ಇಂದು ನಾರಾಯಣ ಗುರು ಟ್ರಸ್ಟ್ ಉದ್ಘಾಟನೆ
ಗುರುಮಠಕಲ್: ಇಂದು ಬ್ರಹ್ಮಶ್ರೀ ನಾರಾಯಣ ಗುರು ಟ್ರಸ್ಟ್ ಯಾದಗಿರಿ ವತಿಯಿಂದ ವೆಂಕಯ್ಯ ಕೂಸಯ್ಯ ಗುತ್ತೇದಾರ ಜನ್ಮ ದಿನಾಚಾರಣೆ ಅಂಗವಾಗಿ ಟ್ರಸ್ಟ್ ಉದ್ಘಾಟನಾ ಸಮಾರಂಭವು ಯಾದಗಿರಿಯ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೈದಪ್ಪ ಗುತ್ತೆದಾರ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ ಅವರು, ಕಾರ್ಯಕ್ರಮವನ್ನು ಮಾಜಿ ಸಚಿವ ಹಾಗೂ ಶಾಸಕ ಮಾಲಿಕಯ್ಯ ವಿ. ಗುತ್ತೆದಾರ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ್ ಚಿಂಚನಸೂರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೈಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಣ್ಣ ಪಕೀರಪ್ಪ, ಶಾಸಕ ಡಾ. ಮಾಲಕ ರಡ್ಡಿ, ಸುರಪುರ ಶಾಸಕ ರಾಜ ವೆಂಕಟಪ್ಪ ನಾಯಕ, ಶಹಾಪುರ ಶಾಸಕ ಗುರು ಪಾಟೀಲ್, ರಾಜ್ಯ ಈಡಿಗ ಸಮಾಜದ ಅಧ್ಯಕ್ಷ ಜೆ.ಪಿ ನಾರಾಯಣ ಸ್ವಾಮಿ, ಸುಭಾಷ ಗುತ್ತೆದಾರ, ಶಿವಣಗೌಡ ನಾಯಕ, ವೀರಬಸವಂತ ರಡ್ಡಿ ಮುದ್ನಳ್, ರಾಜು ಗೌಡ, ಎಸ್.ಜೆ. ಕಾಳೇಗೌಡ, ಖ್ಯಾತ ಉದ್ಯಮಿದಾರ ಸತೀಶ್.ವಿ. ಗುತ್ತೆದಾರ, ಮಾಜಿ ವಿಧಾನ ಪರಿಷತ್ಸ್ದಸ್ಯರಾದ ಚನ್ನಾರಡ್ಡಿ ಪಾಟೀಲ್ ತನ್ನೂರ್, ನಾಗನಗೌಡ ಕಂದಕೂರ, ಕಸಾಪ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಜಿಪಂ ಅಧ್ಯಕ್ಷೆ ಭೀಮಮ್ಮ ಚಪೆಟ್ಲಾ, ಬಸವರಾಜ ಖಂಡ್ರೆ, ತಾಪಂ ಅಧ್ಯಕ್ಷೆ ಶೋಭಾರಾಣಿ ದೇವಿಂದ್ರಪ್ಪ ಕಲಾಲ್, ನಗರಸಭೆ ಅಧ್ಯಕ್ಷ ಮಹ್ಮದ್ ಇಷಾಕ್ ಭಾಗವಹಿಸಲಿದ್ದಾರೆ. ಆರ್ಯ ಈಡಿಗಾ ಮಹಾ ಸಂಸ್ಥಾನದ ಪೀಠಾಧಿಪತಿ ರೇಣುಕಾನಂದ ಸ್ವಾಮಿ, ಸೋಲೂರು, ಗುರುಮಠಕಲ್ನ ಖಾಸಮಠದ ಪೀಠಾಧಿಪತಿ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮಿ, ಅನೂರು ಕ್ಷೇತ್ರದ ಮೋನಯ್ಯ ಗುರುಗಳು ಸಾನ್ನಿಧ್ಯ ವಹಿಸುವರು. ಟ್ರಸ್ಟ್ನ ಅಧ್ಯಕ್ಷ ಮಹೇಂದ್ರಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಸೂರ್ಯಕಾಂತಗೌಡ ಕಟ್ಟಿಮನಿ, ಸಿದ್ದು ಗುತ್ತೇದಾರ ಇತರರು ಹಾಜರಿದ್ದರು.
ಮಟಕಾ ಜೂಜುಕೋರರ ಬಂಧನ
ಕೆಂಭಾವಿ: ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯ ಯಾಳಗಿ ಹಾಗೂ ಮುದನೂರ ಗ್ರಾಮದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಮೂರು ಜನರ ವಿರುದ್ಧ ಪ್ರಕರಣ ದಾಖಲಿಸಿ ಅವರಿಂದ ರು. 3220 ಜಪ್ತಿ ಮಾಡಲಾಗಿದೆ. ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಸುನಿಲ ಮೂಲಿಮನಿ ನೇತೃತ್ವದಲ್ಲಿ ಮುದನೂರ ಗ್ರಾಮದ ಇಕ್ಬಾಲ್ ಮತ್ತು ಯಾಳಗಿ ಗ್ರಾಮದ ಕೃಷ್ಣಾ ಹಾಗೂ ಫಕ್ರುದ್ದೀನ ಎಂಬುವರು ಮಟಕಾ ಬರೆದುಕೊಳ್ಳುತ್ತಿದ್ದಾಗ ಬಂಧಿಸಲಾಗಿದೆ ಎಂದು ಪಿಎಸ್ಐ ತಿಳಿಸಿದ್ದಾರೆ. ಈ ಕುರಿತು ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

