ಚೌಡಯ್ಯ ಮೂರ್ತಿಗೆ ಕ್ಷೀರಾಭಿಷೇಕ
ಶಹಾಬಾದ್: ನಗರ ಬಸವೇಶ್ವರ ನಗರದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಚೌಡಯ್ಯನವರ ಮೂರ್ತಿಗೆ ನಗರದ ಕೋಲಿ ಸಮಾಜದ ವತಿಯಿಂದ ಕ್ಷೀರಾಭೀಷೇಕ ನಡೆಸಲಾಯಿತು.
ಅರ್ಚಕರಾದ ಸಂಗಯ್ಯಸ್ವಾಮಿ ಹೊನಗುಂಟಾರವರ ಪೌರೋಹಿತ್ಯದಲ್ಲಿ ವಿನೋದ ಸಾಹುಕಾರ ದಂಪತಿಗಳು ಪೂಜೆ ನೇರವೇರಿಸಿದರು. ತಾಪಂ ಸದಸ್ಯ ನಿಂಗಣ್ಣ ಹುಳಗೋಳ, ನಗರ ಸಭೆ ಸದಸ್ಯರಾದ ಸೂರ್ಯಕಾಂತ ಕೋಬಾಳ, ಡಾ. ಅಹ್ಮದ ಪಟೇಲ, ಬಿಜೆಪಿ ಅಧ್ಯಕ್ಷ ಶಾಂತರೆಡ್ಡಿ ದಂಡಗುಲಕರ್, ಕೋಲಿ ಸಮಾಜದ ಮುಖಂಡರಾದ ದೇವೇಂದ್ರ ಯಲಗೂಡಕರ್, ಸುಭಾಷ ಜಾಪೂರ, ಲೋಹಿತ್ ಕಟ್ಟಿ, ಚನ್ನು ಬಂಗೇರ, ಪರಮಾನಂದ ಯಲಗೂಡಕರ್, ಕಾಶಣ್ಣ ಸಂಗಾವಿ, ಶರಣಪ್ಪ ಬನ್ನೇರ್, ತಿಪ್ಪಣ್ಣ ಬೆಲ್ಲದ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಾಲಗತ್ತಿ: ಗ್ರಾಮದ ಗಂಗಾನಗರ, ಚೌಡಯ್ಯ ನಗರ, ಗ್ರಾಪಂ ಕಚೇರಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಆವರಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಗ್ರಾಪಂ ಮಾಜಿ ಅಧ್ಯಕ್ಷ ಶರಣಪ್ಪ ಸಣಮೋ, ಮಲ್ಲಪ್ಪ ಅಲ್ಲೂರ, ದೇವಿ ಆರಾಧಕರಾದ ನಿಂಗಪ್ಪ ಮುದಕಪಗೋಳ, ಶಾಲೆಯ ಮುಖ್ಯಗುರು ಪಂಡಿತರಾವ, ಉಮಾಪತಿಯವರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಮಹಾದೇವಿ ಪಾಮನೂರ, ಉಪಾಧ್ಯಕ್ಷೆ ಇಂದಿರಾ ಸಣಮೊ, ಮಲ್ಲಿಕಾರ್ಜುನ ಇಟಗಿ, ಸಿದ್ದಪ್ಪ ಅಲ್ಲೂರ, ಶಿವಾನಂದ ಅಲ್ಲೂರ, ಸಂತೋಷಕುಮಾರ ಅಲ್ಲಿಪೂರ, ಹಣಮಂತ ಡಿ. ಬಾಳಕ ಇದ್ದರು.
ಹಿಂದಿ ಪ್ರೌಢಶಾಲೆಯಲ್ಲಿ..: ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ರಾಜಕುಮಾರ ಬಾಸೂತ್ಕರ್ ಪೂಜೆ ಸಲ್ಲಿಸಿದರು. ರಮೇಶ ಥಳಂಗೆ, ದಮಯಂತಿ ಸೂರ್ಯವಂಶಿ ಇದ್ದರು. ನಗರಸಭೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಗಿರೀಶ ಕಂಬಾನೂರ ಪೂಜೆ ಸಲ್ಲಿಸಿದರು. ಎಇಇ ಶರಣು ಪೂಜಾರಿ, ನಾಗಣ್ಣ ರಾಂಪೂರೆ, ನಗರಸಭೆ ಸದಸ್ಯ ಸಾಯಿಬಣ್ಣ ಬೆಳಗುಂಪಿ ಇತರರು ಇದ್ದರು.
