ಕತ್ತಲ ಕೋಣೆಯಲ್ಲಿ ಕಾಲಿಡುವಷ್ಟರಲ್ಲಿ ಗುಂಡು ಹೊಟ್ಟೆಯೊಳಗೆ ಹೊಕ್ಕಿತ್ತು!
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜ.22
ಬಂದೇನವಾಜ್ ದರ್ಗಾ ಬೀಟ್‌ನಲ್ಲಿದ್ದಾಗ 'ರೋಜಾ ಬಡಾವಣೆಯ ಛೋಟಿ ದೇವಡಿ ಗಲ್ಲಿಯಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗಿದೆ. ಬೇಗ ಬನ್ನಿ, ಶಸ್ತ್ರ ಸಜ್ಜಿತರಾಗಿ ಅಲ್ಲಿಗೆ ಹೋಗ್ಬೇಕು' ಅಂತ ಠಾಣಾಧಿಕಾರಿಯಿಂದ ಬಂದ ಕರೆಯಿಂದ ತಕ್ಷಣ ಠಾಣೆಗೆ ಹೋಗಿ ಪಿಸ್ತೂಲ್‌ನೊಂದಿಗೆ ಹೋಗುವಷ್ಟರಲ್ಲಿ ಪಿಎಸ್‌ಐ ಬಂಡೆ, ಡಿಎಸ್ಪಿ ಡಿಎಆರ್ ಕುಮಾರ್ ಸೇರಿದಂತೆ ಪೊಲೀಸರೆಲ್ಲ ನಿಂತಿದ್ದರು.
ಮನೆಯೊಂದರ ಕೋಣೆಯಿಂದ ಅರಚಾಟ ಕೇಳಿಬರುತ್ತಿತ್ತು. ಪಿಎಸ್‌ಐ ಬಂಡೆ ಕಷ್ಟಪಟ್ಟು ಮುಚ್ಚಿದ್ದ ಬಾಗಿಲ ಚಿಲಕ ತೆಗೆದು ಒಳನೆಗೆದರು. ಕುಮಾರ್ ಅವರನ್ನು ಹಿಂಬಾಲಿಸಿದ್ರು. ನಾನೂ ಕೋಣೆಯಲ್ಲಿ ಏನು ನಡಿತಿದೆ ಅಂತ ಬಾಗಿಲ ಬಳಿ ಹೋಗಿ ಇಣುಕಿ ನೋಡುವಷ್ಟರಲ್ಲೇ ಕೋಣೆಯ ಮಬ್ಬುಗತ್ತಲು ಸೀಳಿಕೊಂಡು ಬಂದ ಗುಂಡು ನನ್ನ ಹೊಟ್ಟೆ ಹೊಕ್ಕಿತ್ತು. ರಕ್ತ ಪುಟಿಯಲು ಶುರುವಾಯ್ತು, ಜೀಪಿನತ್ತ ಓಡಿಹೋಗಲು ಯತ್ನಿಸಿದೆ. ಆದರೆ, ದಾರಿಯಲ್ಲೇ ಬೇಹೋಷ್ (ಪ್ರಜ್ಞೆತಪ್ಪಿ) ಬಿದ್ದುಬಿಟ್ಟೆ... ಪ್ರಜ್ಞೆ ಬಂದಾಗ ಬಸವೇಶ್ವರ ಆಸ್ಪತ್ರೆಯಲ್ಲಿದ್ದೆ.
ರೋಜಾ ಠಾಣೆ ವ್ಯಾಪ್ತಿಯಲ್ಲಿರುವ ಛೋಟಿ ದೇವಡಿ ಗಲ್ಲಿಯಲ್ಲಿ ಜ.8 ರಂದು ನಡೆದ ಶೂಟೌಟ್ ಪ್ರಕರಣದಲ್ಲಿ ಗುಂಡೇಟು ತಗುಲಿ ಹೈದರಾಬಾದ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದ ಎಎಸ್‌ಐ ಉದ್ಧಂಡಪ್ಪ ತಾವು ಕಂಡ ಗುಂಡಿನ ಕಾಳಗವನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ್ದು ಹೀಗೆ.
