ಗುಲ್ಬರ್ಗಾ

ಸೊನ್ನಶ್ರೀಗಳ ಕಾರ್ಯ ಶ್ಲಾಘನೀಯ: ಉದಾಸಿ

Published On :

ಜೇವರ್ಗಿ: ಅನ್ನದಾಸೋಹ, ಅಕ್ಷರ ದಾಸೋಹ ಸೇರಿದಂತೆ ಬಡ ಜನರಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸುತ್ತಿರುವ ಸೊನ್ನದ ಶ್ರೀಗಳ ಕಾರ್ಯ ಶ್ಲಾಘನೀಯ. ಸತತ ತ್ರಿವಿಧ ದಾಸೋಹ ಸೇವೆ ನಡೆಸುತ್ತಿರುವ ಸೊನ್ನದ ಮಠ ಹೈ-ಕ ಪ್ರದೇಶದ 2ನೇ ಸಿದ್ಧಗಂಗಾ ಮಠವಿದ್ದಂತೆ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಹೇಳಿದರು.
ತಾಲೂಕಿನ ಸೊನ್ನ ಗ್ರಾಮದ ಶಿವಾನಂದ ಶಿವಯೋಗಿ ಗ್ರಾಮೀಣ ಜನಕಲ್ಯಾಣ ಸಂಸ್ಥೆಯ ಆವರಣದಲ್ಲಿ ಸಿದ್ಧಲಿಂಗೇಶ್ವರ ವಿರಕ್ತಮಠದ ಗುರುಸಿದ್ಧ ಶ್ರೀ 22ನೇ ಪುಣ್ಯಸ್ಮರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಉಚಿತ ನೇತ್ರ ಚಿಕಿತ್ಸಾ ಹಾಗೂ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀಮಠದಲ್ಲಿ ಪ್ರಾಥಮಿಕ ಹಂತದಿಂದ ಕಾಲೇಜು ಹಂತದವರೆಗೆ ಸುಮಾರು 1500 ವಿದ್ಯಾರ್ಥಿಗಳಿಗೆ ಅನ್ನದಾಸೋಹ, ಅಕ್ಷರ ದಾಸೋಹ ಸೊನ್ನದ ಮಠ ಹೈ-ಕ ಪ್ರದೇಶದ ಎರಡನೇ ಸಿದ್ಧಗಂಗಾ ಮಠವಾಗಿದೆ ಎಂದು ಉದಾಸಿ ಹೇಳಿದರು.
ಪ್ರಯೋಜನ ಪಡೆಯಿರಿ: ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿ, ತಾಲೂಕಿನ ಬಡ ಜನರಿಗೆ ಸಹಾಯಕ್ಕೆಂದೇ ಸೊನ್ನದ ಶ್ರೀಗಳು ಉಚಿತ ಕ್ಯಾನ್ಸರ್ ಮತ್ತು ಉಚಿನ ನೇತ್ರ ಚಿಕಿತ್ಸಾ ಶಿಬಿರ ಆಯೋಜಿಸಿದ್ದಾರೆ. ಗ್ರಾಮೀಣ ಪ್ರದೇಶದ ಜನತೆ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಲು ನರಿಬೋಳ ತಿಳಿಸಿದರು.
ಕಡಗಂಚಿ ಕಟ್ಟಿಮನಿ ಹಿರೇಮಠದ ವೀರಭದ್ರ ಶ್ರೀ, ಸುಲಫಲ ಮಠದ ಶ್ರೀ, ಸೊನ್ನದ ಶಿವಾನಂದ ಶ್ರೀ, ಸಾನಿಧ್ಯ ವಹಿಸಿದ್ದರು. ಅತಿಥಿಗಳಾಗಿ ತಾಪಂ ಅಧ್ಯಕ್ಷ ಮಲ್ಲಣ್ಣಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ್ ಹಾಗೂ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಎಸ್.ಬಿ. ಪವಾಡಶೆಟ್ಟಿ, ಎಂ.ಬಿ. ಪಾಟೀಲ್ ಹರವಾಳ, ಅಲ್ಲಾಭಕ್ಷ ಭಾಗವಾನ್, ವಿಜಯಕುಮಾರ ಬಿರಾದಾರ, ಪ್ರಕಾಶ ಮಾಕಾ, ಗುರುಪಾದ ಬಾಳಿಕಾಯಿ, ಬಾವಾಪಟೇಲ್ ಬಿರಾದಾರ, ಸದಾನಂದ ಪಾಟೀಲ್ ಸೇರಿದಂತೆ ಇತರರು ಭಾಗವಹಿಸಿದ್ದರು. ಸದಾನಂದ ಪಾಟೀಲ್ ಸ್ವಾಗತಿಸಿದರು. ಬಾವಾಪಟೇಲ್ ಬಿರಾದಾರ ನಿರೂಪಿಸಿ ಬಸಯ್ಯ ಶಿವಮಠ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.