ಬಿಜೆಪಿ ಕಚೇರಿಯಲ್ಲಿ..: ನಗರದ ಬಿಜೆಪಿ ಕಚೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮ ಆಚರಣೆ ಮಾಡಲಾಯಿತು. ನಗರ ಘಟಕ ಅಧ್ಯಕ್ಷ ಶಾಂತರೆಡ್ಡಿ ದಂಡಗುಲಕರ್, ತಾಪಂ ಸದಸ್ಯ ನಿಂಗಣ್ಣ ಹುಳಗುಳಕರ್, ಉಪಾಧ್ಯಕ್ಷ ಶರಣು ವಸ್ತ್ರದ, ಮಾತನಾಡಿದರು.
ನಾಗಣ್ಣ ರಾಂಪುರೆ, ಸುಭಾಷ ಜಾಪೂರ, ಅಣ್ಣಪ್ಪ ದಸ್ತಾಪೂರ, ಪರಮಾನಂದ ಯಲಗೂಡ, ದೇವಿಂದ್ರಪ್ಪ ಯಲಗೂಡ, ರಾಜು ಮುತ್ತಗಿ, ನಗರಸಭೆ ಅರುಣ ಪಟ್ಟಣಕರ್, ಸಾಯಬಣ್ಣ ಬೆಳಗುಂಪಿ, ದುರ್ಗಪ್ಪ ಪವಾರ, ದತ್ತು ಘಂಟಿ,ಶರಣು ಜಾಲಹಳ್ಳಿ, ಭೀಮಯ್ಯ ಗುತ್ತೇದಾರ, ಹಾಗೂ ನೂರಾರು ಕಾರ್ಯಕರ್ತರು ಇದ್ದರು.
ರಾವೂರ: ಇಲ್ಲಿನ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಉಪಾಧ್ಯಕ್ಷೆ ಮಹಾದೇವಿ ಕಸಬಳ್ಳಿ ಅವರು ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಗ್ರಾಪಂ ಸದಸ್ಯ ಶರಣು ಜ್ಯೋತಿ ಮಾತನಾಡಿದರು. ನಾಗೇಂದ್ರಪ್ಪ, ಹಾಜಿ ಅಣ್ಣೀಕೇರಿ, ಗುರುನಾಥ ರೆಡ್ಡಿ ಗುದ್ಗಲ್, ರಾಮಣ್ಣ ಕಿರಣಗಿ, ಬಾಬುರಾವ ಹಳ್ಳಿ, ಚಂದ್ರಕಾಂತ ಗುದ್ಗಲ್, ರಾಜು, ಸುರೇಶ, ಸಾಬಣ್ಣಾ, ದೇವೆಂದ್ರ ಯರಗಲ್, ದೇವೆಂದ್ರ ನಡುವಿನಕೇರಿ ಉಪಸ್ಥಿತರಿದ್ದರು.
ಗೋಳಾ(ಕೆ) ಗ್ರಾಮದಲ್ಲಿ ಶ್ರೀದೇವಿ ಯುವ ಸಮಿತಿಯಿಂದ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವವನ್ನು ಆಚಾರಿಸಲಾಯಿತು. ದೇವಿಂದ್ರ ಕೋಬಾಳ ಚೌಡಯ್ಯನವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗೋಪಾಲ್ ರೇವಣಗೊಳ ಮಾತನಾಡಿದರು. ಬಾಬುರಾವ್ ದಿಡ್ಡಿ ಸಿದ್ದಾರ್ಥ ಹಳೆಶಹಾಬಾದ, ರವಿಕುಮಾರ ಸಣ್ಣತಮ್ಮ ದೇವಾನಂದ ನಂದೂರ, ದುಂಡಪ್ಪಾ ದಿಡ್ಡಿ, ದಯಾನಂದ ಮಾಣಿಕ ಮರಲಿಂಗ ಕಮರಡಗಿ, ಶ್ರೀಕಾಂತ್ ಗಂಗಬೊ ಲಕ್ಷ್ಮೀಕಾಂತ ಕರದಳ್ಳಿ ಇತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

