ ಬಂಡೆಗೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಸಾಮಾನ್ಯವಾಗಿ ಸಿನಿಮಾ ತಾರೆಯರಿಗೆ ಅಭಿಮಾನಿಗಳು ಇರೋದು ನೋಡಿದ್ದೇವೆ. ಆದರೆ ಬಂಡೆಯವರು ಬೆರಳೆಣಿಕೆಯ ಕೆಲವೇ ವರ್ಷಗಳಲ್ಲಿ ಅವರು ಮಾಡಿದ ದಕ್ಷ ಹಾಗೂ ಪ್ರಾಮಾಣಿಕ ಸೇವೆಯಿಂದಾಗಿ ನಾಡಿನ ತುಂಬಾ ಸಾಕಷ್ಟು ಅಭಿಮಾನಿ ಬಳಗ ಹೊಂದಿ, ಅಜರಾಮರಾಗಿದ್ದಾರೆಂದು ಸಾಹಿತಿ ಡಾ. ಸಿದ್ದರಾಮ ಹೊನ್ಕಲ್ ಅಭಿಪ್ರಾಯ ಪಟ್ಟರು.
ಶಾಸಕರು ಮೋಜು ಮಸ್ತಿಗಾಗಿ ಹಲವು ಬಾರಿ ವಿದೇಶ ಪ್ರವಾಸಕ್ಕೆ ತೆರಳುತ್ತಾರೆ. ಆದರೆ ಬಂಡೆ ವಿಷಯದಲ್ಲಿ ವಿದೇಶದಲ್ಲಿ ಚಿಕಿತ್ಸೆಕೊಡಿಸಲು ಸರ್ಕಾರ ಹಿಂದೇಟು ಹಾಕಿದ್ದು ನಾಚೀಕೆಗೇಡಿನ ಸಂಗತಿ ಎಂದು ತಾಲೂಕ ಅಧ್ಯಕ್ಷ ಭೀಮು ಶಖಾಪುರ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಮುಖ್ಯಮಂತ್ರಿ ಸೇರಿದಂತೆ ಗುಲ್ಬರ್ಗ ಉಸ್ತುವಾರಿ ಸಚಿವ ಹಾಗೂ ಐಜಿಪಿ ವಜೀರ್ ರಾಜಿನಾಮೆ ನೀಡಬೇಕೆಂದು ಕರವೇ, ಇತರೆ ಕನ್ನಡಪರ ಸಂಘಟನೆಗಳು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