ಮುನ್ನಾ ಅವಿತಿದ್ದ ಕೋಣೆ: ಜ.8ರಂದು ನಡು ಮಧ್ಯಾಹ್ನ 12.45 ಗಂಟೆಯಾಗಿರಬಹುದು. ಉದ್ಧಂಡಪ್ಪ ಅವರು ಸುಪಾರಿ ಹಂತಕ ಮುನ್ನಾ ಅವಿತಿದ್ದ ಕೋಣೆ ಮುಂದೆ ಬಂದು ಒಳಗೆ ಇಣುಕಿದ್ದಾರೆ. ಅಲ್ಲಿ ಮಬ್ಬುಗತ್ತಲು. ಬಿಸಿಲಿನಿಂದಾಗಿ ಕಣ್ಣುಗಳು ಮಿಂಚುತ್ತಿವೆ. ಕೋಣೆಯೊಳಗೆ ಒಬ್ಬರ ಮೇಲೊಬ್ಬರು ಬಿದ್ದಂತಹ ನೋಟ ಕಂಡಿದೆ. ಯಾರಿರಬಹುದು ಅಂತ ನೋಡಲು ಹೋಗಿದ್ದಾರೆ. ಮೊದಲೇ ಚಿಕ್ಕದಾದ ಕೋಣೆ. ಏನೋ ನಡಿತಿದೆ ಎಂಬ ಸಂಗತಿ ಅರಿವಿಗೆ ಬರುವಷ್ಟರಲ್ಲೇ ಗುಂಡುಗಳು ಉದ್ಧಂಡಪ್ಪ ಹೊಟ್ಟೆಗೆ ಬಡಿದಿವೆ.
“«Ú«ÚVÚM}Úà ಅಲ್ಲಿ ಏನ್ ಆಯ್ತು ಅಂತಲೇ ಗೊತ್ತಾಗಲಿಲ್ಲ. ಕೋಣೆಯೊಳಗಿನ ಬೆಳಕಿಗೆ ದೃಷ್ಟಿ ಅಡ್ಜಸ್ಟ್ ಆಗೋ ಮುನ್ನವೇ ಗುಂಡು ಹೊಟ್ಟೆ ಹೊಕ್ಕು, ಕಣ್ಣಿಗೆ ಕತ್ತಲು ಬಂತು. ಮಬ್ಬುಗತ್ತಲಲ್ಲಿ ಕೋಣೆಯಲ್ಲಿನ ನೋಟಗಳೇ ಕಾಣಲಿಲ್ಲ. ಎಲ್ಲವೂ ಅಯೋವುಯ. ನಾನಂತೂ ಸತ್ತೇನೋ, ಕೆಟ್ಟೆನೋ ಅಂತ ಅಲ್ಲಿಂದ ಜೀಪಿನತ್ತ ಹೌಹಾರಿ ಓಡಿದೆ. ಅಷ್ಟರಲ್ಲೇ ರಕ್ತದ ಮಡುವಿನಲ್ಲಿ ಕುಸಿದು ಬಿಟ್ಟೆ. ಮೈಮೇಲೆ ಎಚ್ಚರ ಬಂದಾಗ ಬಸವೇಶ್ವರ ಆಸ್ಪತ್ರೆಯಲ್ಲಿದ್ದೆ. ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ರಕ್ತಸ್ರಾವ ನಿಲ್ಲಿಸಿದ್ದರಿಂದ ಜೀವ ಬಂದಿತ್ತು. ಅಲ್ಲಿಂದ ರಾತ್ರಿಯೇ ಹೈದರಾಬಾದ್‌ಗೆ ನನ್ನನ್ನು ÁÚÈÛ¬Ò¸loÁÚß’ ಎಂದು ಎನ್‌ಕೌಂಟರ್ ದಿನದ ಬೆಳವಣಿಗೆಯನ್ನು ಉದ್ಧಂಡಪ್ಪ “OÚ«ÚsÚ®Úúڒ ಜೊತೆ ಹಂಚಿಕೊಂಡರು.
ಎಎಸ್‌ಐ ಉದ್ಧಂಡಪ್ಪ ಮೂಲತಃ ಅಫಜಲ್ಪೂರ ತಾಲೂಕಿನ ಮಣ್ಣೂರಿನವರು. 1976 ರಲ್ಲೇ ಊರು ಬಿಟ್ಟು ಗುಲ್ಬರ್ಗ ಸೇರಿ ಪೊಲೀಸ್ ಇಲಾಖೆಗೆ ಬಂದವರು. ಇದೀಗ ಶಹಾಬಜಾರ್ ಗಂಧಿಗುಡಿ ಬಡಾವಣೆಯಲ್ಲಿ ಮನೆ ಕಟ್ಟಿಕೊಂಡಿರುವ ಇವರು ಶಹಾಬಾದ್, ವಾಡಿ, ಬ್ರಹ್ಮಪೂರ ಠಾಣೆ ಸೇರಿದಂತೆ ಸೇವೆ ಸಲ್ಲಿಸಿ ಇದೀಗ ಬಡ್ತಿ ಹೊಂದಿ ಎಎಸ್‌ಐ ಎಂದು ರೋಜಾ ಠಾಣೆಯಲ್ಲಿ ಸೇವೆಯಲ್ಲಿದ್ದಾರೆ.
ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

