ರಾವೂರ್ ಶಾಲೆಗೆ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ಶಹಾಬಾದ್: ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ಬರಗಾಲಕೇರಿ ಕಿರಿಯ ಪ್ರಾಥಮಿಕ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗ್ರಹಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. ವಾಡಿ ವಲಯ ಅಧ್ಯಕ್ಷ ದೀಪಕ ರಾಠೋಡ ಮಾತನಾಡಿ, ಗ್ರಾಮದ ಬರಗಾಲಕೇರಿ ಶಾಲೆಯ ಆವರಣದಲ್ಲಿ ಕಲ್ಲಿಗಣಿಯ ತ್ಯಾಜ್ಯವನ್ನು ತಂದು ಹಾಕಿದ್ದು, ಇದರಿಂದ ಶಾಲಾ ಮಕ್ಕಳಿಗೆ ಆಟದ ಮೈದಾನ ಇಲ್ಲದಂತಾಗಿದೆ. ಮಕ್ಕಳಿಗೆ ಶಿಕ್ಷಣ ಇಲಾಖೆ ಕನಿಷ್ಟ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದೆ ಇರುವುದರಿಂದ ಮಕ್ಕಳು ಸುತ್ತಲಿನ ಮನೆಗಳಿಗೆ ಹೋಗಿ ನೀರು ಕೇಳುವ ದುಸ್ಥಿತಿ ಉಂಟಾಗಿದೆ. ಕೂಡಲೇ ಕಲ್ಲಿನ ಚಿಪ್ಪುಗಳನ್ನು ಸ್ಥಳಾಂತರಿಸಿ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು, ಶಾಲೆಯ ಮುಖ್ಯದ್ವಾರಕ್ಕೆ ಗೇಟ್ ಅಳವಡಿಸಿ, ಕೋಣೆಗಳಿಗೆ ಕಿಟಕಿ, ಬಾಗಿಲು ಅಳವಡಿಸಬೇಕೆಂದು ಆಗ್ರಹಿಸಿದರು. ಜೈಕರವೇ ಕಾರ್ಯಕರ್ತರಾದ ಮಲ್ಲಿಕಾರ್ಜುನ,ದೇವನಂದ ತಳವಾರ, ಗುರುರಾಜ ಅಡಕಿ, ಬಸಯ ಸ್ವಾಮಿ, ಮೈಹಿಬೂಬ ಪಟೇಲ, ಮಹ್ಮದ್ ರಫೀಕ್, ಬಾಬು ಪವಾರ, ರವಿ ಲಕ್ಷ್ಮಿಪೂರವಾಡಿ, ಗೋವಿಂದ ಶಿರವಾಳ, ರಾಜುಕೇಶಬಳಿ, ರಾಕೇಶ.ಎಂ, ಸಾಬಣ್ಣ ಚಟಗೇರಿ, ಸಾಹೇಬಗೌಡ, ಶಿವಶರಣಪ್ಪ ಬಿರಾಳ, ಅನಿಲ ಪಾಲ್ಗೊಂಡಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

