ಗದ್ದುಗೆ ಮಠ ಸದ್ಭಾವ ಗೋಷ್ಠಿ: ಶಾಸಕ ಪಾಟೀಲ್ ಮೆಚ್ಚುಗೆ
ಕ.ಪ್ರ. ವಾರ್ತೆ ಗುಲ್ಬರ್ಗ ಜ.20
ಸರ್ಕಾರದ ಯಾವುದೇ ಅನುದಾನ ಬಯಸದೆ ಗದ್ದುಗೆ ಮಠ ಸದ್ದಿಲ್ಲದೆ ಕಾರ್ಯ ನಿರ್ವಹಿಸುತ್ತಿದೆ ಎಂದು ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಶ್ಲಾಘ್ನಿದರು.
ಅವರು ಮಕ್ತಂಪೂರ ಬಡಾವಣೆಯಲ್ಲಿನ ಗದ್ದುಗೆ ಮಠದಲ್ಲಿ ಸದ್ಭಾವ ಗೋಷ್ಠಿಯ 46ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹ್ನಿ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ '್ನದ್ದರಾಮ ವಚನಗಳು' ಕೃತಿ ಲೋಕಾರ್ಪಣೆ ಮಾಡಿದ ಉದ್ಯಮಿ ಬಸವರಾಜ ಭೀಮಳ್ಳಿ ಶರಣರ ಆದರ್ಶಗಳೇ ಇಂದು ದಾರಿದೀಪ ಎಂದರು.
ಗದ್ದುಗೆ ಮಠ 500 ವರ್ಷಗಳಿಂದ ಕ್ರಿಯಾಶೀಲವಾಗಿರುವ ಮಠ. ಪುರಾಣ-ಪ್ರವಚನ, ಸದ್ಭಾವಗೋಷ್ಠಿಗಳಿಂದಾಗಿ ಭಕ್ತರ ಮನೆ-ಮನಗಳಲ್ಲಿ ನೆಲೆ ನಿಂತಿದೆ ಎಂದು ರೇವಣ್ನದ್ದ ಸ್ವಾಮೀಜಿ ನುಡಿದರು.
ಗ್ರಂಥ ರಚನೆ, ಪ್ರಕಟಣೆ, ಅನ್ನ ದಾಸೋಹ ಮಠದ ಸಂಕಲ್ಪ ಎಂದರಲ್ಲದೆ ಭಕ್ತರ ಸಹಕಾರದಿಂದಾಗಿ ಮಠ ಉತ್ತರೋತ್ತರ ಪ್ರಗತಿ ಕಾಣಲು ಸಾಧ್ಯವಾಗಿದೆ ಎಂದರು. 45 ವರ್ಷಗಳ ಸದ್ಭಾವ ಗೋಷ್ಠಿಗಳಲ್ಲಿ ಮಠದ ವತಿಯಿಂದ 42 ಕಿರು ಪುಸ್ತಕಗಳನ್ನು ಪ್ರಕಟಿಸಲಾಗಿದೆ ಎಂದರು.
ಬಳ್ಳಾರಿ ವಿರುಪಾಕ್ಷಪ್ಪ ದತ್ತಿನಿಧಿ ಉಪನ್ಯಾಸ ಮಾಲಿಕೆಯಲ್ಲಿ ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ಡಾ. ವಿ. ಜಿ. ಪೂಜಾರ ಅವರು 'ವಚನಗಳಲ್ಲಿ ಲೋಕ ವಿಡಂಬನೆ' ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ನೀಲಕಂಠಪ್ಪ ರಾಜಾಪುರ, ಬಸವರಾಜ ನಾಶಿ, ಮಹಾರಾಷ್ಟ್ರ ಬ್ಯಾಂಕ್ನ ಹಿರಿಯ ವ್ಯವಸ್ಥಾಪಕ ಪಿ. ವಿ. ದೇಶಪಾಂಡೆ ಅವರಿಗೆ ಸನ್ಮಾನ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

