ಗುಲ್ಬರ್ಗಾ

ಸುರಪುರದಲ್ಲಿ ಲೋಹ ಸಂಗ್ರಹಣೆ ಅಭಿಯಾನಕ್ಕೆ ಚಾಲನೆ

Published On :

ಛಛಜಿಸುರಪುರ: ಕರ್ನಾಟಕದ ಏಕೀಕರಣದ ರೂವಾರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿಯ ನಿರ್ಮಾಣದ ಲೋಹ ಸಂಗ್ರಹ ಅಭಿಯಾನಕ್ಕೆ ಗುರುವಾರದಿಂದ ಚಾಲನೆ ನೀಡಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರನಗೌಡ ಮಲ್ಲಾಬಾದಿ ಹೇಳಿದರು. ಇಲ್ಲಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿ, ನರ್ಮಾದಾ ನದಿಯ ದಂಡೆ ಮೇಲೆ 182 ಮೀಟರ್ ಎತ್ತರದ ಮೂರ್ತಿ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಲೋಹ ಸಂಗ್ರಹಣೆ ಮಾಡಲಾಗುತ್ತಿದೆ ಎಂದರು. ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ವೇಣುಗೋಪಾಲ ಜೇವಗರ್ ಮಾತನಾಡಿ, ಈ ಮೂರ್ತಿ ನಿರ್ಮಾಣಕ್ಕೆ ಲೋಹ ಸಂಗ್ರಹಿಸಲು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯ ಸದಸ್ಯರು ಪ್ರತಿ ಗ್ರಾಮಗಳಿಗೆ ತೆರಳಿ ಕೃಷಿ ಚಟುವಟಿಕೆಯಲ್ಲಿ ರೈತರು ಬಳಸಿದ ಹಳೆ ಕಬ್ಬಿಣದ ಲೋಹಗಳನ್ನು ಪ್ರತಿ ರೈತರಿಂದ 1 ಕೆಜಿಯಂತೆ ಸಂಗ್ರಹಿಸಲಾಗುವುದು ಎಂದು ತಿಳಿಸಿದರು. ಅರಸು ಮನೆತನದ ಯುವರಾಜಾ ರಾಜಾ ಲಕ್ಷ್ಮೀನಾರಾಯಣ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ, ಸ್ವಾತಂತ್ರ್ಯ ಹೋರಾಟಗಾರ ಮಹಾದೇವಪ್ಪ ಹೂಗಾರ, ಜಿಲ್ಲಾ ಲೋಹ ಸಂಗ್ರಹಣ ಸಮಿತಿ ಸಂಚಾಲಕ ರಾಮನಗೌಡ ಚಿತ್ತರಗಿ, ಭಗವಂತರೆಡ್ಡಿ, ಮುಖಂಡರಾದ ಶರಣಗೌಡ ಯಡ್ಡಳ್ಳಿ, ಯಲ್ಲಯ್ಯನಾಯಕ ವನದುರ್ಗ, ಮಲ್ಲೇಶಿ ಪಾಟೀಲ್, ಬಸವರಾಜ ಜಡಿಮರಳ, ಬಸವರಾಜ ಮೇಲಿನಮನಿ, ಚಂದ್ರಶೇಖರ ಸಕ್ರಿ, ಶರಣಬಸವ, ಭೀಮರಾವ್ ರಫಗಾರ, ಮಲ್ಲಿಕಾರ್ಜುನ ಹೂಗಾರ, ಶರಣಗೌಡ ಬೆನಕನಹಳ್ಳಿ, ನಿಂಗಣ್ಣ ದೇವರಗೋನಾಲ, ಗೋಪಾಲ, ನಾರಾಯಣರಾವ್ ಬಳಗನೂರ್, ಅನೀಲ ಗುತ್ತೇದಾರ್ ಸೇರಿದಂತೆ ಎಬಿವಿಪಿ ಕಾರ್ಯಕರ್ತರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.